Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಬೆನ್ಯಾಮೀನನಿಗೆ ಐದು ಜನ ಮಕ್ಕಳಿದ್ದರು. ವಯಸ್ಸಿಗನುಗುಣವಾಗಿ ಅವರು ಹೆಸರುಗಳು ಇಂತಿವೆ - ಬೆಳ, ಅಷ್ಬೇಲ್, ಅಹ್ರಹ,
2 : ನೋಹ ಮತ್ತು ರಾಫ.
3 : ಬೆಳನ ಮಕ್ಕಳು - ಅದ್ದಾರ್, ಗೇರ, ಅಬೀಹೂದ್,
4 : ಅಬೀಷೂವ, ನಾಮಾನ್, ಅಹೋಹ, .
5 : ಗೇರ, ಶೆಪೂಫಾನ್, ಹೂರಾಮ್ ಎಂಬವರು.
6 : ಏಹೂದನ ಸಂತಾನದವರು-ನಾಮಾನ್, ಅಹೀಯ, ಗೇರ ಎಂಬವರು. ಅವರು ಗೇಬದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು.
7 : ಆದರೆ ಅವರು ಹೊರಗೆ ಹೋಗುವಂತೆ ಒತ್ತಾಯಿಸಲ್ಪಟ್ಟಾಗ ಮಾನಹತಿಯಲ್ಲಿ ವಾಸಿಸಲು ಹೋದರು. ಹೀಗೆ ಹೊರಡುವಾಗ ಉಚ್ಚ ಮತ್ತು ಅಹೀಹೂದ್‍ನ ತಂದೆ ಗೇರ ಮುಂದಾಳಾಗಿದ್ದರು.
8 : ಶಹರಯಿಮನು ತನ್ನ ಇಬ್ಬರು ಪತ್ನಿಯರಾದ ಹೂಷೀಮ್ ಮತ್ತು ಬಾರ ಎಂಬವರಿಂದ ವಿವಾಹ ವಿಚ್ಛೇದನ ಮಾಡಿಕೊಂಡನು. ಅನಂತರ ಮೋವಾಬ್ ದೇಶದಲ್ಲಿ ವಾಸಿಸಿದನು.
9 : ಅಲ್ಲಿ ಹೋದೆಷ್ ಎಂಬಾಕೆಯನ್ನು ವಿವಾಹವಾಗಿ ಏಳು ಜನ ಮಕ್ಕಳನ್ನು ಪಡೆದನು - ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ, ಮಿರ್ಮ ಎಂದು ಅವರ ಹೆಸರು.
10 : ಅವನ ಎಲ್ಲಾ ಮಕ್ಕಳು ಗೋತ್ರಪ್ರಧಾನರು.
11 : ಹುಷೀಮ್ ಎಂಬುವಳಿಂದ ಅವನಿಗೆ ಅಬೀಟೂಬ್, ಎಲ್ಪಾಲ ಎಂಬಿಬ್ಬರು ಮಕ್ಕಳು ಜನಿಸಿದರು.
12 : ಎಲ್ಪಾಲನಿಗೆ ಮೂರು ಜನ ಮಕ್ಕಳು - ಏಬೆರ್, ಮಿಷ್ಷಾಮ್, ಶೆಮೆದ್ ಎಂಬವರು. ಓನೋ, ಲೋದ್ ಎಂಬ ಪಟ್ಟಣಗಳನ್ನು ಅವುಗಳ ಸುತ್ತುಮುತ್ತಲಿನ ಗ್ರಾಮಗಳನ್ನೂ ಕಟ್ಟಿಸಿದವನು ಶೆಮೆದ್.
13 : ಗತ್ ಪಟ್ಟಣದ ಜನರನ್ನು ಹೊಡೆದೋಡಿಸಿ ಅಲ್ಲಿ ನೆಲೆಸಿದ ಹಾಗು ಅಯ್ಯಾಲೋನ್ ಪಟ್ಟಣದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು - ಬೆರೀಯ, ಮತ್ತು ಶಮ ಎಂಬವರು.
14 : ಬೆರೀಯನ ವಂಶಜರಲ್ಲಿ ಅಹ್ಯೋ, ಶಾಷಕ್, ಯೆರೇಮೋತ್,
15 : ಜೆಬದ್ಯ, ಅರಾದ್, ಎದೆರ್,
16 : ಮಿಕಾಯೇಲ್, ಇಷ್ಪ, ಯೋಹ ಎಂಬವರೂ ಸೇರಿದ್ದರು.
17 : ಎಲ್ಪಾಲನ ಮಕ್ಕಳು - ಜೆಬದ್ಯ, ಮೆಷುಲ್ಲಾಮ್, ಹಿಜ್ಕೇ, ಹೆಬೆರ್,
18 : ಇಷ್ಮೆರೈ, ಇಜ್ಲೀಯ, ಹಾಗೂ ಯೋಬಾಬ್ ಎಂಬವರು.
19 : ಶಿಮ್ಮೀಯ ಮಕ್ಕಳು - ಯಾಕೀಮ್, ಜಿಕ್ರೀ, ಜಬ್ದೀ,
20 : ಎಲೀಗೇನೈ, ಚಿಲ್ಲೆತೈ, ಎಲೀಯೇಲ್,
21 : ಅದಾಯ, ಬೆರಾಯ ಮತ್ತು ಶಿಮ್ರಾತ್ ಎಂಬವರು.
