Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು.
2 : ಇಷ್ಟು ವರ್ಷಗಳಾದ ಮೇಲೆ ಆಕೆ ಕಾನಾನ್ ನಾಡಿನ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಕಾಲವಾದಳು. ಅಬ್ರಹಾಮನು ಅಲ್ಲಿಗೆ ಬಂದು ಅವಳಿಗಾಗಿ ಕಣ್ಣೀರಿಟ್ಟು ಗೋಳಾಡಿದನು.
3 : ಅನಂತರ ಅವನು ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಬಂದು,
4 : ನಿಮ್ಮ ಮಧ್ಯೆ ನಾನೊಬ್ಬ ಹೊರನಾಡಿಗ, ಒಬ್ಬ ಪ್ರವಾಸಿ, ಮೃತಳಾಗಿರುವ ನನ್ನ ಪತ್ನಿಯನ್ನು ಸಮಾಧಿ ಮಾಡಲು ಸ್ವಲ್ಪ ಜವಿೂನನ್ನು ನನ್ನ ಸ್ವಂತಕ್ಕೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ,” ಎಂದನು.
5 : ಆ ಹಿತ್ತಿಯರು, “ಒಡೆಯಾ, ಇತ್ತ ಕೇಳಿ. ನೀವು ನಮಗೆ ಒಬ್ಬ ಮಹಾರಾಜರಂತೆ ಇದ್ದೀರಿ. ಮೃತಳಾದ ನಿಮ್ಮ ಪತ್ನಿಯ ಶವವನ್ನು ನಮ್ಮಲ್ಲಿರುವ ಶ್ರೇಷ್ಠ ಸಮಾಧಿಗಳೊಂದರಲ್ಲಿ ಭೂಸ್ಥಾಪನೆ ಮಾಡಬಹುದು.
6 : ನಮ್ಮಲ್ಲಿ ಸ್ಮಶಾನ ಭೂಮಿಯಿರುವ ಯಾರೂ ನಿಮಗೆ ಕೊಡುವುದಕ್ಕೆ ಹಿಂಜರಿಯುವುದಿಲ್ಲ,” ಎಂದು ಉತ್ತರಕೊಟ್ಟರು.
7 : ಅಬ್ರಹಾಮನು ಎದ್ದು ನಿಂತು ಆ ಹಿತ್ತಿಯ ನಾಡಿಗರಿಗೆ ಬಾಗಿ ನಮಸ್ಕರಿಸಿದನು.
8 : ಅವರೊಡನೆ ಮಾತನ್ನು ಮುಂದುವರಿಸುತ್ತಾ ಅವನು, “ನನ್ನ ಪತ್ನಿಯ ಶವವನ್ನು ಇಲ್ಲಿ ಸಮಾಧಿ ಮಾಡುವುದು ನಿಮಗೆ ಒಪ್ಪಿಗೆಯಾದರೆ ನನ್ನ ವಿಜ್ಞಾಪನೆ ಇದು: ನೀವು ಜೋಹರನ ಮಗನಾದ ಎಫ್ರೋನನ ಸಂಗಡ ನನ್ನ ಪರವಾಗಿ ಮಾತಾಡಿ,
9 : ಅವನ ಜವಿೂನಿನ ಅಂಚಿನಲ್ಲಿರುವ ಮಕ್ಪೇಲದ ಗವಿಯನ್ನು ನನಗೆ ಕೊಡಿಸಬೇಕೆಂದು ವಿನಂತಿಸುತ್ತೇನೆ. ಅವನು ಆ ಸಮಾಧಿಯ ಸ್ಥಳವನ್ನು ನನ್ನ ಸ್ವಂತಕ್ಕೆ ನಿಮ್ಮ ಎದುರಿಗೇ ಬಿಟ್ಟುಕೊಟ್ಟರೆ ಪೂರ್ಣ ಕ್ರಯವನ್ನು ಕೊಟ್ಟುಬಿಡುತ್ತೇನೆ,” ಎಂದನು.
