1 : ಸಂಕಟದಲಿ ಮೊರೆಯಿಟ್ಟೆನು
ಪ್ರಭುವಿಗೆ /
ಕೊಟ್ಟನು ಸದುತ್ತರವನು ಆತನೆನಗೆ
2 : ಬಿಡಿಸೆನ್ನನು ಪ್ರಭು ಸುಳ್ಳುಬಾಯಿಂದ /
ವಂಚಿಸುವ ನಾಲಿಗೆ ಉಳ್ಳವರಿಂದ
3 : ವಂಚಕ ನಾಲಿಗೆಯೆ, ನಿನಗೆ ಸಿಕ್ಕುವುದೇನು?/
ನಿನಗೆ ಬಂದೊದಗುವ ಶಿಕ್ಷೆಯಾದರೂ
ಏನು?
4 : ತಟ್ಟುವುವು ಶೂರನ ಹರಿತ ಬಾಣಗಳು /
ಗಿಟ್ಟುವುವು ಉರಿಯುವ ಬೆಂಕಿ ಕೆಂಡಗಳು
5 : ಅಯ್ಯೋ ತಂಗಬೇಕಲ್ಲಾ ಮೇಷೆಕಿನವರ
ಮಧ್ಯದಲಿ //
ಅಕಟಾ ಇರಬೇಕಲ್ಲಾ ಕೇದಾರಿನ
ಪಾಳೆಯಗಳಲಿ
6 : ಶಾಂತಿಗೆ ಶತ್ರುಗಳಾದವರ ಒಡನಾಟ / ಸಾಕು ಆ ದೀರ್ಘ ಬಾಳಿನ ಸಂಕಟ
7 : ಶಾಂತಿಪರ ಮಾತು ನನ್ನದು / ಸಮರದ ಕಾತರ ಅವರದು // ಕಾಯೆಲೊ ದೇವನೆ