Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಪ್ರಭುವೇ ಮನೆಮಠವನು ಕಟ್ಟದ ಹೊರತು / ಅದನು ಕಟ್ಟುವವರ ಪ್ರಯಾಸ ವ್ಯರ್ಥ // ಪ್ರಭುವೇ ಪಟ್ಟಣವನು ಕಟ್ಟಿದ ಹೊರತು / ಕಾವಲುಗಾರನು ಅದನು ಕಾಯುವುದು ವ್ಯರ್ಥ
2 : ಹೊಟ್ಟೆಪಾಡಿಗಾಗಿ ಕಷ್ಟಪಡಲೋಸುಗ / ಹೊತ್ತಿಗೆ ಮುಂಚೆ ಎದ್ದೇಳುವುದು ವ್ಯರ್ಥ // ಹೊತ್ತುವಿೂರಿ ಮಲಗಲು ಹೋಗುವುದೂ ವ್ಯರ್ಥ / ನಿದ್ರೆಯಲು ಪ್ರಭುವೇ ಭಕ್ತರ ಪೋಷಕ
3 : ಪ್ರಭುವಿನಿಂದ ಬಂದ ಸೊತ್ತು - ಪುತ್ರಸಂತಾನ / ಕರುಳ ಕುಡಿಯು ಆತ ನೀಡುವ ಬಹುಮಾನ
4 : ಯೌವನದಲಿ ಹುಟ್ಟಿದ ಮಕ್ಕಳು / ಯೋಧರ ಕೈಲಿರುವ ಬಾಣಗಳು
5 : ಭಾಗ್ಯವಂತನು ಅಂಥ ಬಾಣಗಳಿಂದ ಬತ್ತಳಿಕೆ ತುಂಬಿದವನು / ಸೋತುಹೋಗದೆ ನ್ಯಾಯಲಾಯದೊಳೂ ವೈರಿಯೊಡನೆ ವಾದಿಸುವನು //

· © 2017 kannadacatholicbible.org Privacy Policy