Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಎರಡನೇ ಸಾರಿಯ ಚೀಟು ಸಿಮೆಯೋನ್ ಕುಲದವರಿಗೆ ಬಿದ್ದಿತು. ಈ ಸಿಮೆಯೋನ್ ಕುಲದ ಗೋತ್ರಗಳ ಸೊತ್ತು ಯೂದಕುಲದವರ ಸೊತ್ತಿನ ಮಧ್ಯದಲ್ಲಿತ್ತು.
2 : ಅದರ ಊರುಗಳು ಇವು: ಬೇರ್ಷೆಬ,
3 : ಶೆಬ, ಮೋಲಾದಾ, ಹಚರ್‍ಷೂವಾಲ್, ಬಾಲಾ,
4 : ಎಚೆಮ್, ಎಲ್ತೋಲದ್, ಬೆತೂಲ್,
5 : ಹೊರ್ಮಾ, ಚಿಕ್ಲಗ್, ಬೇತ್‍ಮಾರ್ಕಾಬೋತ್,
6 : ಹಚರ್ ಸೂಸಾ, ಬೇತ್‍ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ನಗರಗಳು ಮತ್ತು ಅವುಗಳ ಗ್ರಾಮಗಳು.
7 : ಆಯಿನ್, ರಿಮ್ಮೋನ್, ಏತೆರ್, ಅಷಾನ್ ಎಂಬ ನಾಲ್ಕು ನಗರಗಳು ಮತ್ತವುಗಳ ಗ್ರಾಮಗಳು;
8 : ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲತ್‍ಬೇರ್ ಎಂಬ ಊರಿನವರೆಗೆ ಇತರ ಗ್ರಾಮಗಳು ಇವೆ. ಬಾಳತ್‍ಬೇರ್ ಎಂಬುದು ದಕ್ಷಿಣದ ರಾಮ ಎನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಆಸ್ತಿ ಇದೇ.
9 : ಈ ಆಸ್ತಿ ಯೂದವಂಶದ ಆಸ್ತಿಯಲ್ಲಿ ಒಂದು ಭಾಗ. ಯೂದವಂಶದವರಿಗೆ ದೊರಕಿದ ಪ್ರದೇಶ ಹೆಚ್ಚಾಗಿದ್ದುದರಿಂದ ಸಿಮೆಯೋನ್ಯರಿಗೆ ಅದರಲ್ಲೆ ಪಾಲು ಸಿಕ್ಕಿತು.
10 : ಮೂರನೇ ಸಾರಿಯ ಚೀಟು ಜೆಬುಲೂನ್ಯರಿಗೆ ಬಿದ್ದಿತು. ಈ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ಎಲ್ಲೆ
11 : ಸಾರೀದಿನಿಂದ ತೊಡಗಿ ಪಶ್ಚಿಮ ದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ.
12 : ಅದೇ ಸಾರೀದಿನಿಂದ ಅದು ಪೂರ್ವದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಎಲ್ಲೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
13 : ಅಲ್ಲಿಂದ ಮತ್ತೂ ಪೂರ್ವಕ್ಕೆ ಮುಂದುವರೆದು ಗತ್‍ಹೇಫರ್, ಎತ್‍ಕಾಚೀನ್ ಇವುಗಳ ಮೇಲೆ ನೇಯದ ಮಗ್ಗಲಲ್ಲಿರುವ ರಿಮ್ಮೇನಿಗೆ ಹೋಗುತ್ತದೆ.
14 : ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ಕಣಿವೆಗೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.
15 : ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲಾ, ಬೆತ್ಲೆಹೇಮ್ ಇವೇ ಮೊದಲಾದ ಹನ್ನೆರಡು ನಗರಗಳೂ ಅವುಗಳಿಗೆ ಸೇರಿದ ಗ್ರಾಮಗಳು-
16 : ಜೆಬುಲೂನ್ ಕುಲದ ಗೋತ್ರಗಳಿಗೆ ಸೊತ್ತಾಗಿ ದೊರಕಿದವು.
