1 : ಸೆರೆಯಿಂದೆಮ್ಮನು ಪ್ರಭು
ಸಿಯೋನಿಗೆ ಮರಳಿಸಿದಾಗ /
ಅದೊಂದು ಕನಸು ಕಂಡಂತಿತ್ತು ನಮಗೆ
ಆವಾಗ
2 : ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ
ಹರ್ಷಗೀತೆ /
“ಎಂಥ ಮಹತ್ಕಾರ್ಯವೆಸಗಿದನಾ ಪ್ರಭು
ಇವರ ಪರತೆ” /
ಇಂತೆಂದು ಆಡಿಕೊಂಡರು ತಂತಮ್ಮೊಳಗೆ
ಅನ್ಯಜನತೆ
3 : ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು
ಖಚಿತ /
ಎಂತಲೆ ನಾವಾನಂದಭರಿತರಾಗುವುದು
ಉಚಿತ
4 : ಬತ್ತಿದ ನದಿಯಲಿ ನೀರು ಮರಳಿ ಉಕ್ಕಿ
ಹರಿವಂತೆ /
ನೀಡು ಸಿರಿ ಸೌಭಾಗ್ಯ, ಹೇ ಪ್ರಭೂ, ನಮಗೆ
ಮತ್ತೆ
5 : ಅಳುತಳುತಾ ಬಿತ್ತುವವರು /
ನಲಿನಲಿಯುತ್ತಾ ಕೊಯ್ಯುವರು
6 : ದುಃಖಿಸುತ್ತಾ ಬೀಜಬಿತ್ತಲು ಹೋದವನು |
ಹರ್ಷಿಸುತ್ತಾ ಕೊಯ್ದು ತರುವನು ತೆನೆಗಳನು ||