Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಜೋಸೆಫನ ವಂಶದವರಿಗೆ ದೊರಕಿದ ಆಸ್ತಿಪಾಸ್ತಿಯ ಎಲ್ಲೆಯು ಜೆರಿಕೋವಿನ ಬಳಿಯಲ್ಲಿ ಜೋರ್ಡನ್ ತೀರದಿಂದ ತೊಡಗಿ ಜೆರಿಕೋವಿನ ಪೂರ್ವದಲ್ಲಿದ್ದ ನದಿ, ಜೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಮಲೆನಾಡಿನ ಮರುಭೂಮಿ ಹಾಗೂ ಬೇತೇಲ್ ಇವುಗಳ ಮೇಲೆ ಲೂಜಿಗೆ ಹೋಗುತ್ತದೆ.
2 : ಅಲ್ಲಿಂದ ಅರ್ಕೀಯರ ಎಲ್ಲೆಯನ್ನು ಅನುಸರಿಸಿ ಅಟಾರೋತಿಗೆ ಹೋಗುತ್ತದೆ.
2 : ಜೋಸೆಫನ ಮಗ ಮನಸ್ಸೆಯ ಉಳಿದ ಗಂಡು ಮಕ್ಕಳಾದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೆರ್, ಶವಿೂದಾ, ಎಂಬವರ ವಂಶದವರಿಗೆ ಜೋರ್ಡನಿನ ಈಚೆಕಡೆ ಪಾಲು ಸಿಕ್ಕಿತು.
3 : ಅಲ್ಲಿಂದ ಇಳಿದು ಪಶ್ಚಿಮ ದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತ್ಯವನ್ನು ಮುಟ್ಟಿ ಕೆಳಗಿನ ಬೇತ್‍ಹೋರೋನಿನ ಮೇಲೆ ಗೆಜೆರಿಗೆ ಹೋಗಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
4 : ಇದು ಜೋಸೆಫನ ಮಕ್ಕಳಾದ ಮನಸ್ಸೆ-ಎಫ್ರಯಿಮ್ ಎಂಬ ಕುಲಗಳಿಗೆ ದೊರೆತ ಸೊತ್ತಿನ ಎಲ್ಲೆ.
5 : ಎಫ್ರಯಿಮ್ ಗೋತ್ರಗಳ ನಾಡಿನ ದಕ್ಷಿಣ ದಿಕ್ಕಿನ ಎಲ್ಲೆ ಆಟಾರೋತದ್ದಾರಿನ ಪೂರ್ವ ದಿಕ್ಕಿನಿಂದ ತೊಡಗಿ ಮೇಲಿನ ಬೇತ್‍ಹೋರೋನಿನ ಮೇಲೆ ಸಮುದ್ರ ತೀರಕ್ಕೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ. ಅದರ ಉತ್ತರ ದಿಕ್ಕಿನ ಎಲ್ಲೆ ಮಿಕ್ಮೆತಾತ್ ಎಂಬಲ್ಲಿ ತೊಡಗಿ ಪೂರ್ವಕ್ಕೆ ತಿರುಗಿಕೊಂಡು ತಾನತ್‍ಶೀಲೋ ಎಂಬಲ್ಲಿಗೆ ಹೋಗುತ್ತದೆ.
6 : ಅಲ್ಲಿಂದ ಯಾನೋಹ ಊರಿನ ಪೂರ್ವಮಾರ್ಗವಾಗಿ ಅಟಾರೋತ್, ನಾರಾ
7 : ಎಂಬ ಊರುಗಳ ಮೇಲೆ ಇಳಿಯುತ್ತಾ ಜೆರಿಕೋ ಪ್ರಾಂತ್ಯಕ್ಕೆ ಸೋಂಕಿ ಜೋರ್ಡನ್ ನದಿಯ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
8 : ಅದರ ಎಲ್ಲೆ ತಪ್ಪೊಹದಿಂದ ಪಶ್ಚಿಮ ಕಡೆಗೆ ಹೋಗುವ ಕಾನಾ ನದಿಯನ್ನು ಅನುಸರಿಸಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಫ್ರಯಿಮ್ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತು ಇದೇ.
9 : ಇದಲ್ಲದೆ, ಎಫ್ರಯಿಮ್ ಕುಲದವರಿಗೆ ಮನಸ್ಸೆ ಕುಲದವರ ಮಧ್ಯೆ ಪ್ರತ್ಯೇಕವಾದ ಕೆಲವು ನಗರಗಳೂ ಅವಕ್ಕೆ ಸೇರಿದ ಗ್ರಾಮಗಳೂ ದೊರಕಿದವು.
10 : ಅವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸದೆ ಹೋದುದರಿಂದ ಅವರು ಇಂದಿಗೂ ಎಫ್ರಯಿಮ್ಯರ ನಡುವೆ ಊಳಿಗದವರಾಗಿದ್ದುಕೊಂಡು ಅವರಿಗೆ ಸೇವೆ ಮಾಡುತ್ತಾರೆ.

· © 2017 kannadacatholicbible.org Privacy Policy