1 : “ದೇವನಿಲ್ಲ” ಎನ್ನುವವರು ಮನದಲಿ
ದುರ್ಮತಿಗಳು /
ಹೇಯ ಕೃತ್ಯವೆಸಗುವರು ಆ
ಭ್ರಷ್ಟಾಚಾರಿಗಳು /
ಒಳಿತನ್ನು ಮಾಡುವರಾರೂ ಇಲ್ಲ
ಅವರೊಳು //
2 : ಮಾನವರನು ಪ್ರಭು ಸ್ವರ್ಗದಿಂದ
ಸವಿೂಕ್ಷಿಸುತಿಹನು /
ದೇವರನು ಅರಸುವ ಸನ್ಮತಿಗಳಾರೆಂದು
ವೀಕ್ಷಿಸುತಿಹನು /
3 : ದಾರಿತಪ್ಪಿಹೋದ ದ್ರೋಹಿಗಳು ಅವರೆಲ್ಲ /
ಒಳಿತನ್ನು ಮಾಡುವವನಿಲ್ಲ; ಒರ್ವನೂ
ಇಲ್ಲ //
4 : ದುರ್ಜನರೆನ್ನ ಜನರನು ಅನ್ನದಂತೆ
ನುಂಗುವುದೇಕೆ ?/
ಪ್ರಭುವನು ನೆನೆಯದಾ ದುಷ್ಕರ್ಮಿಗಳಿಗೆ
ಅರಿವಿಲ್ಲವೇಕೆ?/
5 : ಸಜ್ಜನರ ಸಂಗದೊಳು ದೇವನಿರಲು /
ದುರ್ಜನರಿದೋ ದಿಗ್ಭ್ರಾಂತರಾಗುವರು //
6 : ಕೆಡಿಸಬಹುದವರು ಬಡಜನರ
ಯೋಜನೆಯನು /
ಪ್ರಭುವಾದರೊ ಅವರಿಗೆ
ಆಶ್ರಯವಾಗಿರುವನು //
7 : ಬರಲಿ ಇಸ್ರಯೇಲಿಗೆ ಜೀವೋದ್ಧಾರ
ಸಿಯೋನಿನಿಂದ /
ತರಲಿ ಪ್ರಭು ತನ್ನ ಪ್ರಜೆಗೆ ಮರಳಿ ಸಿರಿಸಂಪತ್ತ /
ಸಿಗಲಿ ಯಕೋಬ - ಇಸ್ರಯೇಲ ಜನತೆಗೆ
ಹರ್ಷಾನಂದ //