1 : ಪ್ರೀತಿನೀತಿಗಳ ಕುರಿತು
ಹಾಡುವೆನು /
ಹೇ ಪ್ರಭೂ, ನಿನ್ನನೆ ಹಾಡಿಹೊಗಳುವೆನು//
2 : ಸನ್ಮಾರ್ಗದಲೇ ನಾ ನಡೆಯುವೆನು /
ನನಗೆಂದು ನೀಡುವೆ ದರ್ಶನವನು? /
ಮನೆಯೊಳಗೂ ಶುದ್ಧಹೃದಯಿ ನಾನು //
3 : ನೀಚಕಾರ್ಯಗಳನು ನಾ ವೀಕ್ಷಿಸಲಾರೆ /
ಅಧರ್ಮಿಗಳ ನಡೆಯನು ನಾ ಸಹಿಸಲಾರೆ /
ಅಂಥವರ ಸಹವಾಸವನು ನಾ ತಾಳಲಾರೆ //
4 : ನನ್ನಬಿಟ್ಟು ತೊಲಗಲಿ ಮೂರ್ಖತನ /
ನನಗೆ ಹತ್ತದೆಯಿರಲಿ ಕೆಟ್ಟತನ //
5 : ಸಂಹರಿಸುವೆನು ನೆರೆಯವನ ಮೇಲೆ ಅಪವಾದ
ಹೊರಿಸುವವನನು /
ಸಹಿಸಲಾರೆ ಸೊಕ್ಕಿದಕಣ್ಣು, ಕೊಬ್ಬಿದ ಮನ
ಉಳ್ಳಂಥವನನು //
6 : ಆರಿಸಿಕೊಳ್ವೆನು ನಾಡಿನ ಸಜ್ಜನರನು /
ಇರಿಸಿಕೊಳ್ವೆನು ನನ್ನೊಡನೆ ವಾಸಿಸಲವರನು /
ಸನ್ಮಾರ್ಗಿಯೆ ನನ್ನ ಸೇವಕನಾಗಿರುವನು //
7 : ಮೋಸಗಾರನು ವಾಸಮಾಡನು ನನ್ನ
ನಿವಾಸದಲಿ /
ಸುಳ್ಳುಗಾರನು ನಿಲ್ಲಲಾರನು ನನ್ನ
ಸಮ್ಮುಖದಲಿ //
8 : ಇಲ್ಲಮಾಡುವೆನು ಕೆಡುಕರನು ಪ್ರಭುವಿನಾ
ನಗರದೊಳಗೆ /
ನಾಶಮಾಡುವೆನು ನಾಡಿನ ದುರುಳರನು
ದಿನದಿನಗಳೊಳಗೆ //