Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ದಾವೀದನು ಇಸ್ರಯೇಲರ ಎಲ್ಲ ಪದಾಧಿಕಾರಿಗಳನ್ನು ಅಂದರೆ, ಕುಲ ಅಧ್ಯಕ್ಷರುಗಳು, ಅರಸನ ಸೇವೆಮಾಡುತ್ತಿದ್ದ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ದನಕುರಿ ಮೊದಲಾದ ಸೊತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ರಣವೀರರು ಹೀಗೆ ಎಲ್ಲ ಅಧಿಕಾರಿಗಳನ್ನು ಜೆರುಸಲೇಮಿಗೆ ಕರೆಸಿದನು.
2 : ಅವರು ಕೂಡಿ ಬಂದಾಗ ಅರಸ ದಾವೀದನು ಎದ್ದು ನಿಂತು ಅವರಿಗೆ, “ನನ್ನ ಸಹೋದರರೇ, ಪ್ರಜೆಗಳೇ, ಕೇಳಿ; ಸರ್ವೇಶ್ವರನ ನಿಬಂಧನ ಮಂಜೂಷಕ್ಕಾಗಿ ಹಾಗೂ ನಮ್ಮ ದೇವರ ಪಾದಪೀಠಕ್ಕಾಗಿ ಆಲಯವನ್ನು ಕಟ್ಟಿಸಬೇಕೆಂದು ಮನಸ್ಸುಮಾಡಿ ಎಲ್ಲವನ್ನೂ ಸಿದ್ಧಪಡಿಸಿದೆ.
3 : ಅವನು ಬೆನ್‍ಹಿನ್ನೋಮ್ ಎಂಬ ಕಣಿವೆಯಲ್ಲಿ ಧೂಪ ಹಾಕಿಸಿದ್ದಲ್ಲದೆ ಸರ್ವೇಶ್ವರಸ್ವಾಮಿ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಜನಾಂಗಗಳ ಅಸಹ್ಯ ಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಬಲಿಯಗ್ನಿಪರೀಕ್ಷೆಗೆ ಗುರಿಪಡಿಸಿದ್ದನು.
4 : “ಇಸ್ರಯೇಲ್ ದೇವರಾದ ಸರ್ವೇಶ್ವರ ನನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಯೇಲರ ಅರಸನಾಗಿರುವುದಕ್ಕೆ ಆರಿಸಿಕೊಂಡರು; ಯೆಹೂದಕುಲ ರಾಜಕುಲವಾಗಬೇಕೆಂದು ನೇಮಿಸಿ ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡರು. ನನ್ನ ತಂದೆಯ ಎಲ್ಲ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ, ಇಸ್ರಯೇಲರೆಲ್ಲರ ಅರಸನನ್ನಾಗಿ ಮಾಡಿದರು.
5 : ಈ ಬೆಳ್ಳಿಬಂಗಾರಗಳಿಂದ ಆಲಯದ ಗೋಡೆಗಳನ್ನು ಹೊದಿಸಬೇಕು, ಅಕ್ಕಸಾಲಿU್ಪರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ಉದಾರಹಸ್ತದಿಂದ ಸರ್ವೇಶ್ವರನಿಗಾಗಿ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆ?” ಎಂದು ನೆರೆದ ಸಭೆಯನ್ನು ಕೇಳಿದನು.
6 : ‘ನಿನ್ನ ಮಗ ಸೊಲೊಮೋನನೇ ನಿನ್ನ ಆಲಯವನ್ನೂ ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿ ಇರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ; ನಾನು ಅವನಿಗೆ ತಂದೆಯಾಗಿ ಇರುವೆನು.
7 : ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಗೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು’ ಎಂದು ಅವರು ನನಗೆ ಹೇಳಿದ್ದಾರೆ.
8 : “ನಿಮ್ಮ ದೇವರಾದ ಸರ್ವೇಶ್ವರನ ಎಲ್ಲ ಆಜ್ಞೆಗಳನ್ನು ಧ್ಯಾನಿಸಿ ಕೈಗೊಳ್ಳಬೇಕೆಂದು ಸರ್ವೇಶ್ವರನ ಸಮಾಜವಾದ ಸಮಸ್ತ ಇಸ್ರಯೇಲರ ಮುಂದೆ, ನಮ್ಮ ದೇವರಿಗೆ ಕೇಳಿಸುವಂತೆ, ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ನಾಡು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸೊತ್ತಾಗಿರುವುದು.
