Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಯೆಹೂದನ ವಂಶಜರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.
2 : ಶೋಬಾಲ್ ರೆವಾಯನ ತಂದೆ, ಇವನು ಯಹತನ ತಂದೆ. ಇವನು ಚೊರ್ರದಲ್ಲಿ ವಾಸಿಸದ ಜನಾಂಗದ ಮೂಲಪಿತೃಗಳಾದ ಅಹೂಮೈ ಹಾಗು ಲಹದ್ ಎಂಬವರ ತಂದೆ.
3 : ಯಕೋಬನ ಮಕ್ಕಳಲ್ಲಿ ಹಿರಿಯವನಾದ ರೋಬೇನನಿಗೆ ಮಕ್ಕಳಲ್ಲಿ ಹಿರಿಯವನಾದ ರೂಬೇನನಿಗೆ ಹನೋಕ್, ಫಲ್ಲೂ, ಹೆಚ್ರೋನ್, ಕರ್ಮೀ ಎಂಬ ನಾಲ್ಕು ಜನ ಮಕ್ಕಳಿದ್ದರು.
4 : ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣದಿಕ್ಕಿಗೂ ಮೂರು ಪೂರ್ವದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಕಂಚಿನ ಕಡಲು ಅವುಗಳ ಬೆನ್ನಿನ ಮೇಲಿತ್ತು. ಅವುಗಳ ಹಿಂಭಾಗವು ಒಳಗಡೆಗಿತ್ತು.
5 : ತೆಕೋವ ಪಟ್ಟಣವನ್ನು ಸ್ಥಾಪಿಸಿದ ಅಷ್ಹೂರನಿಗೆ ಹೆಲಾಹ, ನಾರಾ ಎಂಬ ಪತ್ನಿಯರು ಇದ್ದರು.
6 : ನಾರಾಳಿಂದ ಅಹ್ಮಜ್ಜಾಮ್, ಹೇಫರ್, ತೇಮಾನಿ, ಅಹಷ್ಪಾರ್ಯ ಎಂಬ ನಾಲ್ವರು ಮಕ್ಕಳು ಜನಿಸಿದರು.
7 : ಅಷ್ಪೂರನಿಗೆ ಹೆಲಾಹ ಎಂಬವಳಿಂದ ಚೆರೆತ್, ಇಚ್ಹಾರ್, ಎತ್ನಾನ್ ಎಂಬ ಗಂಡುಮಕ್ಕಳು ಜನಿಸಿದರು.
8 : ಅನೂಬ್, ಚೊಬೇಬ ಎಂಬವರ ತಂದೆ ಕೋಚ. ಇವನು ಹಾರುಮನ ಮಗ ಅಹರ್ಹೇಲನ ವಂಶಜರ ಮೂಲ ಪುರುಷ.
9 : ಯಾಬೇಚ್ ಎಂಬವನು ಒಬ್ಬನಿದ್ದನು. ಅವನು ತನ್ನ ಕುಟುಂಬದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ. ಅವನು ಹುಟ್ಟುವಾಗ ಪ್ರಸವವೇದನೆ ಅಧಿಕವಾvದ್ದರಿಂದ ಅವನ ತಾಯಿ, ಯಾಬೇಚ ಎಂಬ ಹೆಸರನ್ನು ಅವನಿಗೆ ಕೊಟ್ಟಳು.
10 : ಆದರೆ ಯಾಬೇಚ, “ಸರ್ವೇಶ್ವರಾ, ನನ್ನನ್ನು ಆಶೀರ್ವದಿಸಿರಿ, ನನ್ನ ಭೂಮಿಯನ್ನು ವಿಸ್ತರಿಸಿರಿ. ನನ್ನೊಡನೆ ಇದ್ದು ನನಗೆ ನೋವನ್ನುಂಟುಮಾಡುವ ಎಲ್ಲಾ ದುಷ್ಟಶಕ್ತಿಗಳಿಂದ ನನ್ನನ್ನು ಕಾಪಾಡಿ,” ಎಂದು ಸರ್ವೇಶ್ವರನಿಗೆ ಪ್ರಾರ್ಥಿಸಿದನು. ಸರ್ವೇಶ್ವರ ಅವನ ಪ್ರಾರ್ಥನೆಯನ್ನು ಆಲಿಸಿ, ಕೇಳಿದ್ದನ್ನು ದಯಪಾಲಿಸಿದರು.
