1 : ಅಲ್ಲೆಲೂಯ! /
ಸ್ತತಿಸಿರಿ ದೇವರನು ಆತನ
ಪರಿಶುದ್ಧ ಆಲಯದಲಿ /
ಆತನ ಶಕ್ತಿಯನು ಸಾರುವಾ ಆಕಾಶ
ಮಂಡಲದಲಿ
2 : ಸ್ತುತಿಸಿರಿ ಆತನ ಮಹತ್ಕಾರ್ಯಗಳಿಗಾಗಿ /
ಆತನ ಮಹಾಪ್ರಭಾವಕ್ಕೆ ಅನುಗುಣವಾಗಿ
3 : ಆತನನ್ನು ಸ್ತುತಿಸಿರಿ ಕೊಂಬುಗಳನ್ನೂದುತಾ /
ಸ್ವರಮಂಡಲಗಳನು, ಕಿನ್ನರಿಗಳನು
ಬಾರಿಸುತಾ
4 : ಆತನನ್ನು ಸ್ತುತಿಸಿರಿ ತಮಟೆ ಬಡಿಯುತಾ
ಕುಣಿಯುತಾ /
ಆತನನ್ನು ಸ್ತುತಿಸಿರಿ ತಂತಿವಾದ್ಯ ನುಡಿಸುತಾ
ಕೊಳಲೂದುತಾ
5 : ಆತನನ್ನು ಸ್ತುತಿಸಿರಿ ತಾಳದಿಂದ /
ಆತನನ್ನು ಸ್ತುತಿಸಿರಿ ಝಲ್ಲರಿಯಿಂದ
6 : ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ /
ಪ್ರಭುವಿಗೆ ಸ್ತೋತ್ರವಾಗಲಿ ಅಲ್ಲೆಲೂಯ!