9 : “ನನ್ನ ಮಗ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಪೂರ್ಣ ಹೃದಯದಿಂದ ಹಾಗೂ ಮನಸ್ಸಂತೋಷದಿಂದ ಅವರೊಬ್ಬರಿಗೇ ಸೇವೆ ಸಲ್ಲಿಸು. ಸರ್ವೇಶ್ವರನು ಎಲ್ಲಾ ಹೃದಯಗಳನ್ನು ಶೋಧಿಸುವವರೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವರೂ ಆಗಿದ್ದಾರೆ. ನೀನು ಅವರನ್ನು ಅರಸಿದರೆ ಅವರು ನಿನಗೆ ಸಿಗುವರು; ಅವರನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವರು.
10 : ಆದುದರಿಂದ ಎಚ್ಚರಿಕೆ! ಸರ್ವೇಶ್ವರ ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ; ಧೈರ್ಯದಿಂದ ಕೆಲಸಕ್ಕೆ ಕೈಹಚ್ಚು,” ಎಂದನು.
11 : ತರುವಾಯ ದಾವೀದನು ತನ್ನ ಮಗ ಸೊಲೊಮೋನನಿಗೆ ದೇವಾಲಯದ ಮಂಟಪ, ಉಗ್ರಾಣಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನಮಂದಿರ, ಇವುಗಳ ನಕ್ಷೆಯನ್ನು ಕೊಟ್ಟನು. ಸರ್ವೇಶ್ವರನ ಆಲಯದ ಅಂಗಳಗಳು,
12 : ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳ ಭಂಡಾರಗಳು ಇವುಗಳ ವಿಷಯವಾಗಿ ವಿವರಿಸಿದನು.
13 : ಯಾಜಕರ ಮತ್ತು ಲೇವಿಯರ ವರ್ಗಗಳು, ಸರ್ವೇಶ್ವರನ ಆಲಯದಲ್ಲಿ ನಡೆಯತಕ್ಕ ಎಲ್ಲಾ ಆರಾಧನೆ,
14 : ಯೋಧರು ಇದನ್ನು ಕೇಳಿ ಸೆರೆಯವರನ್ನೂ ಕೊಳ್ಳೆಯನ್ನೂ ಅಧಿಪತಿಗಳ ಮತ್ತು ಸಮೂಹದವರ ಮುಂದೆಯೇ ಬಿಟ್ಟುಬಿಟ್ಟರು.
14 : ಇದಲ್ಲದೆ, ಅಹಾಜನು ದೇವಾಲಯದ ಸಾಮಗ್ರಿಗಳನ್ನು ಕೂಡಿಸಿ ಅವುಗಳನ್ನು ಚೂರುಚೂರು ಮಾಡಿಬಿಟ್ಟನು; ಸರ್ವೇಶ್ವರನ ಆಲಯದ ಬಾಗಿಲುಗಳನ್ನು ಮುಚ್ಚಿ ಜೆರುಸಲೇಮಿನ ಪ್ರತಿಯೊಂದು ಮೂಲೆಯಲ್ಲೂ ಯಜ್ಞವೇದಿಗಳನ್ನು ಕಟ್ಟಿಸಿದನು.
15 : ಇದಲ್ಲದೆ, ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲ ಸಾಮಾನುಗಳ ಬೆಳ್ಳಿ, ಬಂಗಾರದ ತೂಕ ಅಂದರೆ, ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದಿಪಸ್ತಂಭದ ಮತ್ತು ಅದರ ಹಣತೆಗಳ ತೂಕ,
16 : ಮೀಸಲು ರೊಟ್ಟಿಗಳನ್ನಿಡುವ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,
17 : ಚೊಕ್ಕ ಬಂಗಾರದ ಮುಳ್ಳು, ಬೋಗುಣಿ, ಹೂಜಿಗಳ ಮತ್ತು ಬೆಳ್ಳಿಬಂಗಾರದ ಆಯಾಪಾತ್ರೆಗಳ ತೂಕ,
18 : ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕಬಂಗಾರದ ತೂಕ ಎಷ್ಟೆಷ್ಟು ಇರಬೇಕೆಂಬುದನ್ನು ವಿವರಿಸಿದನು. ಹರಡಿದ ರೆಕ್ಕೆಗಳಿಂದ ಸರ್ವೇಶ್ವರನ ನಿಬಂಧನ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿ ವಾಹನದ ನಕ್ಷೆಯನ್ನು ಕೊಟ್ಟನು.
