Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೆಹೋಶುವ


1 : ಯೆಹೋಶುವ ಹಣ್ಣುಹಣ್ಣು ಮುದುಕನಾದ. ಆಗ ಸರ್ವೇಶ್ವರ ಆತನಿಗೆ, “ನೀನೀಗ ಮುದುಕ. ಸ್ವಾಧೀನ ಮಾಡಿಕೊಳ್ಳಬೇಕಾದ ನಾಡುಗಳು ಇನ್ನೂ ಬಹಳ ಇವೆ.
2 : ಅವು ಯಾವುವೆಂದರೆ - ಈಜಿಪ್ಟಿನ ಈಚೆಯಿರುವ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಗಾಜಾ,
3 : ಅಷ್ಡೋದ್, ಅಷ್ಕೆಲೋನ್, ಗತೂರು, ಎಕ್ರೋನ್ ಎಂಬ ನಗರಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯ;
4 : ಗೆಷೂರ್ಯರ ನಾಡು, ದಕ್ಷಿಣದಲ್ಲಿದ್ದ ಅವ್ವೀಯರ ನಾಡು; ಸಿದೋನ್ಯರಿಗೆ ಸೇರಿದ ಮೆಯರಾದಿಂದ ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ನಾಡು;
5 : ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ತಪ್ಪಲಿನಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ಹಾದಿಯವರೆಗಿರುವ ಲೆಬನೋನಿನ ಪೂರ್ವ ಪ್ರದೇಶ;
6 : ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗಿರುವ ಸಿದೋನ್ಯರ ಎಲ್ಲ ಪರ್ವತ ಪ್ರಾಂತ್ಯಗಳು.
7 : “ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಯೇಲರ ಸಮ್ಮುಖದಿಂದ ಹೊರಡಿಸಿ ಬಿಡುವೆನು. ನೀನಾದರೋ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಯೇಲರಿಗೆ ನಾಡನ್ನು ಹಂಚಿಕೊಡುವಾಗ ಇವುಗಳನ್ನು ಕೂಡ ಸೇರಿಸಿ ನಾಡನ್ನೆಲ್ಲಾ ಒಂಬತ್ತು ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಪಾಲುಮಾಡಿಕೊಡು,” ಎಂದರು.
8 : ಮನಸ್ಸೆಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಜೋರ್ಡನಿನ ಆಚೆಕಡೆ ಈಗಾಗಲೇ ಮೋಶೆಯಿಂದ ಸ್ವಂತ ಭೂಮಿ ದೊರಕಿತ್ತು. ಸರ್ವೇಶ್ವರನ ದಾಸ ಮೋಶೆ ಅವರಿಗೆ ಕೊಟ್ಟ ಪ್ರಾಂತ್ಯಗಳು ಇವು:
9 : ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ ಮತ್ತು ಅದೇ ಕಣಿವೆಯಲ್ಲಿದ್ದ ಮತ್ತೊಂದು ನಗರ, ಇವುಗಳಿಂದ ದೀಬೋನಿನವರೆಗೆ ವಿಸ್ತರಿಸಿಕೊಂಡಿದ್ದ ಮೇದಬದ ತಪ್ಪಲ ನಾಡು;
10 : ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಎಲ್ಲೆಗೆ ಈಚೆಕಡೆ ಇದ್ದಂಥ ಎಲ್ಲ ನಗರಗಳು;
11 : ಗಿಲ್ಯಾದ್ ನಾಡು, ಗೆಷ್ಯೂರ ಮತ್ತು ಮಾಕತೀಯರ ಪ್ರಾಂತ್ಯಗಳು, ಹೆರ್ಮೋನ್ ಬೆಟ್ಟದ ಮೇಲಿನ ಪ್ರದೇಶ
12 : ಅಷ್ಟರೋತ್, ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದು ಸಲ್ಕಾ ನಗರದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು. ಮೋಶೆಯೇ ಅವರನ್ನು ಜಯಿಸಿ ಅವರ ನಾಡುಗಳನ್ನು ಸ್ವಾಧೀನಮಾಡಿಕೊಂಡಿದ್ದನು.
13 : ಇಸ್ರಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ನಾಡಿನೊಳಗಿಂದ ಅಟ್ಟಿಬಿಡಲಿಲ್ಲ. ಅವರು ಇಂದಿನವರೆಗೂ ಇಸ್ರಯೇಲರ ಮಧ್ಯದಲ್ಲೇ ಇದ್ದಾರೆ.
14 : ಲೇವಿ ಕುಲದವರಿಗೆ ಮಾತ್ರ ಯಾವ ಪಾಲೂ ಸಿಕ್ಕಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನು ಆಜ್ಞಾಪಿಸಿದಂತೆ ಯಜ್ಞಶೇಷವೇ ಅವರ ಸೊತ್ತಾಗಿತ್ತು.
