1 : ಬಳಿಕ ಶೂಹ್ಯನಾದ ಬಿಲ್ದದನು
ಹೀಗೆಂದನು:
2 : “ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ
ಪಾತ್ರನು
ಉನ್ನತ ಲೋಕದಲ್ಲಿ ಶಾಂತಿಸಮಾಧಾನವನು
ಸ್ಥಾಪಿಸಿಹನು.
3 : ಲೆಕ್ಕವಿದೆಯೇ ಆತನ ಸೇನೆಗಳಿಗೆ?
ಆತನ ತೇಜಸ್ಸು ಮೂಡದಿರುವುದು ಯಾರಿಗೆ?
4 : ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು
ಸಾಧ್ಯವೆ?
ಸ್ತ್ರೀಯಲ್ಲಿ ಹುಟ್ಟಿದವನು ಪರಿಶುದ್ಧ
ನಾಗಿರುವುದು ಶಕ್ಯವೆ?
5 : ಆತನ ದೃಷ್ಟಿಗೆ ಚಂದ್ರನೂ ಕಾಂತಿಯುತನಲ್ಲ
ನಕ್ಷತ್ರಗಳೂ ನಿರ್ಮಲವಾದವುಗಳಲ್ಲ.
6 : ಇಂತಿರಲು ಹುಳುವಿನಂಥ ನರನು ಏತರವನು?
ಕ್ರಿಮಿಯಂಥ ನರನು ಎಷ್ಟು ಮಾತ್ರದವನು?”