1 : ಇಸ್ಸಾಕಾರನಿಗೆ ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ವರು ಮಕ್ಕಳಿದ್ದರು.
2 : ತೋಲನಿಗೆ ಉಜ್ಜೀ, ರೆಫಾಯ ಯೆರೀಯೇಲ್, ಯಹ್ಮೈ, ಇಬ್ಸಾಮ್, ಸಮುವೇಲ್ ಎಂಬ ಆರು ಜನ ಮಕ್ಕಳಿದ್ದರು. ಇವರು ತೋಲ ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ದ ವೀರರೂ ಆಗಿದ್ದರು. ಅರಸ ದಾವೀದನ ಕಾಲದಲ್ಲಿ ಅವರ ವಂಶಜರ ಸಂಖ್ಯೆ - 22,600.
3 : ಉಜ್ಜೀ ಎಂಬವನಿಗೆ ಇಜ್ಯಹ್ಯಾಹ ಎಂಬ ಮಗನಿದ್ದನು. ಇವನೂ ಇವನ ನಾಲ್ವರು ಮಕ್ಕಳಾದ ಮೀಕಾಯೇಲ್, ಓಬದ್ಯ, ಯೋವೇಲ್, ಇಷ್ಷೀಯ ಎಂಬವರು ಕುಟುಂಬಗಳ ಮುಖ್ಯಸ್ಥ ರಾಗಿದ್ದರು.
4 : ಅರಸನೂ ಜನರೆಲ್ಲರೂ ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿದಾನ ಮಾಡಿದರು.
5 : ಇಸ್ಸಾಕಾರನ ಗೋತ್ರದ ಎಲ್ಲಾ ಕುಟುಂಬಗಳ ಅಧಿಕೃತ ದಾಖಲೆಗಳು - 87,000 ಪುರುಷರು ಸೈನ್ಯದಲ್ಲಿರಲು ಯೋಗ್ಯರಾಗಿದ್ದರೆಂದು ಪಟ್ಟಿ ಮಾಡಿರುತ್ತವೆ.
6 : ಬೆನ್ಯಾಮೀನನಿಗೆ ಮೂವರು ಮಕ್ಕಳು: ಬೆಳ, ಬೆಕೆರ್, ಯದೀಯಯೇಲ್ ಎಂಬವರು.
7 : ಬೆಳನಿಗೆ ಐದು ಜನ ಮಕ್ಕಳು: ಎಚ್ಚೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ ಎಂಬವರು. ಇವರು ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ಯುದ್ಧವೀರರೂ ಆಗಿದ್ದರು. ಇವರ ವಂಶಜರಲ್ಲಿ 22,034 ಜನರು ಸೈನ್ಯದಲ್ಲಿ ಕೆಲಸಮಾಡಲು ಯೋಗ್ಯರಾಗಿದ್ದರು.
8 : ಬೆಕೆರನಿಗೆ ಒಂಬತ್ತು ಜನ ಮಕ್ಕಳು: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋ ವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್, ಆಲಿಮೆತ್ ಎಂಬವರೇ.
9 : ಕುಟುಂಬ ಗಳಿಗನುಗುಣವಾದ ಅಧಿಕೃತ ದಾಖಲೆ - 20,200 ಪುರುಷರು ಅವರ ವಂಶಜರಲ್ಲಿ ಸೈನ್ಯ ಸೇರಲು ಅರ್ಹರಾಗಿದ್ದರೆಂದು ಪಟ್ಟಿಮಾಡಿದೆ.
10 : ಯದೀಯಯೇಲನಿಗೆ ಬಿಲ್ಹಾನ್ ಎಂಬ ಮಗನಿದ್ದ. ಬಿಲ್ಹಾನ್ಗೆ ಏಳುಜನ ಮಕ್ಕಳು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್, ಅಹೀಷೆಹರ್ ಎಂಬವರು.
11 : ಅವರೆಲ್ಲರೂ ತಮ್ಮ ಗೋತ್ರದ ಕುಟುಂಬಗಳ ಮುಖ್ಯಸ್ಥರೂ ಪ್ರಸಿದ್ಧ ಯುದ್ಧವೀರರೂ ಆಗಿದ್ದರು. ಅವರ ವಂಶಜರಲ್ಲಿ 17,200 ಜನರು ಸೈನ್ಯದಲ್ಲಿರಲು ಅರ್ಹತೆ ಪಡೆದಿದ್ದರು.
12 : ಶುಪ್ಪೀಮ್ ಮತ್ತು ಹುಪ್ಪೀಮ್ ಎಂಬವರೂ ಸಹ ಇದೇ ಗೋತ್ರಕ್ಕೆ ಸೇರಿದವರು. ದಾನ್ಗೆ ಹುಶೀಮ ಎಂಬ ಮಗನಿದ್ದನು.
13 : ನಫ್ತಾಲಿಗೆ ನಾಲ್ಕುಜನ ಮಕ್ಕಳು: ಯಹಚಿಯೇಲ್, ಗೂನೀ, ಯೆಚೇರ್, ಶಲ್ಲೂಮ್ ಎಂಬವರು. ಇವರು ಬಿಲ್ಹಳ ಸಂತಾನದವರು.
