1 : ದಾವೀದನು ಹೆಬ್ರೋನಿನಲ್ಲಿದ್ದಾಗ ಅವನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು ಇವು:
ಅಮ್ನೋನ - ಜೆಸ್ರೀಲಿನ ಅಹೀನೋಮ ಇವನ ತಾಯಿ. ದಾನಿಯೇಲ - ಕರ್ಮೇಲಿನ ಆಬೀಗೈಲಳು ಇವನ ತಾಯಿ.
2 : ಅಬ್ಷಾಲೋಮ - ಗೆಷೂರಿನ ಅರಸ ತಲ್ಮೈಯ ಮಗಳು ಮಾಕ ಇವನ ತಾಯಿ. ಅದೋನಿಯ -ಹಗ್ಗೀತ್ ಇವನ ತಾಯಿ.
3 : ಶೆಫಟ್ಯ - ಅಬೀಟಲಳು ಇವನ ತಾಯಿ. ಇತ್ರಾಮ - ಎಗ್ಲಳು ಇವನ ತಾಯಿ.
4 : ಏತಾಮನಿಗೆ ಇಜ್ರೆಯೇಲ್, ಇಷ್ಮ, ಇಬ್ಬಾಷ್ ಎಂಬ ಮೂರು ಜನ ಗಂಡುಮಕ್ಕಳೂ ಹಚೆಲೆಲ್ ಪೋನೀ ಎಂಬ ಮಗಳೂ ಇದ್ದರು. ಪೆನೂವೇಲ್, ಗೆದೋರ್ ಪಟ್ಟಣವನ್ನೂ ಏಜೆರ್, ಹುಷಾ ಪಟ್ಟಣವನ್ನೂ ಸ್ಥಾಪಿಸಿದರು.
5 : ಅಲ್ಲಿ ಅವನಿಗೆ ಅನೇಕ ಗಂಡುಮಕ್ಕಳು ಹುಟ್ಟಿದರು.
ಚಾವೀದನ ಹೆಂಡತಿ ಬತ್ಷೂವ ಅಮ್ಮೀಯೇಲನ ಮಗಳು. ಆಕೆ - ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡುಮಕ್ಕಳಿಗೆ ಜನ್ಮವಿತ್ತಳು.
6 : ಅವನಿಗೆ ಇನ್ನೂ ಒಂಬತ್ತು ಜನ ಗಂಡು ಮಕ್ಕಳಿದ್ದರು: ಇಬ್ಹಾರ್, ಎಲೀಷಾಮ, ಎಲೀಫೆಲೆಟ್,
7 : ನೊಗ, ನೆಫೆಗ್, ಯಾಫೀಯ
8 : ಎಲೀಷಾಮ, ಎಲ್ಯಾದ, ಎಲೀಫೆಲೆಟ್ ಎಂಬವರೇ.
9 : ಇವರಲ್ಲದೆ ದಾವೀದನಿಗೆ ಅವನ ಉಪಪತ್ನಿಯರಿಂದ ಗಂಡುಮಕ್ಕಳಿದ್ದರು; ತಾಮಾರ್ ಎಂಬ ಹೆಣ್ಣುಮಗಳೂ ಇದ್ದಳು.
10 : ಸೊಲೊಮೋನನ ವಂಶದಲ್ಲಿ ಜನಿಸಿದವರ ಹೆಸರುಗಳು ಇಂತಿವೆ: ಸೊಲೊಮೋನ, ರೆಹಬ್ಬಾಮ, ಅಬೀಯ, ಆಸ, ಯೆಹೋಷಾಫಾಟ್,
11 : ಯೆಹೋರಾಮ್, ಅಹಜ್ಯ, ಯೆಹೋವಾಷ್,
12 : ಅಮಚ್ಯ, ಅಜರ್ಯ, ಯೋತಾಮ್,
13 : ಅಹಾಜ್, ಹಿಜ್ಕೀಯ, ಮನಸ್ಸೆ,
14 : ಅಮೋನ್ ಹಾಗು ಯೋಷೀಯ
15 : ಯೋಷೀಯನಿಗೆ ನಾಲ್ಕು ಜನಮಕ್ಕಳು: ಯೋಹಾನಾನ್, ಯೆಹೋಯಾಕೀಮ್, ಚಿದ್ಕೀಯ ಮತ್ತು ಶಲ್ಲೂಮ್.
16 : ಯೆಹೋಯಾಕೀಮನಿಗೆ ಯೆಕೊನ್ಯ ಮತ್ತು ಚಿದ್ಕೀಯ ಎಂಬಿಬ್ಬರು ಮಕ್ಕಳಿದ್ದರು.
17 : ಬಾಬಿಲೋನಿಯರಿಂದ ಸೆರೆಯಾಳಾಗಿ ಒಯ್ಯಲ್ಪಟ್ಟ ಅರಸ ಯೆಕೊನ್ಯನ ವಂಶಜರು ಇವರು: ಯೆಕೊನ್ಯನಿಗೆ ಏಳುಜನ ಗಂಡು ಮಕ್ಕಳು: ಶೆಯಲ್ತೀಯೇಲ್,
18 : ಮಲ್ಕೀರಾಮ್, ಪೆದಾಯ, ಶೆನಚ್ಚರ್, ಯೆಕಮ್ಯ, ಹೋಷಾಮ, ನೆಬದ್ಯ ಎಂಬವರು.
19 : ಪೆದಾಯನಿಗೆ ಜೆರುಬ್ಬಾ ಬೆಲ್ ಮತ್ತು ಶಿಮ್ಮೀ ಎಂಬಿಬ್ಬರು ಮಕ್ಕಳಿದ್ದರು. ಜೆರುಬ್ಬಾಬೆಲನಿಗೆ ಮೆಷುಲ್ಲಾಮ್, ಹನನ್ಯ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಶೆಲೋಮೀತ್ ಎಂಬ ಮಗಳೂ ಇದ್ದಳು.
20 : ಇವರಲ್ಲದೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ, ಯೂಷಬ್ಹೆಸೆದ್ ಎಂಬ ಐವರು ಗಂಡು ಮಕ್ಕಳು ಅವನಿಗಿದ್ದರು.
21 : ಹನನ್ಯನ ಇಬ್ಬರು ಮಕ್ಕಳು: ಪೆಲಟ್ಯ ಮತ್ತು ಯೆಶಾಯ ಎಂಬವರು. ಯೆಶಾಯ ರೆಫಾಯನ ತಂದೆ, ಇವನು ಅರ್ನಾನನ ತಂದೆ, ಇವನು ಓಬದ್ಯನ ತಂದೆ, ಇವನು ಶೆಕನ್ಯನ ತಂದೆ.
22 : ಶೆಕನ್ಯನಿಗೆ ಶೆಮಾಯ ಎಂಗ ಮಗನೂ ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶಾಷಾಟ್ ಎಂಬ ಐದು ಜನ ಮೊಮ್ಮಕ್ಕಳೂ ಇದ್ದರು.
23 : ನೆಯರ್ಯನಿಗೆ ಎಲ್ಯೋಗೇನೈ, ಹಿಜ್ಕೀಯ, ಅಜ್ರೀಕಾಮ್ ಎಂಬ ಮೂವರು ಮಕ್ಕಳಿದ್ದರು.
24 : ಎಲ್ಯೋಗೇನೈಯ ಏಳು ಜನ ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬವರು.