1 : ಪರಲೋಕದಲಿ
ಆಸೀನನಾಗಿರುವ ಪ್ರಭುವೆ /
ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ
2 : ದಾಸನ ಕಣ್ಣು ಯಜಮಾನನತ್ತ /
ದಾಸಿಯ ಕಣ್ಣು ಯಜಮಾನಿಯತ್ತ //
ನನ್ನ ಕಣ್ಣು ಸ್ವಾಮಿದೇವನತ್ತ /
ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ
3 : ದಯೆತೋರು ಪ್ರಭು, ನಮಗೆ ದಯೆತೋರು /
ಅತ್ಯಧಿಕವಾಗಿ ನಾವು ತಿರಸ್ಕøತರು
4 : ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ /
ಸುಖಭೋಗಿಗಳು ಮಾಡುವ
ಅಪಹಾಸ್ಯದಿಂದ //