1 : ಯೋಗ್ಯನಾರು ಪ್ರಭು ನಿನ್ನ
ಗುಡಾರದಲಿ ಬಿಡಾರಮಾಡಲು? /
ಅರ್ಹನಾರು ನಿನ್ನ ಪವಿತ್ರ ಶಿಖರದಲಿ
ವಾಸವಾಗಿರಲು? //
2 : ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ /
ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ //
3 : ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ /
ಗುರಿಮಾಡನವನು ನೆರೆಹೊರೆಯವರನು
ನಿಂದೆಗೆ //
4 : ಭ್ರಷ್ಟರನು ಧಿಕ್ಕರಿಸುವನು, ಭಕ್ತರನು
ಗೌರವಿಸುವನು /
ನಷ್ಟವಾದರೂ ಕೊಟ್ಟ ಮಾತನು ತಪ್ಪನವನು //
5 : ಕೊಡುವನು ಕಡವನು, ಬಯಸನು ಬಡ್ಡಿಯನು /
ಎಡವರ ಕೇಡಿಗೆ ಪಡೆಯನು ಲಂಚವನು /
ಕದಲನೆಂದಿಗೂ ಈಪರಿ ನಡೆವವನು //