1 : ಪ್ರಭು ನಮ್ಮ ಪರ
ಇಲ್ಲದಿದ್ದರೆ ಏನಾಗುತ್ತಿತ್ತು?/
ಇಸ್ರಯೇಲರೇ ಹೇಳಲಿ ಆ ದುರ್ಗತಿಯನ್ನು
ಕುರಿತು
2 : ಪ್ರಭು ನಮ್ಮ ಪರ ಇಲ್ಲದಿದ್ದರೆ
ಏನಾಗುತ್ತಿತ್ತು?/
ಜನರೆಮಗೆ ವಿರುದ್ಧ ಎದ್ದಾಗ
ಏನಾಗುತ್ತಿತ್ತು?
3 : ಉರಿಗೊಳ್ಳುತಿದ್ದರು ಕಡುಗೋಪದಿಂದ
ಖಂಡಿತ /
ನುಂಗಿಬಿಡುತ್ತಿದ್ದರು ನಮ್ಮನ್ನು ಜೀವಸಹಿತ
4 : ಕೊಚ್ಚಿಬಿಡುತ್ತಿತ್ತು ನಮ್ಮನ್ನು ಹುಚ್ಚು ಪ್ರವಾಹ /
ಬಡಿದುಬಿಡುತ್ತಿತ್ತು ನಮ್ಮನ್ನು ರಭಸದಿಂದ
ಪೂರ /
5 :
ಮುಳುಗಿಸಿಬಿಡುತ್ತಿತ್ತು ನಮ್ಮನ್ನು
ಮಹಾಪ್ರಳಯ
6 : ತುತ್ತಾಗಿಸಲಿಲ್ಲ ನಮ್ಮನ್ನು ಶತ್ರುಗಳ ಬಾಯಿಗೆ /
ಕೃತಜ್ಞತಾಪೂರ್ವಕ ಸ್ತೋತ್ರ ಇಗೋ
ಪ್ರಭುವಿಗೆ
7 : ಬೇಟೆಬಲೆಯಿಂದ ಪಾರಾದ
ಪಕ್ಷಿಯಂತಾದೆವು /
ಹರಿದುಹೋಯಿತಿದೊ ಬಲೆಯು,
ಹಾರಿಹೋದೆವು ನಾವು
8 : ನಮಗುದ್ಧಾರ ಪ್ರಭುವಿನ ನಾಮದಲಿ /
ಭೂಮ್ಯಾಕಾಶವನು ಸೃಜಿಸಿದಾತನಲಿ //