1 :
ಎತೋಮನೆಂಬ ಏಸಾವನ ವಂಶಾವಳಿ ಇದು:
2 : ಏಸಾವನು ಕಾನಾನ್ಯರ ಮಹಿಳೆಯರಲ್ಲಿ ಹಿತ್ತಿಯನಾದ ಏಲೋನನ ಮಗಳಾದ ಆದಾಳನ್ನು, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು ಮತ್ತು
3 : ಇಷ್ಮಾಯೇಲನ ಮಗಳು ಹಾಗು ನೆಬಾಯೋತನ ಸಹೋದರಿ ಬಾಸೆಮತಳನ್ನೂ ಮದುವೆ ಆಗಿದ್ದನು.
4 : ಏಸಾವನಿಗೆ ಆದಾಳು ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
5 : ಒಹೊಲೀಬಾಮಳು ಯೆಗೂಷನನ್ನು, ಯಳಾಮನನ್ನು ಹಾಗು ಕೋರಹನನ್ನು ಹೆತ್ತಳು. ಇವರೆಲ್ಲರು ಏಸಾವನು ಕಾನಾನ್ ನಾಡಿನಲ್ಲಿ ಇದ್ದಾಗ ಹುಟ್ಟಿದರು.
6 : ಏಸಾವನು ತನ್ನ ಹೆಂಡತಿಯರನ್ನೂ ಗಂಡು ಹೆಣ್ಣುಮಕ್ಕಳನ್ನೂ ತನ್ನ ಮನೆಗೆ ಸೇರಿದ ಎಲ್ಲರನ್ನೂ, ತನಗಿದ್ದ ಪಶುಪ್ರಾಣಿಗಳನ್ನೂ ಕಾನಾನ್ ನಾಡಿನಲ್ಲಿ ತಾನು ಸಂಪಾದಿಸಿದ್ದ ಆಸ್ತಿಪಾಸ್ತಿ ಎಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮ ಯಕೋಬನ ಬಳಿಯಿಂದ ಹೊರನಾಡಿಗೆ ಹೊರಟು ಹೋದನು.
7 : ಸಿರಿಸಂಪತ್ತು ಹೆಚ್ಚಾಗಿ ಇದ್ದುದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿ ವಾಸಮಾಡಲು ಅನುಕೂಲವಾಗಿರಲಿಲ್ಲ; ಪಶುಪ್ರಾಣಿಗಳು ಬಹಳ ಆಗಿದ್ದುದರಿಂದ ಅವರು ತಂಗಿದ್ದ ನಾಡು ಅವರಿಗೆ ಸಾಲದೆ ಹೋಯಿತು.
8 : ಈ ಕಾರಣ ಏದೊಮನೆಂಬ ಏಸಾವನು ಸೇಯಿರ್ ಮಲೆನಾಡಿಗೆ ಹೋಗಿ ಅಲ್ಲೇ ವಾಸವಾಗಿದ್ದನು.
9 : ಸೇಯಿರ್ ಮಲೆನಾಡಿನಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶಾವಳಿ ಹೀಗಿದೆ:
10 : ಏಸಾವನಿಗೆ ಹೆಂಡತಿ ಆದಾಳಲ್ಲಿ ಮಗ ಎಲೀಫಜನು ಹುಟ್ಟಿದನು; ಹೆಂಡತಿ ಬಾಸೆಮತಳಲ್ಲಿ ಮಗ ರೆಗೂವೇಲನು ಹುಟ್ಟಿದನು.
11 : ಎಲೀಫಜನಿಗೆ ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್, ಎಂಬ ಐದು ಮಕ್ಕಳು.
12 : ಏಸಾವನ ಮಗನಾದ ಈ ಎಲೀಫಜನಿಗೆ ತಿಮ್ನ ಎಂಬ ಉಪಪತ್ನಿ ಇದ್ದಳು. ಇವಳು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.
13 : ರೆಗೂವೇಲನಿಗೆ ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ನಾಲ್ಕು ಮಕ್ಕಳು. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
14 : ಏಸಾವನ ಹೆಂಡತಿಯೂ ಸಿಬೆಯೋನನ ಮಗ ಅನಾಹನ ಮಗಳೂ ಆಗಿದ್ದ ಒಹೊಲೀಬಾಮಳಿಗೆ ಯೆಗೂಷ್, ಯಳಾಮ್ ಮತ್ತು ಕೋರಹ ಎಂಬ ಮೂರು ಮಕ್ಕಳಿದ್ದರು.
15 : ಏಸಾವನ ವಂಶದ ಕುಲನಾಯಕರು: ಏಸಾವನ ಜೇಷ್ಠಪುತ್ರನಾದ ಎಲೀಫಜನಿಂದ ತೇಮಾನ, ಏಮಾರ, ಚೆಫೋ, ಕೆನೆಜ್,
16 : ಕೊರಹ, ಗತಾಮ, ಅಮಾಲೇಕ ಎಂಬ ಕುಲನಾಯಕರು ಹುಟ್ಟಿದರು. ಈ ಅಧಿಪತಿಗಳು ಎದೋಮ್ಯರ ನಾಡಿನಲ್ಲಿ ಆದಾಳ ಸಂತತಿಯಲ್ಲಿ ಹುಟ್ಟಿದರು.
17 : ಏಸಾವನ ಮಗ ರೆಗೂವೇಲನಿಗೆ ನಹತ, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ನಾಡಿನಲ್ಲಿ ಏಸಾವನ ಹೆಂಡತಿ ಬಾಸೆಮತಳ ಸಂತತಿಯಲ್ಲಿ ಹುಟ್ಟಿದವರು.