15 : ಮೋಶೆ ರೂಬೇನ್ಯರ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:
16 : 6ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ, ಅದೇ ಕಣಿವೆಯ ಮಧ್ಯೆಯಿದ್ದ ನಗರ;
17 : ಮೇದೆಬದ ಬಯಲುನಾಡಿಗೆ ಸೇರಿದ ಹೆಷ್ಬೋನ್ ನಗರ, ಅಲ್ಲೆ ಎತ್ತರವಾದ ಬಯಲಿನಲ್ಲಿರುವ ದೀಬೋನ್, ಬಾಮೋೀತ್ ಬಾಳ್, ಬೇತ್ಬಾಳ್ಮೆಯೋನ್ ಯಹಚಾ,
18 : ಕೆದೇಮೋತ್, ಮೆಫಾಯತ್,
19 : ಕಿರ್ಯಾತಯಿಮ್, ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳು, ಕಣಿವೆಯಲ್ಲಿ ಇರುವ ಗುಡ್ಡದ ಮೇಲಿನ ಚೆರೆತ್‍ಶಹರ್, ಬೇತ್ಪೆ ಗೋರ್ ಎಂಬ ನಗರಗಳು,
20 : ಪಿಸ್ಗದ ಬುಡದಲ್ಲಿ ಇರುವ ಪ್ರದೇಶ, ಬೇತ್‍ಯೆಷಿಮೋತ್ ನಗರ,
21 : ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲ ನಗರಗಳು, ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸ ಸೀಹೋನನ ಸಮಸ್ತ ರಾಜ್ಯ. ಮೋಶೆ ಈ ನಾಡಿನಲ್ಲಿ ವಾಸವಾಗಿದ್ದ ಸೀಹೋನನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿದ್ದ ಅವನ ಸರದಾರರನ್ನೂ ಸದೆಬಡಿದನು.
22 : ಇಸ್ರಯೇಲರು ಕತ್ತಿಗೆ ಉತ್ತಾಗಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಸೇರಿದ್ದನು.
23 : ಜೋರ್ಡನ್ ನದಿ ರೂಬೇನ್ಯರ (ಪಡುವಣ) ಮೇರೆಯಾಗಿತ್ತು. ರೂಬೇನ್ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಸಿಕ್ಕದ ಗ್ರಾಮನಗರಗಳು ಇವೇ.
24 : ಮೋಶೆ ಗಾದ್ ಕುಲದ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:
25 : ಹೆಷ್ಬೋನಿನ ಅರಸ ಸೀಹೋನನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಗಿಲ್ಯಾದಿನ ಎಲ್ಲ ನಗರಗಳು, ರಬ್ಬಾ ಊರಿನ ಪೂರ್ವದಲ್ಲಿ ಇರುವ ಅರೋಯೇರ್ ನಗರದವರೆಗೆ ವಿಸ್ತರಿಸಿ ಕೊಂಡಿರುವ ಅಮ್ಮೋನಿಯರ ಅರ್ಧರಾಜ್ಯ,
26 : ಹೆಷ್ಬೋನಿನಿಂದ ರಾಮತ್‍ಮಿಚ್ಫೆ, ಬೆಟೋನೀಮ್ ಎಂಬ ಊರುಗಳವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೇಬೀರ್ ಪ್ರಾಂತ್ಯದವರೆಗೆ ಇರುವ ನಾಡು,
27 : ಜೋರ್ಡನ್ ಕಣಿವೆಯಲ್ಲಿರುವ ಬೇತ್‍ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಫೋನ್ ಎಂಬ ನಗರಗಳು, ಕಿನ್ನೆರೆತ್ ಸರೋವರ, (ದಕ್ಷಿಣ ದಿಕ್ಕಿನ) ಮೂಲೆಯವರೆಗೆ ವಿಸ್ತರಿಸಿಕೊಂಡಿರುವ ಜೋರ್ಡನ್ ಪೂರ್ವಪ್ರದೇಶ.
28 : ಈ ಎಲ್ಲ ಗ್ರಾಮನಗರಗಳು ಗಾದ್ ಕುಲದ ಆಸ್ತಿಪಾಸ್ತಿ ಆದವು.
29 : ಮಹನಯಿಮಿನ (ಉತ್ತರದಲ್ಲಿದ್ದ) ಹಾಗೂ ಮೊದಲು ಬಾಷಾನಿನ ಅರಸ ಓಗನ ರಾಜ್ಯವಾಗಿದ್ದ ಬಾಷಾನ್ ನಾಡನ್ನು
30 : ಮನಸ್ಸೆ ಕುಲದ ಅರ್ಧಗೋತ್ರಗಳಿಗೆ ಮೋಶೆ ಕೊಟ್ಟನು. ಯಾಯಿರನ ಗ್ರಾಮಗಳೆನಿಸಿಕೊಳ್ಳುವ ಅರವತ್ತು ಊರುಗಳು ಇದರಲ್ಲೆ ಇವೆ.
31 : ಗಿಲ್ಯಾದಿನ ಅರ್ಧಭಾಗ ಓಗನ ರಾಜಧಾನಿಗಳಾಗಿದ್ದ ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ನಗರಗಳು ಮನಸ್ಸೆಯ ಮಗ ಮಾಕೀರನ ಗೋತ್ರದ ಅರ್ಧ ಜನರಿಗೆ ಸಿಕ್ಕಿದವು.
32 : ಮೋಶೆ ಜೋರ್ಡನಿನ ಆಚೆ ಜೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲು ಪ್ರದೇಶದಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಂತ ಆಸ್ತಿಯಾಗಿ ಕೊಟ್ಟನು.
33 : ಆದರೆ ಲೇವಿಯ ಕುಲಕ್ಕೆ ಮೋಶೆ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನೇ ಅವರ ಸೊತ್ತೆಂದು ವಾಗ್ದಾನ ಮಾಡಲಾಗಿತ್ತು.

· © 2017 kannadacatholicbible.org Privacy Policy