Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಇಸ್ರಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿ ಮಾಡಲಾಗಿದೆ. ಈ ಮಾಹಿತಿ ‘ಇಸ್ರಯೇಲಿನ ಅರಸ ಪುಸ್ತಕ’ದಲ್ಲಿ ದಾಖಲಾಗಿದೆ. ಯೆಹೂದ್ಯರು ತಮ್ಮ ಪಾಪಕ್ಕೆ ಶಿP್ವ್ಷಯಾಗಿ ಬಾಬಿಲೋನಿಗೆ ಸೆರೆಯಾಳುಗಳಾಗಿ ಹೋಗಬೇಕಾಯಿತು.
2 : ಪಟ್ಟಣಗಳಲ್ಲಿದ್ದ ತಮ್ಮ ಸೊತ್ತುಗಳಿಗೆ ಹಿಂದಿರುಗಿ ಬಂದವರಲ್ಲಿ ಇಸ್ರಯೇಲಿನ ಜನಸಾಮಾನ್ಯರೂ ಯಾಜಕರೂ ಲೇವಿಯರೂ ದೇವಾಲಯದ ಕೆಲಸದವರೂ ಸೇರಿದ್ದರು.
3 : ಆ ಶೆಬಾದ ರಾಣಿ ಸೊಲೊಮೋನನ ಜ್ಞಾನ, ಅವನು ಕಟ್ಟಿಸಿದ ಅರಮನೆ,
4 : ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿದ್ದ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ ಮತ್ತು ಅವರ ಉಡುಪುಗಳು, ಅವನ ಪಾನಸೇವಕರು, ಅವರ ಉಡುಪುಗಳು ಇವುಗಳನ್ನೆಲ್ಲಾ ನೋಡಿದಳು. ಅಂತೆಯೇ ಅವನು ಸರ್ವೇಶ್ವರನ ಆಲಯದಲ್ಲಿ ಸಮರ್ಪಿಸುತ್ತಿದ್ದ ದಹನ ಬಲಿಗಳನ್ನೂ ಗಮನಿಸಿದಳು.
5 : ಇಮ್ರಿ ಮತ್ತು ಬಾನಿ ಎಂಬವರು ಅವನ ಪೂರ್ವಜರಲ್ಲಿ ಇಬ್ಬರು. ಯೆಹೂದನ ಮಗ ಶೇಲಾಹನ ಸಂತಾನದವರಿಗೆ ಅಸಾಯನು ನಾಯಕ ಹಾಗೂ ಗೋತ್ರದ ಮುಖ್ಯಸ್ಥನಾಗಿದ್ದನು.
6 : ಯೆಹೂದನ ಮಗ ಜೆರಹನ ಸಂತತಿಯವರಿಗೆ ಯೆಯೂವೇಲ್ ನಾಯಕನಾಗಿದ್ದನು.
7 : ಜೆರುಸಲೇಮಿನಲ್ಲಿ ನೆಲೆಸಿದ ಬೆನ್ಯಾಮೀನನ ಗೋತ್ರದವರು: ಸಲ್ಲೂ - ಇವನು ಮೆಷುಲ್ಲಾಮನ ಮಗ ಹೋದವ್ಯನ ಮೊಮ್ಮಗ ಹಾಗೂ ಹಸ್ಸೆನುವಾಹನ ಮರಿಮಗ.
8 : ಇಬ್ನಿಯಾಹ - ಇವನು ಯೆರೋಹಾಮನ ಮಗ. ಏಲಾ - ಇವನು ಶೆಫಟ್ಯನ ಮಗ ರೆಯೂವೇಲನ ಮೊಮ್ಮಗ, ಇಬ್ನೀಯಾಹನ ಮರಿಮಗ.