17 : ನಾಲ್ಕನೇ ಸಾರಿಯ ಚೀಟು ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ನಾಡಿನಲ್ಲಿರುವ ನಗರಗಳು ಯಾವುವು ಎಂದರೆ -
18 : ಇಜ್ರೇಲ್, ಕೆಸುಲ್ಲೋತ್
19 : ಶೂನೇಮ್, ಹಫಾರಯಿಮ್, ಶೀಯೋನ್
20 : ಅನಾಹರತ್, ರಬ್ಬೀತ್, ಕಿಷ್ಯೋನ್, ಎಬೆಜ್,
21 : ರೆಮೆತ್, ಏಂಗನ್ನೀಮ್, ಏನ್‍ಹದ್ದಾ, ಬೇತ್‍ಪಚ್ಚೇಚ್,
22 : ತಾಬೋರ್, ಶಹಚೀಮಾ, ಬೇತ್‍ಷೆಮೆಷ್ ಎಂಬ ಊರುಗಳೂ ಅದರ ಮೇರೆಯೊಳಗಿದ್ದವು. ಈ ಮೇರೆಯು ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ.
23 : ಒಟ್ಟಾರೆ ಹದಿನಾರು ನಗರಗಳೂ ಅವುಗಳ ಗ್ರಾಮಗಳೂ ಇಸ್ಸಾಕಾರ್ ಕುಲದ ಗೋತ್ರಗಳಿಗೆ ದೊರಕಿದವು.
24 : ಐದನೇ ಸಾರಿಯ ಚೀಟು ಅಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಇವು:
25 : ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
26 : ಅಲಮ್ಮೆಲೆಕ್, ಅಮಾದ್, ಮಿಷಾಲ್. ಇವರ ನಾಡಿನ ಎಲ್ಲೆ ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ ಶೀಹೋರ್‍ಲಿಬ್ನತ್ ಎಂಬ ಹಳ್ಳಕ್ಕೂ ತಾಕಿ
27 : ಅಲ್ಲಿಂದ ಪೂರ್ವಕ್ಕೆ ತಿರುಗಿ ಬೇತ್‍ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಎಲ್ಲೆಗೂ ಇಫ್ತಹೇಲ್ ಕಣಿವೆಯ ಉತ್ತರದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತ್ ಏಮೆಕ್, ನೆಗೀಯೆಲ್ ಇವುಗಳ ಮೇಲೆ ಉತ್ತರಕ್ಕೆ ಮುಂದುವರೆದು
28 : ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಸಿದೋನ್ ಎಂಬ ಮಹಾ ನಗರಕ್ಕೆ ಹೋಗುತ್ತದೆ.
29 : ಅಲ್ಲಿಂದ ಅದು ತಿರುಗಿಕೊಂಡು ರಾಮಾ, ಟೈರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರತೀರದಲ್ಲಿ ಕೊನೆಗೊಳ್ಳುತ್ತದೆ.
30 : ಉಮ್ಮಾ, ಅಫೇಕ್, ರೆಹೊಬ್ ಇವೇ ಮೊದಲಾದ ಇಪ್ಪತ್ತೆರಡು ನಗರಗಳೂ ಅವುಗಳ ಗ್ರಾಮಗಳೂ
31 : ಅಶೇರ್ ಕುಲದ ಗೋತ್ರಗಳ ಸೊತ್ತಾಗಿವೆ.
32 : ಆರನೇ ಸಾರಿಯ ಚೀಟು ನಫ್ತಾಲಿ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ಎಲ್ಲೆ ಹೀಗಿದೆ:
33 : ಚಾನನ್ನೀಮಿನಲ್ಲಿರುವ ಹೇಲೆಫಿನ ಅಲ್ಲೋನ್ ಮರದಿಂದ ತೊಡಗಿ ಅದಾವಿೂನೆಕೆಬ್, ಯೆಬ್ನೆಯೇಲ್ ಇವುಗಳ ಮೇಲೆ ಲಕ್ಕೂಮಿಗೆ ಹೋಗಿ ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ.
34 : ಮತ್ತೆ ಅದೇ ಸ್ಥಳದಿಂದ ತೊಡಗಿ ಅಜ್ನೋತ್-ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ. ದಕ್ಷಿಣದಲ್ಲಿ ಜೆಬುಲೂನ್ಯರ ಎಲ್ಲೆಗೂ ಪಶ್ಚಿಮದಲ್ಲಿ ಆಶೇರ್ಯರ ಮತ್ತು ಯೂದವಂಶದವರ ಎಲ್ಲೆಗೂ ಪೂರ್ವದಲ್ಲಿ ಜೋರ್ಡನ್ ನದಿಗೂ ಹೊಂದಿಕೊಂಡಿರುತ್ತದೆ.