14 : ಅರಾಮ್ಯ ಉಪಪತ್ನಿಯಿಂದ ಮನಸ್ಸೆಗೆ ಅಷ್ರಿಯೇಲ್, ಮಾಕೀರ, ಎಂಬಿಬ್ಬರು ಮಕ್ಕಳಿದ್ದರು. ಮಾಕೀರ ಗಿಲ್ಯಾದನ ತಂದೆ.
15 : ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮರ ಸೋದರಿಯಾದ ಮಾಕಳನ್ನು ಮದುವೆಯಾದನು. ಚೆಲೋಫಾದ್ ಮಾಕೀರನ ದ್ವಿತೀಯ ಪುತ್ರ. ಅವನಿಗೆ ಕೇವಲ ಹೆಣ್ಣುಮಕ್ಕಳೇ ಇದ್ದರು.
16 : ಮಾಕೀರನ ಹೆಂಡತಿ ಮಾಕ ಇಬ್ಬರು ಮಕ್ಕಳಿಗೆ ಜನ್ಮವಿತ್ತಳು. ಅವರಿಗೆ ಷೆರೆಷ್ ಮತ್ತು ಶೆರೆಷ್ ಎಂದು ಹೆಸರಿಟ್ಟನು. ಷೆರೆಷನಿಗೆ ಊಲಾಮ್, ರೆಕೆಮ್ ಎಂಬಿಬ್ಬರು ಮಕ್ಕಳು.
17 : ಉಲಾಮ್ಗೆ ಬಿದಾನ್ ಎಂಬ ಒಬ್ಬ ಮಗನಿದ್ದ. ಇವರೆಲ್ಲರೂ ಮಾಕೀರನ ಮಗನೂ ಮನಸ್ಸೆಯ ಮೊಮ್ಮಗನೂ ಆದ ಗಿಲ್ಯಾದನ ವಂಶಜರು.
18 : ಗಿಲ್ಯಾದನ ತಂಗಿ ಹಮ್ಮೋಲೆಕೆತಳು ಈಷ್ಹೋದ್, ಅಬೀಯೆಜೆರ್, ಮಹ್ಲ ಎಂಬ ಮೂರು ಮಕ್ಕಳಿಗೆ ಜನ್ಮವಿತ್ತಳು.
19 : ಶೆಮೀದನ ಮಕ್ಕಳು: ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್ ಎಂಬವರು.
20 : ಎಫ್ರಯಿಮನ ಸಂತಾನದವರು: ಶೂತೆಲಹ, ಬೆರೆದ್, ತಹತ್, ಎಲ್ಲಾದ, ತಹತ್,
21 : ಜಾಬಾದ್, ಶೂತೆಲಹ ಎಂಬವರು. ಶೂತೆಲಹನಲ್ಲದೆ ಎಫ್ರಯಿಮನಿಗೆ ಎಜೆರ್, ಎಲ್ಲಾದ್ ಎಂಬಿಬ್ಬರು ಮಕ್ಕಳಿದ್ದರು. ಇವರು ಗತ್ನ ಮೂಲನಿವಾಸಿಗಳ ದನಗಳನ್ನು ಕದಿಯಲು ಪ್ರಯತ್ನಿಸಿದಾಗ ಕೊಲೆಗೀಡಾದರು..
22 : ಇವರ ತಂದೆ ಎಫ್ರಯಿಮ್ ಅನೇಕ ದಿನಗಳವರೆಗೆ ಇವರಿಗಾಗಿ ಶೋಕಿಸಿದನು. ಅವನ ಸಹೋದರರು ಬಂದು ಅವನಿಗೆ ಸಂತಾಪ ಸೂಚಿಸಿದರು.
23 : ಅನಂತರ ಅವನು ತನ್ನ ಹೆಂಡತಿಯನ್ನು ಸಂಗಮಿಸಲು ಆಕೆ ಗರ್ಭಧರಿಸಿ ಗಂಡು ಮಗುವಿಗೆ ಜನ್ಮವಿತ್ತಳು. ತಮ್ಮ ಕುಟುಂಬಕ್ಕೆ ಬಂದಿದ್ದ ಕಂಟಕದ ಜ್ಞಾಪಕಾರ್ಥವಾಗಿ ಅವನಿಗೆ ಬೆರೀಯ ಎಂದು ಹೆಸರಿಟ್ಟರು.
24 : ಎಫ್ರಯಿಮನಿಗೆ ಶೇರ ಎಂಬ ಮಗಳು ಇದ್ದಳು. ಈಕೆ ಮೇಲಿನ ಹಾಗು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನೂ ಉಜ್ಜೇನ್ ಶೇರ ಎಂಬ ಪಟ್ಟಣವನ್ನೂ ಕಟ್ಟಿಸಿದಳು.
