1 : ಪ್ರಭುವಿನಲಿ ನಂಬಿಕೆ
ನಿರೀಕ್ಷೆಯಿಂದಿರುವವರು /
ನಿಶ್ಚಲ, ಸುಸ್ಥಿರ, ಗಿರಿ ಸಿಯೋನಿನಂತೆ
ಇರುವರು
2 : ಪರ್ವತಗಳಿರುವಂತೆ ಜೆರುಸಲೇಮಿನ
ಸುತ್ತಮುತ್ತಲು /
ಇಹನು ಪ್ರಭು ಇಂದಿಗೂ ಎಂದಿಗೂ ತನ್ನ
ಜನರ ಸುತ್ತಲು
3 : ಸಜ್ಜನರ ನಾಡಿನಲಿ ಉಳಿಯದು ದುರ್ಜನರ
ದಬ್ಬಾಳಿಕೆ /
ಉಳಿಯಿತಾದರೆ ಸಜ್ಜನರೂ ಕೈಹಚ್ಚಬಹುದು
ಅಕ್ರಮಕೆ
4 : ಒಳಿತನು ಮಾಡು ಪ್ರಭು, ಒಳ್ಳೆಯವರಿಗೆ /
ಒಳ್ಳೆಯವರಿಗೆ ಮೇಣ್ ನೇರ ಮನಸ್ಕರಿಗೆ
5 : ಅಕ್ರಮಿಗಳ ದುರ್ಗತಿ ದುರ್ಮಾರ್ಗಿಗಳಿಗೆ /
ಶುಭವಾಗಲಿ ಪ್ರಭೂ, ಇಸ್ರಯೇಲರಿಗೆ //