1 : ಆರೋನನ ಸಂತಾನದವರನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ವರು ಮಕ್ಕಳಿದ್ದರು.
2 : ನಾದಾಬ್, ಅಬೀಹೂ ಎಂಬವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತುಹೋದುದರಿಂದ ಎಲ್ಲಾಜಾರ್ ಈತಾಮಾರರು ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು.
3 : ದಾವೀದನೂ ಎಲ್ಲಾಜಾರನ ಸಂತಾನದವನಾದ ಚಾದೋಕನೂ ಈತಾಮಾರನ ಸಂತಾನದವನಾದ ಅಹೀಮೆಲೆಕನೂ ಯಾಜಕರನ್ನು ಸರದಿಯ ಮೇಲೆ ಸೇವೆ ಸಲ್ಲಿಸತಕ್ಕ ವರ್ಗಗಳನ್ನಾಗಿ ವಿಭಾಗಿಸಿದ್ದರು.
4 : ಎಲ್ಲಾಜಾರನ ಸಂತಾನದಲ್ಲಿ ಕುಟುಂಬ ಕಂಡುಬಂದುದರಿಂದ, ಎಲ್ಲಾಜಾರ್ಯರ ಕುಟುಂಬಗಳನ್ನು ಮುಖ್ಯಸ್ಥರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ,
5 : ಈ ವರ್ಗಗಳ ವಿಷಯವಾಗಿ ಚೀಟುಹಾಕಿ ಕೆಲಸವನ್ನು ವಹಿಸುತ್ತಿದ್ದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳೂ ದೈವಿಕ ಕಾರ್ಯಗಳ ಅಧ್ಯಕ್ಷರೂ ಇದ್ದುದರಿಂದ ಉಭಯ ಸಂತಾನಗಳವರು ಸಮಾನ ಸ್ಥಾನದವರಾಗಿದ್ದರು.
6 : ನೆತನೇಲನ ಮಗ ಶೆಮಾಯನೆಂಬ ಲೇವಿಯ ಲೇಖಕನು, ಅರಸನ ಮುಂದೆ, ಅಧಿಪತಿಗಳ ಮುಂದೆ ಹಾಗೂ ಯಾಜಕನಾದ ಚಾದೋಕ್, ಎಬ್ಯಾತಾರನ ಮಗ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬಗಳ ಮುಖ್ಯಸ್ಥರ ಮುಂದೆ, ಆ ವರ್ಗಗಳ ಪಟ್ಟಿಯನ್ನು ಬರೆಯುತ್ತಿದ್ದನು. ಎಲ್ಲಾಜಾರ್ಯರ ಒಂದು ವರ್ಗದವರ ಸರದಿ ಆದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವೆಸಲ್ಲಿಸಬೇಕೆಂದು ನೇಮಿಸಿ, ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತು ಮಾಡುತ್ತಿದ್ದರು.
7 : ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು;
8 : ಎರಡನೆಯದು ಯೆದಾಯನಿಗೆ; ಮೂರನೆಯದು ಹಾರೀಮನಿಗೆ;
9 : ನಾಲ್ಕನೆಯದು ಸೆಯೋರೀಮನಿಗೆ; ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯ್ಯಾಮೀನನಿಗೆ;
10 : ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ;
11 : ಒಂಬತ್ತನೆಯದು ಯೆಷೂವನಿಗೆ;
12 : ಹತ್ತನೆಯದು ಶೆಕನ್ಯನಿಗೆ; ಹನ್ನೊಂದನೆಯದು ಎಲ್ಯಾಷೀಬನಿಗೆ;
13 : ಹನ್ನೆರಡನೆಯದು ಯಾಕೀಮನಿಗೆ; ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಎಫೆಬಾಬನಿಗೆ;
14 : ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;
15 : ಹದಿನೇಳನೆಯದು ಹೇಜಿರನಿಗೆ;
16 : ಹದಿನೆಂಟನೆಯದು ಹಪ್ಪಿಚ್ಚೇಚನಿಗೆ; ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
17 : ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ;
18 : ಇಪ್ಪತ್ತಮೂರನೆಯದು ದೆಲಾಯನಿಗೆ; ಇಪ್ಪತ್ತನಾಲ್ಕನೆಯದು ಮಾಜ್ಯನಿಗೆ.