22 : ಶಾಷಕನ ಮಕ್ಕಳು - ಇಷ್ಪಾನ್, ಏಬೆರ್, ಎಲೀಯೇಲ್,
23 : ಅಬ್ದೋನ್, ಜಿಕ್ರಿ, ಹನಾನ್,
24 : ಹನನ್ಯ, ಏಲಾಮ್, ಅನೆತೋತೀಯ,
25 : ಇಫ್ದೆಯಾಹ, ಪೆನೂವೇಲ್ ಎಂಬವರು.
26 : ಯೆರೋಹಾಮನ ಮಕ್ಕಳು - ಶಂಷೆರೈ, ಶೆಹರ್ಯ, ಅತಲ್ಯ,
27 : ಯಾರೆಷ್ಯ, ಏಲೀಯ ಹಾಗೂ ಜಿಕ್ರೀ ಎಂಬವರು.
28 : ಇವರು ಜೆರುಸಲೇಮಿನಲ್ಲಿ ನೆಲೆಸಿದ ಪುರಾತನ ಕುಟುಂಬಗಳ ಮುಖ್ಯಸ್ಥರೂ ಅವರ ಪ್ರಮುಖ ವಂಶಜರೂ ಆಗಿದ್ದಾರೆ.
29 : ಯೆಗೂವೇಲ, ಗಿಬ್ಯೋನ ಪಟ್ಟಣವನ್ನು ಕಟ್ಟಿಸಿ ಅಲ್ಲಿ ನೆಲೆಸಿದನು. ಅವನ ಹೆಂಡತಿ ಮಾಕ ಎಂಬುವಳು.
30 : ಅಬ್ದೋನ ಅವನ ಹಿರಿಯ ಮಗ. ಚೂರ್, ಕೀಷ್, ಬಾಳ್, ನಾದಾಬ್,
31 : ಗೆದೋರ್, ಅಹ್ಯೋ, ಜೆಕೆರ್,
32 : ಮತ್ತು ಶಿಮ್ಮೀಯ ತಂದೆ ಮಿಕ್ಲೋತ್ ಎಂಬವರು ಅವನ ಇತರ ಮಕ್ಕಳು. ಅವರ ವಂಶಜರು ಜೆರುಸಲೇಮಿನಲ್ಲಿ ತಮ್ಮ ಗೋತ್ರದ ಇತರ ಕುಟುಂಬಗಳ ಹತ್ತಿರ ವಾಸಿಸಿದರು.
33 : ಕೀಷನ ತಂದೆ ನೇರ. ಕೀಷ ಅರಸ ಸೌಲನ ತಂದೆ. ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು ಸೌಲನ ಮಕ್ಕಳು.
34 : ಯೋನಾತಾನ್ ಮೆರೀಬ್ಬಾಳನ ತಂದೆ. ಇವನು ಮೀಕನ ತಂದೆ.
35 : ಮೀಕನಿಗೆ ನಾಲ್ವರು ಮಕ್ಕಳು - ಪೀತೋನ್, ಮೆಲಿಕ್, ತರೇಯ, ಆಹಾಜ್ ಎಂಬವರು.
36 : ಆಹಾಜ ಯೆಹೋವಾದ್ಧಾಹನ ತಂದೆ. ಇವನಿಗೆ ಮೂರು ಜನ ಮಕ್ಕಳು - ಅಲೆಮೆತ್, ಅಜ್ಮಾವೆತ್, ಜಿಮ್ರೀ ಎಂಬವರು. ಜಿಮ್ರೀ ಮೋಚನ ತಂದೆ.
37 : ಮೋಚನು ಬಿನ್ನನಿಗೆ, ಬಿನ್ನನು ರಾಫನಿಗೆ, ರಾಫನು ಎಲ್ಲಾಸನಿಗೆ, ಎಲ್ಲಾಸ ಅಚೇಲನಿಗೆ ತಂದೆಯಾಗಿದ್ದರು.
38 : ಅಚೇಲನಿಗೆ ಆರು ಜನ ಮಕ್ಕಳಿದ್ದರು: ಅಜ್ರೀಕಾಮ್, ಓಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ, ಹಾನಾನ್ ಎಂಬವರು.
39 : ಅಚೇಲನ ತಮ್ಮನಾದ ಏಷೆಕನ ಮಕ್ಕಳು - ಮೊದಲನೆಯವನು ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನು ಎಲೀಫೆಲೆಟ್ ಎಂಬವರು.
40 : ಊಲಾಮನ ಮಕ್ಕಳು ಶೂರ ಸೈನಿಕರೂ ಬಿಲ್ಲುವಿದ್ಯೆಯಲ್ಲಿ ಪರಿಣಿತರೂ ಆಗಿದ್ದರು. ಅವನಿಗೆ ಒಟ್ಟು ಒಂದುನೂರ ಐವತ್ತು ಮಂದಿ ಮಕ್ಕಳು ಮೊಮ್ಮಕ್ಕಳೂ ಇದ್ದರು. ಇವರೆಲ್ಲರೂ ಬೆನ್ಯಾಮೀನ್ ಗೋತ್ರದವರು.

· © 2017 kannadacatholicbible.org Privacy Policy