Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಪೂರ್ವ


1 : ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಬ ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ:ತ್ತು ವರ್ಷ ಆಳಿದನು. ಜೆರುಸಲೇಮಿನವಳಾದ ಯೆಹೋವದ್ಧಾನ್ ಎಂಬಾಕೆ ಅವನ ತಾಯಿ.
2 : ಆಸಾಫ್ಯರಲ್ಲಿ ಜಕ್ಕೂರ್, ಜೋಸೆಫ್, ನೆತನ್ಯ, ಅಶರೇಲ ಎಂಬವರು. ಇವರು ಆಸ್ಥಾನದ ಗಾಯಕ ಆಸಾಫನ ಸಹಾಯಕರು.
3 : ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಇವರು ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ, ಸರ್ವೇಶ್ವರನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿ ಸಹಾಯಕರು.
4 : ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತೀ, ಹೋತೀರ್, ಮಹಜೀಯೋತ್.
5 : ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಅವನಿಗೆ, “ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು,” ಎಂಬುದಾಗಿ ವಾಗ್ದಾನ ಮಾಡಿದ್ದರು. ಅದರಂತೆಯೇ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದರು..
6 : ದೇವರಾದ ಸರ್ವೇಶ್ವರನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರ ಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
7 : ಇವರೂ ಸರ್ವೇಶ್ವರನ ಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಬತ್ತೆಂಟು ಮಂದಿ ಗಾಯನಪ್ರವೀಣರು ಇದ್ದರು.
8 : ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ಈ ಚೀಟಿನ ಪ್ರಕಾರ ಇನ್ನೂರ ಎಂಬತ್ತೆಂಟು ಮಂದಿ ಸದಸ್ಯರು ಇಪ್ಪತ್ತನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದರು. ಪ್ರತಿಯೊಂದು ಗುಂಪಿಗೆ ಒಬ್ಬ ನಾಯಕನು, ಅವನ ಸಹೋದರರು ಹಾಗೂ ಮಕ್ಕಳು ಕೂಡಿ ಹನ್ನೆರಡು ಮಂದಿ ಸದಸ್ಯರು ಇದ್ದರು. ಕ್ರಮಾನುಸಾರ ಇಪ್ಪತ್ತನಾಲ್ಕು ನಾಯಕರ ಹೆಸರುಗಳು ಇವು:
9 : ಮೊದಲನೆಯವನು ಆಸಾಫ್ಯನಾದ ಜೋಸೆಫನು; ಎರಡನೆಯವನು ಗೆದಲ್ಯ
10 : ಮೂರನೆಯವನು ಜಕ್ಕೂರ್
11 : ನಾಲ್ಕನೆಯವನು ಇಚ್ರೀ
12 : ಐದನೆಯವನು ನೆತನ್ಯ
13 : ಆರನೆಯವನು ಬುಕ್ಕೀಯ
14 : ಏಳನೆಯವನು ಯೆಸರೇಲ
15 : ಎಂಟನೆಯವನು ಯೆಶಾಯ
16 : ಒಂಬತ್ತನೆಯವನು ಮತ್ತನ್ಯ
17 : ಹತ್ತನೆಯವನು ಶಿಮ್ಮೀ
18 : ಹನ್ನೊಂದನೆಯವನು ಅಜರೇಲ್
19 : ಹನ್ನೆರಡನೆಯವನು ಹಷಬ್ಯ
20 : ಹದಿಮೂರನೆಯವನು ಶೂಬಾಯೇಲ್
21 : ಹದಿನಾಲ್ಕನೆಯವನು ಮತ್ತಿತ್ಯ
22 : ಹದಿನೈದನೆಯವನು ಯೆರೆಮೋತ್
23 : ಹದಿನಾರನೆಯವನು ಹನನ್ಯ
24 : ಹದಿನೇಳನೆಯವನು ಯೊಷ್ಬೆಕಾಷ
25 : ಹದಿನೆಂಟನೆಯವನು ಹನಾನೀ
26 : ಹತ್ತೊಂಬತ್ತನೆಯವನು ಮಲ್ಲೋತಿ
27 : ಇಪ್ಪತ್ತನೆಯವನು ಎಲೀಯಾತ
28 : ಇಪ್ಪತ್ತೊಂದನೆಯವನು ಹೋತೀರ್
29 : ಇಪ್ಪತ್ತೆರಡನೆಯವನು ಗಿದ್ದಲ್ತಿ
30 : ಇಪ್ಪತ್ತಮೂರನೆಯವನು ಮಹಜೀಯೋತ್
31 : ಇಪ್ಪತ್ತನಾಲ್ಕನೆಯವನು ರೋಮಮ್ತಿಯೆಜೆರ್.

· © 2017 kannadacatholicbible.org Privacy Policy