1 : ಪ್ರಭುವಿಗೆ ಸ್ತುತಿಸ್ತೋತ್ರ
ಅಲ್ಲೆಲೂಯ /
ಮನವೇ, ವಂದಿಸು ಆತನನು
ಅಲ್ಲೆಲೂಯ
2 : ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು /
ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು
3 : ನಂಬಬೇಡ ಅಧಿಕಾರಿಯನು /
ನೆಚ್ಚಬೇಡ ನರಮಾನವನನು /
ಉದ್ಧರಿಸಲು ಅಸಮರ್ಥನವನು
4 : ಉಸಿರುಹೋದುದೇ ಮರುಳುತ್ತಾನವನು
ಮಣ್ಣಿಗೆ /
ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ
5 : ಇಸ್ರಯೇಲ ಕುಲದೇವರು ಯಾರಿಗೆ
ಉದ್ಧಾರಕನೋ, ಅವನೇ ಧನ್ಯನು /
ಪ್ರಭುವನು ತನ್ನ ದೇವರೆಂದು ಯಾರು
ನಂಬಿಹನೋ, ಅವನೇ ಧನ್ಯನು
6 : ಭೂಮ್ಯಾಕಾಶ, ಸಾಗರ, ಚರಾಚರಗಳನು
ನಿರ್ಮಿಸಿದವ ಆತನೆ /
ಕೊಟ್ಟ ವಾಗ್ದಾನಗಳನು ತಪ್ಪದೆ
ನೆರವೇರಿಸುವವ ಆತನೆ
7 : ದೊರಕಿಸುವನು ನ್ಯಾಯ ದಲಿತರಿಗೆ /
ಒದಗಿಸುವನು ಆಹಾರ ಹಸಿದವರಿಗೆ /
ನೀಡುವನು ಬಿಡುಗಡೆ ಬಂಧಿತರಿಗೆ
8 : ಕಣ್ಣನ್ನೀಯುವನು ಪ್ರಭು ಕುರುಡರಿಗೆ /
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ /
ಆತನ ಒಲವಿರುವುದು ಸಾಧು ಸಜ್ಜನರಿಗೆ
9 : ರಕ್ಷಿಸುವನು ಪ್ರಭು ಪರದೇಶಿಗಳನು /
ಆದರಿಸುವನು ಅನಾಥರನು, ವಿಧವೆಯರನು /
ನಿರ್ಮೂಲ ಮಾಡುವನು ದುರ್ಜನರ
ಮಾರ್ಗವನು
10 : ಪ್ರಭುವೇ ಅರಸನು ಸದಾಕಾಲಕು /
ಸಿಯೋನ್, ನಿನ್ನ ದೇವನಾಳ್ವನು
ತಲತಲಾಂತರಕು /
ಅಲ್ಲೆಲೂಯ! //