1 : ಹೃದಯಪೂರ್ವಕ ವಂದನೆ
ಪ್ರಭು ನಿನಗೆ /
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
2 : ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ
ಪವಿತ್ರಾಲಯದತ್ತ /
ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ
ಮಹತ್ವದ ಪ್ರಯುಕ್ತ
3 : ಮೊರೆಯಿಟ್ಟಾಗ ದಯಪಾಲಿಸಿದೆ
ಸದುತ್ತರವನು /
ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು
4 : ನಿನ್ನ ಗುಣಗಾನ ಮಾಳ್ಪರು ಪ್ರಭು,
ಭೂರಾಜರೆಲ್ಲರು /
ಏಕೆನೆ, ನೀ ಉಸುರಿದ ನುಡಿಗಳನು
ಕೇಳ್ವರವರೆಲ್ಲರು
5 : ಪ್ರಭುವಿನ ಮಹಿಮೆಯು ಮಹೋನ್ನತ
ಎನ್ನುವರು /
ಆತನ ಮಾರ್ಗಗಳನು ಹಾಡಿ ಹರಸುವರು
6 : ಉನ್ನತನಾದರೂ ಗಮನಿಸುವನು ಪ್ರಭು
ದೀನರನು /
ದೂರದಿಂದಲೇ ಗುರುತಿಸುವನಾತನು
ಗರ್ವಿಷ್ಠರನು
7 : ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ
ಪ್ರಭು, ಪ್ರಾಣವನು /
ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ
ಮುಷ್ಟಿಯನು
8 : ಸಿದ್ಧಿಗೆ ತರುವೆ ನೀ ಪ್ರಭು, ನನ್ನ ಕಾರ್ಯವನು /
ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು /
ಮರೆತುಬಿಡಬೇಡ ನಿನ್ನಯ ಕೈ ಕೃತಿಯನು //