9 : ಈ ಗೋತ್ರದ ಒಂಬೈನೂರ ಐವತ್ತಾರು ಕುಟುಂಬಗಳು ಅಲ್ಲಿ ನೆಲೆಸಿದ್ದವು. ಮೇಲೆ ಹೇಳಿದವರು ಆಯಾ ಗೋತ್ರಗಳ ಪ್ರಧಾನ ಪುರುಷರಾಗಿದ್ದರು.
10 : ಜೆರುಸಲೇಮಿನಲ್ಲಿ ನೆಲೆಸಿದ ಯಾಜಕರು: ಯೆದಾಯ, ಯೆಹೋಯಾರೀಬ್, ಯಾಕೀನ್, ಹಿಲ್ಕೀಯನ ಮಗ ಅಜರ್ಯ
11 : - ಇವನು ದೇವಾಲಯದ ಪ್ರಮುಖ ಅಧಿಕಾರಿ. ಇವನ ಪೂರ್ವಜರಲ್ಲಿ ಮೆಷುಲ್ಲಾಮ, ಚಾದೋಕ್, ಮೆರಾಯೋತ್ ಮತ್ತು ಅಹೀಚೂಬ ಎಂಬವರು ಇದ್ದರು.
12 : ಯೆಹೋರಾಮನ ಮಗ ಅದಾಯ: ಇವನ ಪೂರ್ವಜರಲ್ಲಿ ಪಶ್ಹೂರ, ಮಲ್ಕೀಯ ಎಂಬವರಿದ್ದರು. ಅದೀಯೋಲನ ಮಗ ಮಾಸ್ಕೆ: ಇವನ ಪೂರ್ವಜರಲ್ಲಿ ಯಹ್ಜೇರ, ಮೆಷುಲ್ಲಾಮ, ಮೆಷಿಲ್ಲೇಮೋತ, ಇಮ್ಮೇರ ಎಂಬವರಿದ್ದರು.
13 : ಗೋತ್ರಗಳ ಮುಖ್ಯಸ್ಥರಾದ ಯಾಜಕರ ಒಟ್ಟು ಸಂಖ್ಯೆ ಒಂದು ಸಾವಿರದ ಏಳನೂರ ಅರವತ್ತು ಮಂದಿ. ದೇವಾಲಯದ ಎಲ್ಲಾ ಕೆಲಸಗಳಲ್ಲಿ ಅವರು ನಿಪುಣರಾಗಿದ್ದರು.
14 : ಜೆರುಸಲೇಮಿನಲ್ಲಿ ನೆಲೆಸಿದ ಲೇವಿಯರು: ಹಷಬ್ಯನ ಮಗ ಶೆಮಾಯ; ಇವನ ಪೂರ್ವಜರಲ್ಲಿ ಅಜ್ರೀಕಾಮ, ಹಷಬ್ಯ ಹಾಗು ಮೆರಾರೀ ಗೋತ್ರದ ಬಕ್ಬಕ್ಕರ್, ಹೆರೆಷ್, ಗಾಲಾಲ್ ಎಂಬವರಿದ್ದರು. ಶೆಮಾಯನ ಮಗ ಓಬದ್ಯ: ಇವನ ಪೂರ್ವಜರಲ್ಲಿ ಗಾಲಾಲ, ಯದೂತೂನ ಎಂಬವರಿದ್ದರು.
15 : ಮೀಕನ ಮಗ ಮತ್ತನ್ಯ : ಇವನ ಪೂರ್ವಜರಲ್ಲಿ ಜಿಕ್ರೀ, ಆಸಾಫ ಎಂಬವರಿದ್ದರು.
16 : ಆಸನ ಮಗನೂ ಎಲ್ಕಾನನ ಮೊಮ್ಮಗನೂ ಆದ ಬೆರೆಕ್ಯ; ನಟೋಫಾತ್ಯರ ಗ್ರಾಮಗಳಲ್ಲಿ ಇವನು ನೆಲೆಸಿದ್ದನು.