19 : ಆರೋನ್ಯರು ಈ ವರ್ಗಕ್ರಮದಲ್ಲಿ ಸರ್ವೇಶ್ವರನ ಆಲಯಕ್ಕೆ ಬಂದು, ಲೇವಿಯರ ಮೂಲ ಪುರುಷನಾದ ಆರೋನನ ಮುಖಾಂತರ ಇಸ್ರಯೇಲ್ ದೇವರಾದ ಸರ್ವೇಶ್ವರ ನಿಯಮಿಸಿದ ಸೇವೆಯನ್ನು ನಡೆಸಬೇಕಾಗಿತ್ತು.
20 : ಉಳಿದ ಲೇವಿಯರ ಪಟ್ಟಿ: ಅಮ್ರಾಮನ ಸಂತಾನದವನಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು,
21 : ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನು,
22 : ಹಾಗೂ ಇಚ್ಚಾರನ ಸಂತಾನದವನಾದ ಶೆಲೋಮೋತನ ಕುಟುಂಬದವರಲ್ಲಿ ಯಹತನು ಮುಖ್ಯಸ್ಥರು.
23 : ಹೆಬ್ರೋನನ ಸಂತಾನದವರಲ್ಲಿ ಯೆರೀಯನು ಮುಖ್ಯಸ್ಥನು, ಅಮರ್ಯನು ಎರಡನೆಯವನು, ಯಹಜೀಯೇಲನು ಮೂರನೆಯವನು, ಯೆಕಮ್ಮಾಮನು ನಾಲ್ಕನೆಯವನು.
24 : ಉಜ್ಜಿಯೇಲನ ಮಗ ಮೀಕನ ಸಂತಾನದವರಲ್ಲಿ ಶಾಮೀರನು
25 : ಹಾಗೂ ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಮುಖ್ಯಸ್ಥರು.
26 : ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬವರು ಹಾಗೂ ಅವನ ಮತ್ತೊಬ್ಬ ಮಗ ಯಾಜ್ಯನ ವಂಶದವರು..
27 : ಮೆರಾರೀಯ ಸಂತಾನದವರಲ್ಲಿ ಯಾಜ್ಯನಿಂದ ಹುಟ್ಟಿದವರು ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಇವರು.
28 : ಮಹ್ಲೀಯಿಂದ ಹುಟ್ಟಿದವರು: ಮಕ್ಕಳಿಲ್ಲದೆ ಸತ್ತ ಎಲ್ಲಾಜಾರನು ಹಾಗು ಕೀಷನು.
29 : ಕೀಷನಿಂದ ಯೆರಹ್ಮೇಲನು ಹುಟ್ಟಿದನು.
30 : ಮೂಷೀಯ ಮಕ್ಕಳು: ಮಹ್ಲೀ, ಏದೆರ್, ಯೆರೀಮೋತ್ ಎಂಬವರು.
31 : ಇವರೆಲ್ಲಾ ಲೇವಿಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ ಕಿರಿಯರೂ, ತಮ್ಮ ಕುಲಬಂಧುಗಳಾದ ಆರೋನ್ಯರಂತೆ, ಅರಸನಾದ ದಾವೀದ್, ಜಾದೋಕ್, ಅಹೀಮೆಲೆಕ್ ಇವರ ಮುಂದೆ ಹಾಗೂ ಯಾಜಕರ ಮತ್ತು ಲೇವಿಯರ ಕುಟುಂಬ ಮುಖ್ಯಸ್ಥರ ಮುಂದೆ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.