11 : ಶೂಹನ ಸಹೋದರ ಕೆಲೂಬನಿಗೆ ಮೆಹೀರ ಎಂಬ ಮಗನಿದ್ದನು. ಮೆಹೀರನು ಎಷ್ಟೋನನ ತಂದೆ;
12 : ಇವನಿಗೆ ಬೇತ್ರಾಫ, ಪಾಸೇಹ, ತೆಹಿನ್ನ ಎಂಬ ಮೂವರು ಮಕ್ಕಳು ಇದ್ದರು. ತೆಹಿನ್ನ ನಾಹಷ್ ಪಟ್ಟಣದ ಸ್ಥಾಪಕ. ಈ ಜನರ ವಂಶಜರು ರೇಕಾ ಎಂಬಲ್ಲಿ ವಾಸಿಸಿದ್ದರು. ,
13 : ಗೋತ್ರದ ಇತರ ಸದಸ್ಯರು ಸೇರಿದ ಏಳು ಕುಲಗಳವರು: ಮೀಕಾಯೇï, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್ ಎಂಬವರು.
14 : ಮೆಯೋನೋತೈ, ಒಫ್ರಾಹನ ತಂದೆ. ಸೆರಾಯ, ಯೋವಾಬನ ತಂದೆ. ಎಲ್ಲಾ ಕುಶಲ ಕೆಲಸಗಾರರು ವಾಸಿಸಿದ ಶಿಲ್ಪಿಗಳ ಕಣಿವೆಯ ಸ್ಥಾಪಕನು ಇವನೇ.
15 : ಯೆಫುನ್ನೆಯ ಮಗ ಕಾಲೇಬನಿಗೆ ಈರು, ಏಲ, ನಾಮ್ ಎಂಬ ಮೂರುಜನ ಮಕ್ಕಳಿದ್ದರು. ಏಲನು ಕೆನಜ್‍ನ ತಂದೆ.
16 : ಯೆಬಲ್ಲೆಲೇಲನ ಮಕ್ಕಳು - ಜೀಫ್, ಜೀಫಾ, ತೀರ್ಯ, ಅಸರೇಲ್ ಎಂಬವರು.
17 : ಎಜ್ರನಿಗೆ ಯೆತೆರ್, ಮೆರೆದ್, ಏಫೇರ್, ಯಾಲೋನ್ ಎಂಬ ನಾಳ್ವರು ಮಕ್ಕಳಿದ್ದರು. ಮೆರೆದನು ಈಜಿಪ್ಟಿನ ಅರಸನ ಮಗಳು ಬಿತ್ಯ ಎಂಬವಳನ್ನು ಮದುವೆಯಾಗಿ ವಿರ್ಯಾಮ್ ಎಂಬ ಮಗಳನ್ನೂ ಶಮ್ಮೈ, ಎಷ್ಟೆಮೋವ ಎಂಬ ಇಬ್ಬರು ಗಂಡುಮಕ್ಕಳನ್ನೂ ಪಡೆದನು. ಇಷ್ಟಹನ ಎಷ್ಟಮೊವ್ ಪಟ್ಟಣವನ್ನು ಕಟ್ಟಿಸಿದನು.
18 : ಮೆರೆದನು ಸಹ ಯಾದ್ ಕುಲದ ಸ್ತ್ರಿಯೊಬ್ಬಳನ್ನು ಮದುವೆಯಾಗಿ ಅವಳಿಂದ ಮೂರು ಜನ ಮಕ್ಕಳನ್ನು ಪಡೆದನು: ಗೆದೋರ್ಯ ಪಟ್ಟಣ ಕಟ್ಟಿಸಿದ ಯೆರೆದ್, ಸೋಕೋವಿ ಪಟ್ಟಣದ ಸ್ಥಾಪಕ ಯೆಕೂತಿಯೇಲ್ ಎಂಬವರೇ ಆ ಮೂರು ಮಂದಿ.
19 : ಹೋದೀಯನು ನಹಮನ ತಂಗಿಯನ್ನು ಮದುವೆಯಾದನು. ಇವರ ಸಂತತಿಯವರು ಕೆಯೀಲದಲ್ಲಿ ವಾಸಿಸಿದ ಗಮ್ರ್ಯ ಗೋತ್ರದ ಮತ್ತು ಎಷ್ಟೆಮೋವಾದಲ್ಲಿ ವಾಸಿಸಿದ ಮಾಕಾತ್ ಗೋತ್ರದ ಪೂರ್ವಜರು.
20 : ಶೀಮೋನನ ಮಕ್ಕಳು - ಅಮ್ನೋನ್, ರಿನ್ನ, ಬಿನ್ಹಾನಾನ್, ತೀಲೋನ್ ಎಂಬವರು. ಇಷ್ಷೀಯ ಮಕ್ಕಳು - ಜೋಹೇತ್, ಬೆನ್ ಜೋಹೇತ್ ಎಂಬವರು.
