1 : ಮೊರೆಯಿಡುವೆನು ನಾನು
ಪ್ರಭುವಿಗೆ
ಸ್ವರವೆತ್ತಿ ಬೇಡುವೆನು ಆತನಿಗೆ
2 : ಬಿಚ್ಚುವೆನು ಆತನ ಮುಂದೆ ಚಿಂತೆಯ ಕಟ್ಟನು /
ಅರಿಕೆ ಮಾಡುವೆನು ನನ್ನ ಕಷ್ಟ ಸಂಕಟವನು
3 : ಉರುಲೊಡ್ಡಿಹರು ನಾ ನಡೆಯುವ
ಮಾರ್ಗದಲೆ /
ನಾ ಮನಗುಂದಿರೆ, ಪರಿಹಾರವನು ನೀ ಬಲ್ಲೆ
3 : ಪ್ರಭುವೇ, ನನಗಾಶ್ರಯ ನೀನೇ /
ನನ್ನ ಬಾಳಿನ ಸೊತ್ತು ನೀನೇ /
ಕೂಗಿ ನಿನಗೆ ಮೊರೆಯಿಡುತ್ತೇನೆ
4 : ಅಕ್ಕಪಕ್ಕದಲಿ ಸಹಾಯಕರಾರೂ ಇಲ್ಲ /
ಆಶ್ರಯರಹಿತ, ಹಿತಚಿಂತಕರಾರೂ ನನಗಿಲ್ಲ
4 : ಕುಗ್ಗಿ ಹೋಗಿರುವೆ, ನನ್ನ ಕೂಗಿಗೆ ಪ್ರಭು
ಕಿವಿಗೊಡು /
ಬಲಿಷ್ಠ ಹಿಂಸಾತ್ಮಕರಿಂದ ನನ್ನನು
ಪಾರುಮಾಡು
5 : ಪ್ರಭುವೇ, ನನಗಾಶ್ರಯ ನೀನೇ / ನನ್ನ ಬಾಳಿನ ಸೊತ್ತು ನೀನೇ / ಕೂಗಿ ನಿನಗೆ ಮೊರೆಯಿಡುತ್ತೇನೆ
6 : ಕುಗ್ಗಿ ಹೋಗಿರುವೆ, ನನ್ನ ಕೂಗಿಗೆ ಪ್ರಭು
ಕಿವಿಗೊಡು /
ಬಲಿಷ್ಠ ಹಿಂಸಾತ್ಮಕರಿಂದ ನನ್ನನು
ಪಾರುಮಾಡು
7 : ಬಿಡಿಸು ಸೆರೆಯಿಂದೆನ್ನನು, ಭಜಿಸುವೆನು ನಿನ್ನ
ನಾಮವನು /
ಸಜ್ಜನರ ಸಭೆಯಲಿ ಕೊಂಡಾಡುವೆನು ನಿನ್ನ
ಉಪಕಾರವನು //