1 :
ಅಲ್ಲೆಲೂಯ /
ಪ್ರಭುವಿನ ದಾಸರೇ,
ಸ್ತುತಿಮಾಡಿ /
ಪ್ರಭುವಿನ ನಾಮಸ್ತುತಿಯನು ಮಾಡಿ //
2 : ಪ್ರಭುವಿನ ಸಿರಿನಾಮವು ಪೂಜ್ಯ /
ಇಂದಿಗೂ ಎಂದೆಂದಿಗೂ ಪೂಜ್ಯ //
3 : ಪ್ರಭುವಿನಾ ಸಿರಿನಾಮವು ಸ್ತುತ್ಯ /
ಪೂರ್ವ ಪಶ್ಚಿಮದವರೆಗೂ ಸ್ತುತ್ಯ //
4 : ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ /
ಆತನ ಮಹಿಮೆ ಗಗನಕ್ಕಿಂತಲೂ ಉತ್ಕøಷ್ಟ //
5 : ನಮ್ಮ ಪ್ರಭು ದೇವನಂತೆ ಯಾರು ಸಮರ್ಥ /
6 :
ಇಹಪರಗಳನು ವೀಕ್ಷಿಸಲಾತ ಶಕ್ತ //
7 : ದೀನರನು ಎಬ್ಬಿಸುವನು ಧೂಳಿನಿಂದ /
ಬಡವರನು ಎತ್ತುವನು ತಿಪ್ಪೆಯಿಂದ //
8 : ಕೂರಿಸುವನಾತ ಅವರನು ಅಧಿಪತಿಗಳ ನಡುವೆ /
ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ //
9 : ಬಂಜೆಯಾದವಳನು ಮಕ್ಕಳ
ತಾಯಾಗಿಸುವನು /
ಆನಂದದಿಂದಾಕೆ ಬೆಳಗಿಸುವಳಾ
ಮನೆಯನು //