10 : ಸದ್ಯಕ್ಕೆ ಎಫ್ರೋನನೇ ಅಲ್ಲಿ ಆ ಹಿತ್ತಿಯರ ನಡುವೆ ಕುಳಿತಿದ್ದನು. ಅವನೂ ಒಬ್ಬ ಹಿತ್ತಿಯನಾಗಿದ್ದನು. ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ಅವನು ಅಬ್ರಹಾಮನಿಗೆ,
11 : “ಒಡೆಯಾ, ನನ್ನ ಮಾತಿಗೆ ಸ್ವಲ್ಪ ಕಿವಿಗೊಡಿ; ಆ ಜವಿೂನನ್ನೂ ಅದರಲ್ಲಿರುವ ಗವಿಯನ್ನೂ ನಿಮಗೆ ದಾನಮಾಡಿ ಬಿಡುತ್ತೇನೆ; ನನ್ನ ಈ ಜನರ ಮುಂದೆಯೇ ದಾನ ಕೊಡುತ್ತೇನೆ; ಮೃತಳಾದ ನಿಮ್ಮ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು,” ಎಂದು ಹೇಳಿದನು.
12 : ಅಬ್ರಹಾಮನು ಆ ನಾಡಿಗರಿಗೆ ಬಾಗಿ ವಂದಿಸಿದನು.
13 : ಅವರೆಲ್ಲರ ಮುಂದೆ ಎಫ್ರೋನನನ್ನು ಉದ್ದೇಶಿಸಿ, “ಕೊಡಲು ಇಷ್ಟವಿದ್ದರೆ ದಯವಿಟ್ಟು ನಾನು ಅರಿಕೆ ಮಾಡುವುದನ್ನು ಕೇಳು: ಆ ಜವಿೂನಿಗೆ ಕ್ರಯ ಕೊಡುತ್ತೇನೆ: ಆ ಕ್ರಯವನ್ನು ತೆಗೆದುಕೊಳ್ಳಲು ಸಮ್ಮತಿಸಿದರೆ ನನ್ನ ಪತ್ನಿಯನ್ನು ಅಲ್ಲಿ ಸಮಾಧಿ ಮಾಡುತ್ತೇನೆ,” ಎಂದು ಹೇಳಿದನು.
14 : ಅದಕ್ಕೆ ಎಫ್ರೋನನು, “ಒಡೆಯಾ, ನನ್ನ ಮಾತನ್ನು ಆಲಿಸು:
15 : ಕೇವಲ ನಾನೂರು ಬೆಳ್ಳಿನಾಣ್ಯ ಬಾಳುವ ಆ ಜವಿೂನಿನ ವಿಷಯದಲ್ಲಿ ನಿಮಗೂ ನನಗೂ ವಾದವೇತಕ್ಕೆ? ಸಮಾಧಿ ಮಾಡಬಹುದು,” ಎಂದನು.
16 : ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿ, ಅವನು ಆ ಹಿತ್ತಿಯರ ಮುಂದೆ ಸೂಚಿಸಿದ ನಾನೂರು ಬೆಳ್ಳಿ ನಾಣ್ಯಗಳನ್ನು, ವ್ಯಾಪಾರಿಗಳಲ್ಲಿ ಪ್ರಚಲಿತವಾಗಿದ್ದ ಬೆಳ್ಳಿಯಿಂದ ತೂಕಮಾಡಿ ಕೊಟ್ಟನು.
17 : ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಜವಿೂನು, ಅದಕ್ಕೆ ಸೇರಿದ ಗವಿ, ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿದ್ದ ಮರಗಳು, ಇವೆಲ್ಲವೂ
18 : ಅಬ್ರಹಾಮನಿಗೆ ಸ್ವಂತವೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆಯೇ ತೀರ್ಮಾನವಾಯಿತು.
19 : ಇದಾದ ಮೇಲೆ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಜಮೀನಿನಲ್ಲಿರುವ ಗವಿಯೊಳಗೆ ಸಮಾಧಿ ಮಾಡಿದನು.
20 : ಆ ಜವಿೂನನ್ನೂ ಅದರಲ್ಲಿರುವ ಗವಿಯನ್ನೂ ಅಬ್ರಹಾಮನಿಗೆ ಸ್ವಂತ ಸ್ಮಶಾನ ಭೂಮಿಯಾಗಲೆಂದು ಸ್ವಾಧೀನಗೊಳಿಸಿದವರು ಆ ಹಿತ್ತಿಯರೇ.

· © 2017 kannadacatholicbible.org Privacy Policy