18 : ಏಸಾವನ ಹೆಂಡತಿ ಒಹೊಲೀಬಾಮಳ ಸಂತಾನದಲ್ಲಿ ಹುಟ್ಟಿದ ಕುಲನಾಯಕರು ಯಾರೆಂದರೆ - ಯೆಗೂಷ್, ಯಳಾಮ ಮತ್ತು ಕೊರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳ ಸಂತಾನದವರು.
19 : ಎದೋಮನೆನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ನಾಯಕರು.
20 :
ಆ ನಾಡಿನ ಮೂಲನಿವಾಸಿಗಳು ಹೋರಿಯನಾದ ಸೇಯಿರನಿಂದ ಹುಟ್ಟಿದವರು. ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
21 : ದೀಶೋನ್, ಏಚೆರ್, ದೀಶಾನ್ ಎಂದು ಅವರನ್ನು ಹೆಸರಿಸಲಾಗಿತ್ತು. ಅವರು ಎದೋಮ್ಯರ ನಾಡಿನಲ್ಲಿ ಸೇಯಿರನ ಸಂತತಿಯವರಾದ ಹೋರಿಯರಲ್ಲಿ ಹುಟ್ಟಿದ ಕುಲನಾಯಕರು.
22 : ಲೋಟಾನನಿಗೆ ಹೋರಿ ಮತ್ತು ಹೇಮಾಮ್ ಎಂಬ ಮಕ್ಕಳಿದ್ದರು. ತಿಮ್ನಾ ಎಂಬ ತಂಗಿಯೂ ಇದ್ದಳು.
23 : ಶೋಬಾಲನ ಮಕ್ಕಳು - ಅಲ್ವಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್ ಎಂಬುವರು.
24 : ಸಿಬೆಯೋನನಿಗೆ ಅಯ್ಯಾ ಮತ್ತು ಅನಾಹ ಎಂಬ ಇಬ್ಬರು ಮಕ್ಕಳು. ಈ ಅನಾಹನೇ ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಹಿಡಿದವನು.
25 : ಅನಾಹನ ಮಕ್ಕಳು ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮ.
26 : ದೀಶೋನನ ಮಕ್ಕಳು - ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
27 : ಏಚೆರನ ಮಕ್ಕಳು - ಬಿಲ್ಹಾನ್, ಜಾವಾನ್ ಮತ್ತು ಅಕಾನ್.
28 : ದೀಶಾನನ ಮಕ್ಕಳು ಊಚ್ ಮತ್ತು ಅರಾನ್.
29 : ಹೋರಿಯರಿಂದ ಹುಟ್ಟಿದ ಕುಲನಾಯಕರು ಇವರು - ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
30 : ದೀಶೋನ, ಏಚೆರ್ ಮತ್ತು ದೀಶಾನ್, ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ನಾಡಿನಲ್ಲಿ ಅಧಿಪತ್ಯ ನಡೆಸಿದ ಕುಲನಾಯಕರು ಇವರೇ.
31 :
ಇಸ್ರಯೇಲರ ಅರಸರು ಆಳುವುದಕ್ಕೆ ಮುಂಚೆ ಎದೋಮ್ಯರ ನಾಡಲ್ಲಿ ಆಳುತ್ತಿದ್ದ ಅರಸರ ಹೆಸರುಗಳು ಹೀಗಿವೆ:
32 : ಬೆಯೋರನ ಮಗ ಬಿಲಗನು ಎದೋಮ್ಯರಲ್ಲಿ ಆಳಿದನು. ಅವನ ರಾಜಧಾನಿಯ ಹೆಸರು ದಿನ್ಹಾಬಾ.
33 : ಬೆಲಗನು ಸತ್ತಮೇಲೆ ಬೊಚ್ರದವನಾದ ಚೆರಹನ ಮಗ ಯೋಬಾನನು ಆಧಿಪತ್ಯಕ್ಕೆ ಬಂದನು.
34 : ಯೋಬಾಬನು ಸತ್ತಮೇಲೆ ತೇಮಾನೀಯರ ನಾಡಿನವನಾದ ಹುಷಾಮನು ಅವನಿಗೆ ಬದಲಾಗಿ ಆಳಿದನು.
36 : ಹದದನು ಸತ್ತಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
37 : ಸಮ್ಲಾಹನು ಸತ್ತಮೇಲೆ ನದೀತೀರದಲ್ಲಿನ ರೆಹೋಬೋತೂರಿನ ಸೌಲನು ಅರಸನಾದನು.
38 : ಸೌಲನು ಸತ್ತಮೇಲೆ ಅಕ್ಬೋರನ ಮಗ ಬಾಳ್ಹಾನಾನನು ಅರಸನಾದನು.
39 : ಅಕ್ಬೋರನ ಮಗ ಬಾಳ್ಹಾನಾನನು ಸತ್ತಾದನಂತರ ಹದದನು ಅರಸನಾದನು; ಅವನ ರಾಜಧಾನಿಯ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೀದಳ ಮಗಳು.
40 : ಸ್ಥಳ - ಕುಲ ನಾಮಗಳ ಪ್ರಕಾರ ಏಸಾವನಿಂದ ಹುಟ್ಟಿದ ಕುಲನಾಯಕರ ಹೆಸರುಗಳು ಇವು: ತಿಮ್ನ, ಅಲ್ವಾ, ಯತೇತ,
41 : ಒಹೋಲೀಬಾಮಾ, ಏಲಾ, ಪೀನೋನ್,
42 : ಕೆನಜ್, ತೇಮಾನ್, ಮಿಪ್ಚಾರ, ಮಗ್ಧೀಯೇಲ್, ಗೀರಾಮ್, ಇವರೇ ತಮ್ಮ ನಾಡಿನ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಕುಲನಾಯಕರು. ಈ ಎದೋಮ್ಯರ ಮೂಲಪುರುಷನೇ ಏಸಾವ್.