21 : ಶೇಲನು ಯೆಹೂದನ ಮಕ್ಕಳಲ್ಲಿ ಒಬ್ಬನು. ಅವನ ವಂಶೀಯರಲ್ಲಿ ಕೆಲವರ ಹೆಸರುಗಳು ಇಂತಿವೆ: ಲೇಕಾಹ್ಯರ ಪಟ್ಟಣದ ಸ್ಥಾಪಕ ಏರ್; ಮರೇಷತ್‍ನ ಸ್ಥಾಪಕ ಲದ್ದ; ಬೇತೆಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳು;
22 : ಯೊಕೀಮನು ಹಾಗು ಕೋಜೇಬ ಪಟ್ಟಣಗಳ ನಿವಾಸಿಗಳು; ಮೋವಾಬ್ಯರ ಸ್ತ್ರೀಯರನ್ನು ಮದುವೆಯಾಗಿ ಬೆತ್ಲೆಹೇಮಿನಲ್ಲಿ ನೆಲೆಸಿದ ಯೋವಾಷ ಹಾಗು ಸಾರಾಫ. (ಈ ಸಂಪ್ರದಾಯಗಳು ಬಹಳ ಪುರಾತನವಾದವು).
23 : ಅವರು ಅರಸನ ಸೇವೆಯಲ್ಲಿ ಕುಂಬಾರರಾಗಿದ್ದು ನೆಟಾಯಿಮ್ ಮತ್ತು ಗೆದೇರ ಪಟ್ಟಣಗಳಲ್ಲಿ ವಾಸಿಸಿದ್ದರು.
24 : ಸಿಮೆಯೋನನಿಗೆ ನೆಮೂವೇಲ್, ಯಾಮೀನ್, ಯಾರೀದ್, ಜೆರಹ, ಸೌಲ ಎಂಬ ಐವರು ಮಕ್ಕಳಿದ್ದರು.
25 : ಸೌಲನ ಮಗ ಶಲ್ಲುಮ್, ಮಿಬ್ಸಾಮ್ ಅವನ ಮೊಮ್ಮಗ, ಮಿಷ್ಮ ಅವನ ಮರಿಮಗ.
26 : ಅನಂತರ ಮಿಷ್ಮಾನನಿಂದ ಹಮ್ಮೂವೇಲ್, ಜಕ್ಕೂರ್, ಶಿಮ್ಮೀ ಎಂಬವರ ಮುಖಾಂತರ ಈ ವಂಶಾವಳಿ ಮುಂದುವರಿಯಿತು.
27 : ಶಿಮ್ಮಿಗೆ ಹದಿನಾರು ಜನ ಗಂಡು ಮಕ್ಕಳೂ ಆರುಜನ ಹೆಣ್ಣುಮಕ್ಕಳೂ ಇದ್ದರು. ಆದರೆ ಅವನ ಸಹೋದರರಿಗೆ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿದ್ದುದರಿಂದ ಯೆಹೂದ ಕುಲದಷ್ಟು ಸಿಮೆಯೋನನ ಕುಲ ಬೆಳೆಯಲಿಲ್ಲ.
28 : ಅರಸ ದಾವೀದನ ಕಾಲದವರೆಗೆ ಸಿಮೆಯೋನನ ವಂಶಜರು ವಾಸಿಸಿದ ಪಟ್ಟಣಗಳು ಇವು: ಬೇರ್ಷೆಬ, ಮೋಲಾದ, ಹಚರ್ ಷೂವಾಲ್,
29 : ಬಿಲ್ಹ, ಎಚೆಮ್, ತೋಲಾದ್,
30 : ಬೆತೂವೇಲ್, ಹೊರ್ಮ, ಚಿಕ್ಲಗ್,
31 : ಬೇತ್‍ಮರ್ಕಾಬೋತ್, ಹಚರ್‍ಸೂಸೀಮ್, ಬೇತ್‍ಬಿರೀ, ಶಾರಯಿಮ್.