17 : ಜೆರುಸಲೇಮಿನಲ್ಲಿ ನೆಲೆಸಿದ ದೇವಾಲಯದ ದ್ವಾರಪಾಲಕರು: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಎಂಬವರು. ಶಲ್ಲೂಮ್ ಅವರ ಮುಖ್ಯಸ್ಥನಾಗಿದ್ದನು.
18 : ಇದುವರೆಗೂ ಶಲ್ಲೂಮನ ಕುಟುಂಬಸ್ಥರು ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿದ್ದಾರೆ. ಇದಕ್ಕೆ ಮೊದಲು ಅವರು ಲೇವಿಯರ ಪಾಳೆಯಗಳ ಕಾವಲುಗಾರರಾಗಿ ಇದ್ದರು.
19 : ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನು ಹಾಗೂ ಕೋರಹನ ಗೋತ್ರದ ಸದಸ್ಯರು, ದೇವದರ್ಶನದ ಗುಡಾರದ ದ್ವಾರವನ್ನು ಕಾಯುವ ಜವಾಬ್ದಾರಿ ವಹಿಸಿಕೊಂಡು ಇದ್ದರು. ಅವರ ಪೂರ್ವಜರು ಸಹ ಸರ್ವೇಶ್ವರನ ಗುಡಾರವನ್ನು ಕಾಯುವವರಾಗಿದ್ದರು.
20 : ಎಲ್ಲಾಜಾರನ ಮಗ ಫೀನೆಹಾಸ ದ್ವಾರಪಾಲಕರ ಮೇಲ್ವಿಚಾರಕನಾಗಿದ್ದನು. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು.
21 : ಅವನು ಈ ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾದುದಲ್ಲದೇ ಅದರ ನಾಯಕನೂ ಆದನು. ಆದರೆ ‘ಮೂವರು ಪ್ರಮುಖ ವೀರರು’ ಎಂಬ ಪಡೆಯವರಷ್ಟು ಪ್ರಸಿದ್ಧನಾಗಲಿಲ್ಲ.
22 : ಒಟ್ಟು ಇನ್ನೂರ ಹನ್ನೆರಡು ಮಂದಿ, ದ್ವಾರಪಾಲಕರಾಗಿ ನೇಮಕಗೊಂಡಿದ್ದರು. ಅವರು ನೆಲೆಸಿದ್ದ ಗ್ರಾಮಗಳಲ್ಲಿ ಅವರ ಹೆಸರುಗಳು ದಾಖಲಾಗಿದ್ದವು. ಈ ಜವಾಬ್ದಾರಿಯ ಸ್ಥಾನಗಳಿಗೆ ಅವರ ಪೂರ್ವಜರನ್ನು ನೇಮಿಸಿದವರು ಅರಸ ದಾವೀದನು ಮತ್ತು ಪ್ರವಾದಿ ಸಮುವೇಲನು.
23 : ಅವರ ವಂಶಜರು ದೇವಾಲಯದ ದ್ವಾರಪಾಲಕರಾಗಿ ಸೇವೆ ಮುಂದುವರೆಸಿಕೊಂಡು ಬಂದರು.
24 : ಉತ್ತರ, ದಕ್ಷಿಣ, ರ್ಪೂ, ಪಶ್ಚಿಮ ದಿಕ್ಕುಗಳಲ್ಲಿ ಒಂದೊಂದು ದ್ವಾರ ಇದ್ದು ಪ್ರತಿಯೊಂದಕ್ಕೂ ಒಬ್ಬೊಬ್ಬ ಪ್ರಮುಖ ದ್ವಾರಪಾಲಕನಿದ್ದನು.
25 : ಈ ಪ್ರಮುಖ ದ್ವಾರಪಾಲಕರಿಗೆ ಗ್ರಾಮಗಳಲ್ಲಿ ನೆಲೆಸಿದ್ದ ಅವರ ಬಂಧುಗಳು ಸಹಾಯಕರಾಗಿದ್ದರು. ಅವರು ಸರದಿಯ ಮೇಲೆ ಏಳೇಳು ದಿವಸ ಬಂದು ಸಹಾಯ ಮಾಡಬೇಕಾಗಿತ್ತು.
