1 : “ಇವೆಲ್ಲವನ್ನು ನನ್ನ ಕಣ್ಣುಗಳು
ಕಂಡಿವೆ.
ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.
2 : ನೀವು ತಿಳಿದಿರುವುದನ್ನು ನಾನೂ ತಿಳಿದವ
ನಿಮಗಿಂತ ನಾನು ಕೀಳೇನೂ ಅಲ್ಲ.
3 : ಸರ್ವಶಕ್ತನೊಡನೆ ಮಾತಾಡಲು ನನಗಿದೆ ಆಸೆ
ದೇವರೊಂದಿಗೆ ವಾದಿಸಲು ನನಗಿದೆ ಅಪೇಕ್ಷೆ.
4 : ನೀವು ಸುಳ್ಳಿಗೆ ಸುಣ್ಣ ಬಳಿಯುವವರು
ನೀವೆಲ್ಲರು ಏತಕ್ಕೂ ಬಾರದ ವೈದ್ಯರು.
5 : ನೀವು ಸುಮ್ಮನಿದ್ದರೆ ಚೆನ್ನ
ಮೌನವೇ ನಿಮಗೆ ಉತ್ತಮ.
6 : ಈಗ ಕೇಳಿ ನನ್ನ ವಾದವನ್ನು
ಆಲಿಸಿರೀಗ ನನ್ನ ತರ್ಕವನ್ನು.
7 : ದೇವರ ಪಕ್ಷವಹಿಸಿ ನೀವು ಅನ್ಯಾಯ
ನುಡಿಯುವಿರೋ?
ಅವರಿಗೋಸ್ಕರ ಕಪಟ ಮಾತಾಡುವಿರೋ?
9 : ದೇವರು ನಿಮ್ಮನ್ನು ಪರಿಶೋಧಿಸಿದರೆ ನಿಮಗೆ
ಒಳಿತೆ?
ಮನುಷ್ಯರಂತೆ ಆತನನ್ನು
ಮೋಸಗೊಳಿಸಲಾದೀತೆ?
10 : ನೀವು ಗುಟ್ಟಾಗಿ ಪಕ್ಷಪಾತಮಾಡಿದರೂ
ಆತ ನಿಮ್ಮನ್ನು ಖಂಡಿಸದೆ ಬಿಡನು.
11 : ಆತನ ಪ್ರತಿಭೆ ನಿಮ್ಮನ್ನು ಹೆದರಿಸದೋ?
ದೈವಭಯವು ನಿಮ್ಮನ್ನು ಆವರಿಸದೋ?
12 : ನಿಮ್ಮ ಸ್ಮøತಿಗಳು ಬೂದಿಯ ಸಾಮತಿಗಳು
ನಿಮ್ಮ ವಾದಗಳು ಮಣ್ಣಿನ ಗೋಡೆಗಳು.
13 : ಸುಮ್ಮನಿರಿ, ನನ್ನನ್ನು ಮಾತಾಡಲು ಬಿಡಿ
ನನ್ನ ಮೇಲೆ ಏನು ಬೇಕಾದರೂ ಬರಲಿ.
14 : ಪ್ರಾಣವನ್ನು ನಾನು ಕಚ್ಚಿಕೊಂಡಿದ್ದೇನೆ ಬಾಯಲಿ
ಜೀವವನ್ನು ನಾನು ಹಿಡಿದುಕೊಂಡಿದ್ದೇನೆ
ಕೈಯಲಿ.
15 : ಇಗೋ, ದೇವರು ಕೊಲ್ಲುವನೆನ್ನನು
ಅದಕ್ಕಾಗಿ ನಾನು ಕಾದಿರುವೆನು.
ಆದರೂ ನನ್ನ ನಡತೆ ಸರಿಯೆಂಬುದನು
ಆತನ ಮುಂದೆಯೆ ರುಜುವಾತುಪಡಿಸುವೆನು.
16 : ಭಕ್ತಿಹೀನನು ಆತನ ಮುಂದೆ ಬರಲಾರ
ನಾನು ಉದ್ದಾರವಾಗುವೆನೆಂಬುದಕ್ಕೆ ಇದೇ
ಆಧಾರ.