32 : ಅವರು ಇನ್ನೂ ಬೇರೆ ಐದು ಸ್ಥಳಗಳಲ್ಲಿ ಅಂದರೆ ಏಟಾಮ್, ಅಯಿನ್, ರಿಮ್ಮೋನ್, ತೋಕೆನ್, ಆಷಾನ್ ಹಾಗು
33 : ಅವುಗಳ ಸುತ್ತಲಿನ ಗ್ರಾಮಗಳಲ್ಲಿ ಬಾಲ್ ಪಟ್ಟಣದವರೆಗೆ ವಾಸಿಸಿದರು. ಇವು, ಅವರು ತಮ್ಮ ಕುಟುಂಬಗಳ ಮತ್ತು ತಾವು ವಾಸಿಸಿದ ಸ್ಥಳಗಳ ಬಗ್ಗೆ ಇಟ್ಟ ದಾಖಲೆಗಳಾಗಿವೆ.
34 : ತಮ್ಮ ತಮ್ಮ ಗೋತ್ರಗಳಲ್ಲಿ ಇವರು ಪ್ರಮುಖರಾಗಿದ್ದರು: ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗ ಯೋಷ,
35 : ಯೋವೇಲ್, ಯೊಷಿಬ್ಯನ ಮಗನೂ ಸೆರಾಯನ ಮೊಮ್ಮಗನೂ ಅಸಿಯೇಲನ ಮರಿಮಗನೂ ಆದ ಯೇಹೂ,
36 : ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯ,
37 : ಶಮಾಯನ ಮಗ ಶಿಮ್ರಿಯಿಂದ ಹುಟ್ಟಿದ ಯೆದಾಯನ ಮರಿಮಗನೂ ಅಲ್ಲೋನನ ಮೊಮ್ಮಗನೂ ಶಿಪ್ಫಿಯ ಮಗನೂ ಆದ ಜೀಜ.
38 : ಅವರ ಕುಟುಂಬಗಳು ಬೆಳೆಯುತ್ತಾ ಹೋದವು.
39 : ಆದುದರಿಂದ ಅವರು ಪಶ್ಚಿಮ ದಿಕ್ಕಿನ ಕಡೆಗೆ ಗೆದೋರ್‍ವರೆಗೆ ಪಸರಿಸಿದರು. ಆ ಪಟ್ಟಣದ ಪೂರ್ವದಿಕ್ಕಿನಲ್ಲಿರುವ ಸ್ಥಳಗಳಲ್ಲಿ ತಮ್ಮ ಕುರಿಗಳನ್ನು ಮೇಯಿಸುತ್ತಿದ್ದರು.
40 : ಅಲ್ಲಿಯ ವಿಶಾಲ ಪ್ರದೇಶದಲ್ಲಿ ಸುಖಸಮೃದ್ಧಿಯುಳ್ಳ ಫಲವತ್ತಾದ ಹಸಿರುಗಾವಲು ಭೂಮಿ ಅವರಿಗೆ ದೊರೆಯಿತು. ಇವರಿಗಿಂತ ಮೊದಲು ಅಲ್ಲಿ ಹಾಮ್ಯರ್ ಜನಾಂಗದವರು ನೆಲೆಸಿದ್ದರು.
41 : ಯೆಹೂದದ ಅರಸ ಹಿಜ್ಕೀಯನ ಕಾಲದಲ್ಲಿ ಮೇಲೆ ನಮೂದಿಸಿದ ಪುರುಷರು ಅಲ್ಲಿ ವಾಸಿಸುತ್ತಿದ್ದ ಹಾಮ್ಯರನ್ನೂ ಮೆಗೂನ್ಯರನ್ನೂ ಜಯಿಸಿ ಎಲ್ಲರನ್ನೂ ನಿರ್ನಾಮಮಾಡಿದರು. ತಮ್ಮ ಆಡುಕುರಿಗಳಿಗಾಗಿ ಧಾರಾಳವಾಗಿ ಹುಲ್ಲುಗಾವಲುಗಳಿದ್ದುದರಿಂದ ಅಲ್ಲಿಯೇ ಸ್ಥಿರವಾಗಿ ನೆಲೆಸಿದರು.
42 : ಸಿಮೆಯೋನನ ಕುಲದ ಇತರ ಐದುನೂರು ಜನ ಸದಸ್ಯರು ಸೇಯೀರ್ ಬೆಟ್ಟ ಪ್ರದೇಶದ ಮೇಲೆ ದಾಳಿಮಾಡಿದರು. ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ, ಉಜ್ಜೀಯೇಲ್ ಎಂಬವರು ಅವರ ಮುಖ್ಯಸ್ಥರು.
43 : ಅಲ್ಲಿ ಅವರು, ಅಳಿದುಳಿದಿದ್ದ ಅಮಾಲೇಕ್ಯರನ್ನು ಸಂಹರಿಸಿ ತಾವೇ ಅಲ್ಲಿ ನೆಲೆಸಿದರು.

· © 2017 kannadacatholicbible.org Privacy Policy