Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಬಾಬಿಲೋನಿನ ನದಿಗಳ ತೀರದಲಿ ಕುಳಿತು / ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು
2 : ಆ ನಾಡಿನಲಿ ಕಿನ್ನರಿಗಳನ್ನೆ ತೂಗುಹಾಕಿದೆವು / ನೀರವಂಜಿ ಮರಗಳಿಗೆ ಅವನ್ನು ನೇತು ಹಾಕಿದೆವು
3 : ಸೆರೆಹಿಡಿದು ಬಂಧಿಸಿದಾ ಜನ ಈ ಪರಿ ಪೀಡಿಸಿದರೆಮ್ಮನು: / “ಹಾಡಿ, ನಮ್ಮ ವಿನೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು”
4 : ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು / ಅನ್ಯನಾಡಿನೊಳು ಅವುಗಳನು ಹಾಡುವುದೆಂತು
5 : ಜೆರುಸಲೇಮ್, ನಾನು ನಿನ್ನ ಮರೆತಲ್ಲಿ / ನನ್ನ ಬಲಹಸ್ತ ಬತ್ತಿಹೋಗಿಬಿಡಲಿ
6 : ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ / ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ / ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ
7 : ನೆನೆಸಿಕೊ ಪ್ರಭು, ಜೆರುಸಲೇಮಿನ ನಾಶನದಿನ ಅವರಾಡಿದ್ದನು:/ “ಕೆಡವಿ ನೆಲಕೆ, ಬುಡಸಹಿತ ಕೆಡವಿ” ಎಂದಾ ಅಧಮ ಎದೋಮ್ಯರನು
8 : ಬಾಬಿಲೋನ್ ನಗರವೇ ಕೇಳು: ಅಳಿವು ಕಾದಿದೆ ನಿನಗೆ / ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ /
9 : ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ //

· © 2017 kannadacatholicbible.org Privacy Policy