19 : ಆ ನಕ್ಷೆಗಳಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ಕುರಿತ ಜ್ಞಾನ ತನಗೆ ಸರ್ವೇಶ್ವರನ ಲೇಖನದಿಂದಲೇ ಪ್ರಾಪ್ತವಾಯಿತೆಂದು ಹೇಳಿದನು.
20 : ಆಮೇಲೆ ದಾವೀದನು ತನ್ನ ಮಗ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಸರ್ವೇಶ್ವರಸ್ವಾಮಿ ನಿನ್ನೊಂದಿಗೆ ಇರುತ್ತಾರೆ; ಅವರು ತಮ್ಮ ಆಲಯದ ಎಲ್ಲಾ ಕೆಲಸ ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ.
21 : ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ಅಗತ್ಯವಾದ ಎಲ್ಲ ದೇವಾಲಯ ಸಂಬಂಧ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನೂ ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸುಳ್ಳವರು ನಿನ್ನ ಹತ್ತಿರ ಇದ್ದಾರೆ. ಅಧಿಪತಿಗಳೂ ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ವಿಧೇಯರಾಗಿರುವರು,” ಎಂದು ಹೇಳಿದನು.
22 : ಕಷ್ಟ ಬಂದಾಗ ಅರಸ ಅಹಾಜನು ಸರ್ವೇಶ್ವರನಿಗೆ ಮತ್ತಷ್ಟು ದ್ರೋಹಮಾಡಿದನು.
23 : ಹೇಗೆಂದರೆ, ‘ಸಿರಿಯಾ ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿವೆ; ಅಂತೆಯೇ ನಾನೂ ಅವುಗಳಿಗೆ ಬಲಿಸಮರ್ಪಿಸಿದರೆ ನನಗೂ ಜಯವಾಗುವುದು’, ಎಂದುಕೊಂಡನು; ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಬಲಿಕೊಟ್ಟನು. ಆದರೆ ಆ ದೇವತೆಗಳಿಂದ ಅವನಿಗೂ ಎಲ್ಲ ಇಸ್ರಯೇಲರಿಗೂ ಕೇಡು ಉಂಟಾಯಿತು.
24 : ಇದಲ್ಲದೆ, ಅಹಾಜನು ದೇವಾಲಯದ ಸಾಮಗ್ರಿಗಳನ್ನು ಕೂಡಿಸಿ ಅವುಗಳನ್ನು ಚೂರುಚೂರು ಮಾಡಿಬಿಟ್ಟನು; ಸರ್ವೇಶ್ವರನ ಆಲಯದ ಬಾಗಿಲುಗಳನ್ನು ಮುಚ್ಚಿ ಜೆರುಸಲೇಮಿನ ಪ್ರತಿಯೊಂದು ಮೂಲೆಯಲ್ಲೂ ಯಜ್ಞವೇದಿಗಳನ್ನು ಕಟ್ಟಿಸಿದನು.
25 : ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಜುದೇಯದ ಎಲ್ಲ ಪಟ್ಟಣಗಳಲ್ಲೂ ಪೂಜಾಸ್ಥಳಗಳನ್ನು ನಿರ್ಮಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ರೇಗಿಸಿದನು.
26 : ಅಹಾಜನ ಉಳಿದ ಪೂರ್ವೋತ್ತರ ಚರಿತ್ರೆ ಹಾಗು ಅವನ ಎಲ್ಲ ಪ್ರವರ್ತನೆಗಳು ಯೆಹೂದ್ಯರ ಮತ್ತು ಇಸ್ರಯೇಲರ ರಾಜಗ್ರಂಥದಲ್ಲಿ ಲಿಖಿತವಾಗಿವೆ.
27 : ಅವನು ಸತ್ತು ತನ್ನ ಪಿತೃಗಳ ಬಳಿಗೆ ಸೇರಲು ಅವನನ್ನು ಇಸ್ರಯೇಲ್ ರಾಜಸ್ಮಶಾನದಲ್ಲಿ ಹೂಣದೆ ಜೆರುಸಲೇಮ್ ಪಟ್ಟಣದೊಳಗಿನ ಒಂದು ಸ್ಥಳದಲ್ಲಿ ಹೂಣಿಟ್ಟರು. ಅವನಿಗೆ ಬದಲಾಗಿ ಅವನ ಮಗ ಹಿಜ್ಕೀಯನು ಅರಸನಾದನು. ಜುದೇಯದ ಅರಸ ಹಿಜ್ಕೀಯನು (2 ಅರಸು 18.1-3)

· © 2017 kannadacatholicbible.org Privacy Policy