26 : ನಾಲ್ಕು ಜನ ಮುಖ್ಯ ದ್ವಾರಪಾಲಕರು ಲೇವಿಯರಾಗಿದ್ದು ಅವರಿಗೆ ಅಂತಿಮ ಜವಾಬ್ದಾರಿ ಕೊಡಲಾಗಿತ್ತು. ದೇವಾಲಯದ ಕೋಣೆಗಳನ್ನು ಹಾಗೂ ಭಂಡಾರಗಳನ್ನು ಅವರು ನೋಡಿಕೊಳ್ಳಬೇಕಾಗಿತ್ತು.
27 : ದೇವಾಲಯವನ್ನು ಕಾಯುವುದೂ ಪ್ರತಿದಿನ ಬೆಳಿಗ್ಗೆ ಬಾಗಿಲುಗಳನ್ನು ತೆರೆಯುವುದೂ ಅವರ ಕರ್ತವ್ಯವಾಗಿತ್ತು. ಆದುದರಿಂದ ಅವರು ದೇವಾಲಯದ ಹತ್ತಿರವೇ ಇರುತ್ತಿದ್ದರು.
28 : ಪೂಜಾಸಾಮಗ್ರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇತರ ಲೇವಿಯರದಾಗಿತ್ತು. ಅವುಗಳನ್ನು ಕೊಡುವಾಗಲೂ ಮರಳಿ ತೆಗೆದುಕೊಳ್ಳುವಾಗಲೂ ಲೆಕ್ಕಿಸುತ್ತಿದ್ದರು.
29 : ಇತರರು ಬೇರೆ ಪವಿತ್ರ ಸಲಕರಣೆಗಳಾದ ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಹಾಗೂ ಪರಿಮಳ ದ್ರವ್ಯಗಳ ಸರಬರಾಜು ಮಾಡುವ ಜವಾಬ್ದಾರಿಕೆ ಹೊಂದಿದ್ದರು.
30 : ಆದರೆ ಪರಿಮಳ ದ್ರವ್ಯಗಳನ್ನು ಮಿಶ್ರ ಮಾಡುವ ಜವಾಬ್ದಾರಿ ಯಾಜಕರದಾಗಿತ್ತು.
31 : ಕೋರಹಿಯ ಗೋತ್ರದ ಶಲ್ಲೂಮನ ಚೊಚ್ಚಲು ಮಗ ಮತ್ತಿತ್ಯ ಎಂಬ ಲೇವಿಯನು ರೊಟ್ಟಿ ಸುಡುವ ಕೆಲಸದ ಮೇಲ್ವಿಚಾರಕನಾಗಿದ್ದನು.
32 : ಕೇಹಾತ್ಯ ಗೋತ್ರದ ಮಿಕ್ಕ ಸದಸ್ಯರು ಪ್ರತೀ ಸಬ್ಬತ್ ದಿನ ದೇವಾಲಯದಲ್ಲಿ ಸಮರ್ಪಿಸಲಾಗುತ್ತಿದ್ದ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಜವಾಬ್ದಾರಿ ಹೊಂದಿದ್ದರು.
33 : ಇನ್ನು ಕೆಲವು ಲೇವಿಯ ಕುಟುಂಬಗಳ ಮೇಲೆ ದೇವಾಲಯದ ಸಂಗೀತದ ಹೊಣೆಯಿತ್ತು. ಈ ಕುಟುಂಬಗಳ ಮುಖ್ಯಸ್ಥರು ದೇವಾಲಯದ ಕಟ್ಟಡಗಳಲ್ಲಿ ವಾಸಿಸುತ್ತಾ, ಹಗಲಿರುಳೂ ಕೆಲಸ ಮಾಡಬೇಕಾಗಿದ್ದರಿಂದ ಬೇರೆ ಕೆಲಸಗಳ ಜವಾಬ್ದಾರಿ ಅವರಿಗಿರಲಿಲ್ಲ.
34 : ಇವರೆಲ್ಲರೂ ತಮ್ಮ ಪೂರ್ವಜರ ಸಾಲಿಗೆ ಸ್ಭೆರಿದಂತೆ ಲೇವಿಗೋತ್ರಗಳ ಮುಖ್ಯಸ್ಥರಾಗಿದ್ದು ಜೆರುಸಲೇಮಿನಲ್ಲೇ ನೆಲೆಸಿದ್ದರು.
35 : ಯೆಯೂವೇಲನು ಗಿಬ್ಯೋನ ಪಟ್ಟಣವನ್ನು ಕಟ್ಟಿ ಅಲ್ಲಿ ನೆಲೆಸಿದನು. ಅವನ ಹೆಂಡತಿ ಮಾಕಳು.
36 : ಅವನ ಚೊಚ್ಚಲು ಮಗ ಅಬ್ದೋನ. ಇತರ ಮಕ್ಕಳ ಹೆಸರು - ಚೂರ್, ಕೀಷ್, ಬಾಳ್, ನೇರ್, ನಾದಾಬ್,
37 : ಗೆದೋರ್,
37 : ಮಿಕ್ಲೋತ್ ಶಿಮಾಮ್‍ನ ತಂದೆ. ಇವರ ವಂಶಜರು ಜೆರುಸಲೇಮಿನಲ್ಲಿ ತಮ್ಮ ಗೋತ್ರದ ಇತರ ಕುಟುಂಬಗಳ ಸಮೀಪದಲ್ಲಿ ನೆಲೆಸಿದ್ದರು.
38 : ಮಿಕ್ಲೋತ್ ಶಿಮಾಮ್‍ನ ತಂದೆ. ಇವರ ವಂಶಜರು ಜೆರುಸಲೇಮಿನಲ್ಲಿ ತಮ್ಮ ಗೋತ್ರದ ಇತರ ಕುಟುಂಬಗಳ ಸಮೀಪದಲ್ಲಿ ನೆಲೆಸಿದ್ದರು.
39 : ನೇರನು ಕೀಷನ ತಂದೆ. ಕೀಷ ಸೌಲನ ತಂದೆ. ಸೌಲನಿಗೆ ನಾಲ್ವರು ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಪ್ಬಾಳ್ ಎಂಬವರು.
40 : ಯೋನಾತಾನ್ ಮೆರೀಬ್ಬಾಳನ ತಂದೆ. ಇವನು ಮೀಕನ ತಂದೆ.
41 : ಮೀಕನಿಗೆ ನಾಲ್ವರು ಮಕ್ಕಳು - ಪೀತೋನ್, ಮೆಲೆಕ್, ತಹ್ರೀಯ ಹಾಗೂ ಅಹಾಜ್ ಎಂಬವರು.
42 : ಅಹಾಜ್ ಯಗ್ರಾಹನ ತಂದೆ. ಇವನು ಅಲೆಮೆತ್, ಅಜ್ಮಾವೆತ್, ಜಿಮ್ರಿ ಎಂಬವರ ತಂದೆ. ಜಿಮ್ರಿ ಮೋಚನ ತಂದೆ.
43 : ಬಿನ್ನ ಮೋಚನ ಮಗ, ಬಿನ್ನನ ಮಗ ರೆಫಾಯ; ಇವನ ಮಗ ಎಲ್ಲಾಸ; ಇವನ ಮಗ ಆಚೇಲ್.
44 : ಆಚೇಲನಿಗೆ ಆರು ಜನ ಮಕ್ಕಳು - ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ, ಓಬದ್ಯ ಹಾಗು ಹಾನಾನ್ ಎಂಬವರು.

· © 2017 kannadacatholicbible.org Privacy Policy