17 : ಕೇಳಿ, ನನ್ನ ಮಾತನ್ನು ಲಕ್ಷ್ಯವಿಟ್ಟು
ನನ್ನ ಅರಿಕೆಯನ್ನು ಕಿವಿಗೊಟ್ಟು.
18 : ಇಗೋ ನನ್ನ ಮೊಕದ್ದಮೆಯನ್ನು
ಸಿದ್ಧಗೊಳಿಸಲಾಗಿದೆ
ನಾನು ನಿರ್ದೋಷಿಯೆಂಬ ನಿರ್ಣಯ
ನನಗೆ ಗೊತ್ತೇ ಇದೆ.
19 : ದೇವಾ, ನನ್ನ ಮೇಲೆ ಆಪಾದನೆ ಹೊರಿಸಲು
ಬರುವೆಯಾ?
ಹಾಗಾದರೆ ಮೌನತಾಳಿ ನಾ ಮಾಡುವೆ
ಪ್ರಾಣತ್ಯಾಗ.
20 : ನನ್ನೆರಡು ಕೋರಿಕೆಗಳನ್ನು ಈಡೇರಿಸಯ್ಯಾ
ಆಗ ನಿನ್ನ ದೃಷ್ಟಿಗೆ ನಾನು
ಮರೆಮಾಡಿಕೊಳ್ಳಲಾರೆನಯ್ಯಾ.
21 : ಹಿಂತೆಗೆದುಕೊ ನನ್ನ ಮೇಲೆತ್ತಿರುವ ನಿನ್ನ
ಕೈಗಳನು
ಅಂಜಿಕೆಗೀಡು ಮಾಡದಿರಲಿ ನಿನ್ನ ದಿಗಿಲು
ನನ್ನನು.
22 : ಆ ಬಳಿಕ ನೀನು ಕರೆದರೆ ನಾನು ಉತ್ತರ
ಕೊಡುವೆ
ಇಲ್ಲವೆ, ನಾನು ಮಾತಾಡಿದರೆ ನೀನೆ
ಉತ್ತರಿಸುವೆ.
23 : ನನ್ನ ಅಕ್ರಮಗಳೆಷ್ಟು? ಪಾಪಗಳೆಷ್ಟು?
ನನ್ನ ಪಾಪದೋಷಗಳನ್ನು ತಿಳಿಯಪಡಿಸು.
24 : ನೀನೇಕೆ ನನಗೆ ವಿಮುಖನಾಗಿರುವೆ?
ನನ್ನನ್ನೇಕೆ ಶತ್ರು ಎಂದೆಣಿಸುವೆ?
25 : ಗಾಳಿಗೆ ತೂರುವ ತರಗೆಲೆಯನ್ನು
ಬೆದರಿಸುವೆಯಾ?
ಒಣಗಿದ ಹೊಟ್ಟನ್ನು ಬೆನ್ನಟ್ಟಿ ಹೋಗುವೆಯಾ?
26 : ನನ್ನ ವಿಷಯವಾಗಿ ಕಹಿಯಾದ ತೀರ್ಪನು
ಬರೆದಿರುವೆ
ಯೌವನದ ಪಾಪಪರಿಹಾಮಗಳನು ನನ್ನ ಮೇಲೆ
ಹೊರಿಸಿರುವೆ.
27 : ನನ್ನ ಕಾಲುಗಳಿಗೆ ನೀ ಕೋಳವನ್ನು ತೊಡಿಸಿರುವೆ
ನನ್ನ ನಡತೆಯನು ದಿಟ್ಟಿಸಿ ನೋಡುತ್ತಿರುವೆ
ನನ್ನ ಹೆಜ್ಜೆಹೆಜ್ಜೆಯನು ಲೆಕ್ಕಿಸುತ್ತಿರುವೆ.
28 : ಕೊಳೆತ ಪದಾರ್ಥದಂತೆ,
ನುಸಿಹಿಡಿದ ಬಟ್ಟೆಯಂತೆ
ನಾನು ಕ್ಷಯಿಸಿ ಹೋಗುತ್ತಿರುವೆ.”