25 : ಎಫ್ರಯಿಮನಿಗೆ ರೆಫಹ ಎಂಬ ಇನ್ನೊಬ್ಬ ಮಗನಿದ್ದನು. ಅವನ ವಂಶಜರು: ರೆಷೆಫ್, ತೆಲಹ, ತಹನ್, ಲದ್ದಾನ್,
26 : ಅಮ್ಮೀಹೂದ್, ಎಲೀಷಾಮ,
27 : ನೋನ್,ಯೆಹೋಷುವ ಎಂಬವರೇ.
28 : ಅವರು ವಶಪಡಿಸಿಕೊಂಡು ವಾಸಿಸಿದ ಪ್ರದೇಶ ಬೇತೇಲ್ ಹಾಗು ಅದರ ಸುತ್ತಮುತ್ತಲಿನ ಪ್ರದೇಶಗಳನ್ನೂ ಪೂರ್ವದಲ್ಲಿ ನಾರಾನ್ವರೆಗೆ ಪಶ್ಚಿಮದಲ್ಲಿ ಗೆಜೆರದವರೆಗೆ ಮತ್ತು ಅವುಗಳ ಸುತ್ತಮುತ್ತಲಿನ ಪಟ್ಟಣಗಳನ್ನೂ ಒಳಗೊಂಡಿತ್ತು. ಶೆಕೆಮ್, ಅಯ್ಯಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಅದರಲ್ಲಿ ಸೇರಿದ್ದವು.
29 : ಮನಸ್ಸೆಯ ಸಂತಾನದವರು ಬೇತ್ಷಾನ್, ತಾನಾಕ್, ಮೆಗಿದ್ದೋ, ದೋರ್ ಎಂಬ ಪಟ್ಟಣಗಳನ್ನೂ ಅವುಗಳ ಸುತ್ತ ಮುತ್ತಲಿನ ಗ್ರಾಮಗಳನ್ನೂ ತಮ್ಮ ವಶದಲ್ಲಿಟ್ಟು ಕೊಂಡಿದ್ದರು. ಯಕೋಬನ ಮಗ ಜೋಸೆಫನ ಸಂತತಿಯವರು ಈ ಎಲ್ಲಾ ಪ್ರದೇಶಗಳಲ್ಲಿ ವಾಸಿಸಿದರು.
30 : ಆಶೇರನ ಸಂತಾನದವರು: ಇಮ್ನ, ಇಷ್ವ, ಇಷ್ವೀ, ಬೆರೀಯ ಎಂಬವರು. ಇವರ ತಂಗಿ ಸೆರಹ.
31 : ಬೆರೀಯನ ಮಕ್ಕಳು - ಹೆಬೆರ್, ಬಿರ್ಜೈತ್ ಊರಿನ ಸ್ಥಾಪಕನಾದ ಮಲ್ಕೀಯೇಲ್ ಎಂಬವರು.
32 : ಹೆಬೆರ್ನ ಮಕ್ಕಳು - ಯಫ್ಲೇಟ್, ಶೋಮೇರ್, ಹೋತಾಮ್ ಹಾಗು ಇವರ ತಂಗಿ ಶೂವ,
33 : ಯಫ್ಲೇಟ್ನ ಮಕ್ಕಳು - ಪಾಸಕ್, ಬಿಮ್ಹಾಲ್, ಅಶ್ವಾತ್ ಎಂಬವರು.
34 : ಶೆಮೆರನ ಮಕ್ಕಳು - ಅಹೀರೊಹ್ಗ, ಹುಬ್ಬ ಮತ್ತು ಅರಾಮ್.
35 : ಇವನ ತಮ್ಮ ಹೆಲೆಮನ ಮಕ್ಕಳು - ಜೋಫಹ, ಇಮ್ನ, ಶೇಲಿಷ್ ಮತ್ತು ಅಮಾಲ್.
36 : ಜೋಫಹನ ಮಕ್ಕಳು - ಸೂಹ, ಹರ್ನೆಫೆರ್, ಶೂಗಾಲ್, ಬೇರೀ,
37 : ಇಮ್ರ, ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್ ಹಾಗೂ ಬೇರ.
38 : ಯೆತೆರನ ಮಕ್ಕಳು - ಯೆಫುನ್ನೆ, ಪಿಸ್ಪ ಹಾಗೂ ಅರಾ.
39 : ಉಲ್ಲನ ಮಕ್ಕಳು - ಆರಹ, ಹನ್ನೀಯೇಲ್, ರಿಚ್ಯ ಎಂಬವರು.
40 : ಇವರೆಲ್ಲರೂ ಆಶೇರನ ವಂಶಜರು. ಇವರು ಕುಟುಂಬಗಳ ಮುಖ್ಯಸ್ಥರೂ ಯುದ್ಧವೀರರೂ ಶ್ರೇಷ್ಠನಾಯಕರೂ ಆಗಿದ್ದರು. ಆಶೇರನ ವಂಶಜರಲ್ಲಿ - 26,000 ಪುರುಷರು ಸೈನ್ಯದಲ್ಲಿ ಇರಲು ಅರ್ಹತೆ ಪಡೆದಿದ್ದರು.