35 : ಚಿದ್ದೀಮ್, ಚೇರ್, ಹಮ್ಮತ್,
36 : ರಕ್ಕತ್, ಕಿನ್ನೆರೆತ್, ಅದಾಮಾ, ರಾಮಾ, ಹಾಚೋರ್,
37 : ಕೆದೆಷ್, ಎದ್ರೈ, ಏನ್ ಹಾಚೋರ್, ಇರೋನ್, ಮಿಗ್ದಲೇಲ್, ಹೊರೇಮ್,
38 : ಬೇತನಾತ್, ಬೇತ್‍ಷೆಮೆಷ್ ಇವೇ ಮೊದಲಾದ ಹತ್ತೊಂಬತ್ತು ಕೋಟೆಕೊತ್ತಲಗಳುಳ್ಳ ನಗರಗಳೂ ಅವುಗಳ ಗ್ರಾಮಗಳೂ
39 : ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಾಗಿವೆ.
40 : ಏಳನೇ ಸಾರಿಯ ಚೀಟು ದಾನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸೊತ್ತಾಗಿ ದೊರಕಿದ ಊರುಗಳು ಇವು:
41 : ಚೊರ್ಗಾ, ಎಷ್ಟಾ ವೋಲ್,
42 : ಈರ್ಷೆಮೆಷ್, ಶಾಲಬ್ಬೀನ್, ಅಯ್ಯಾಲೋನ್,
43 : ಇತ್ಲಾ, ಏಲೋನ್, ತಿಮ್ಮಾ, ಎಕ್ರೋನ್, ಎಲ್ತೆಕೇ,
44 : ಇತ್ಲಾ, ಏಲೋನ್, ತಿಮ್ಮಾ, ಎಕ್ರೋನ್, ಎಲ್ತೆಕೇ,
45 : ಗಿಬ್ಬೆತೋನ್, ಬಾಲತ್, ಯೆಹುದ್, ಬೆನೇಬೆರಕ್,
46 : ಗತ್‍ರಿಮ್ಮೋನ್, ಮೇಯರ್ಕೋನ್, ರಕ್ಕೋನ್, ಮತ್ತು ಜೊಪ್ಪಕ್ಕೆ ಎದುರಿಗಿರುವ ಪ್ರದೇಶವೂ ಇವರಿಗೆ ದೊರಕಿತು.
47 : ದಾನ್ ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಹೊರಟು ಲೆಷೆಮಿನವರೊಡನೆ ಯುದ್ಧಮಾಡಿ ಜಯಿಸಿದರು. ಆ ಜನರನ್ನು ಕತ್ತಿಯಿಂದ ಸಂಹರಿಸಿ ಅವರ ನಗರವನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಿದರು. ಅಲ್ಲದೆ, ಅದಕ್ಕೆ ತಮ್ಮ ಮೂಲ ಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು.
48 : ದಾನ್ ಕುಲದ ಗೋತ್ರಗಳಿಗೆ ದೊರಕಿದ ಸೊತ್ತು ಹಾಗೂ ಅದರಲ್ಲಿದ್ದ ನಗರ ಹಾಗೂ ಗ್ರಾಮಗಳು ಇವೇ.
49 : ಇಸ್ರಯೇಲರು ನಾಡನ್ನು ಎಲ್ಲೆಎಲ್ಲೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗ ಯೆಹೋಶುವನಿಗೂ ತಮ್ಮದರಲ್ಲಿ ಪಾಲುಕೊಟ್ಟರು.
50 : ಆತ ತನಗೋಸ್ಕರ ಎಫ್ರಯಿಮರ ಮಲೆನಾಡಿನಲ್ಲಿರುವ ‘ತಿಮ್ಮತ್ ಸೆರಹ’ ಎಂಬ ನಗರವನ್ನು ಕೇಳಿಕೊಂಡನು. ಸರ್ವೇಶ್ವರನ ಆಜ್ಞೆಯಂತೆ ಅವರು ಅದನ್ನು ಅವನಿಗೆ ಕೊಟ್ಟರು. ಅವನು ಅದನ್ನು ಹೊಸದಾಗಿ ಕಟ್ಟಿ ಅದರಲ್ಲೇ ವಾಸಮಾಡಿದನು.
51 : ಹೀಗೆ ಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲ ಮುಖ್ಯಸ್ಥರೂ ಶೀಲೋವಿನಲ್ಲಿದ್ದ ದೇವದರ್ಶನದ ಗುಡಾರದ ದ್ವಾರದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲೇ ಚೀಟುಹಾಕಿ ಪ್ರಾಂತ್ಯಗಳನ್ನು ಹಂಚಿಕೊಟ್ಟರು; ನಾಡಿನ ವಿಭಜನಾಕಾರ್ಯ ಮುಗಿಯಿತು.

· © 2017 kannadacatholicbible.org Privacy Policy