1 :
ನುಡಿದಿಹನು ಇಂತೆಂದು
ಪ್ರಭು ನನ್ನೊಡೆಯನಿಗೆ /
“ಆಸೀನನಾಗಿರು ನೀನು ನನ್ನ ಬಲಗಡೆಗೆ /
ಹಗೆಗಳನು ನಿನಗೆ
ಕಾಲ್ಮಣೆಯಾಗಿಸುವವರೆಗೆ” //
2 : ಸಿಯೋನಿನ ಹೊರಗು ವಿಸ್ತರಿಸುವನು
ಪ್ರಭು ನಿನ್ನ ರಾಜ್ಯದಾಳಿಕೆಯನು /
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ
ದೊರೆತನ ಮಾಡುವೆ ನೀನು //
3 : ಸೇನೆಯನು ನೀ ಅಣಿಗೊಳಿಸುವ ದಿನದೊಳು /
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು /
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು /
ಉದಯಕಾಲದಿಬ್ಬನಿಯಂತೆ ಇಳಿದು
ಬರುವರು //
4 : “ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ
ನಿರುತ” /
ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ
ಮಾತ //
5 : ಬೆಂಬಲವಾಗಿ ನಿಂತಿಹನು ಪ್ರಭು ನಿನ್ನ
ಹತ್ತಿರದಲೆ /
ಸದೆಬಡಿವನು ಅರಸರನು ತನ್ನ ಪ್ರಕೋಪ
ದಿನದಲೆ //
6 : ನ್ಯಾಯತೀರಿಸುವನು ಪ್ರಭು ಸಕಲ
ಜನಾಂಗಗಳಲಿ /
ಛೇಧಿಸುವನು ಶತ್ರುಗಳ ಶಿರಸನು
ರಣರಂಗದಲಿ /
ತುಂಬಿಸುವನು ಹೆಣಗಳನು
ಎಲ್ಲೆಡೆಗಳಲಿ //
7 : ತೊರೆಯ ನೀರನು ಕುಡಿವನಾ ಒಡೆಯ /
ತಲೆಯೆತ್ತಿ ನಡೆವನು ಗಳಿಸಿ ವಿಜಯ /