1 : ಸರ್ಕಾರಕ್ಕೆ ಸಲ್ಲತಕ್ಕ ಸೇವೆ
ಪ್ರತಿಯೊಬ್ಬನು ತನ್ನ ಮೇಲಿನ ಅಧಿಕಾರಿಗಳಿಗೆ ಅಧೀನನಾಗಿರಬೇಕು. ಅಧಿಕಾರವೆಲ್ಲವೂ ಬರುವುದು ದೇವರಿಂದಲೇ. ಈಗಿರುವ ಅಧಿಕಾರಿಗಳೂ ದೇವರಿಂದಲೇ ನೇಮಕಗೊಂಡವರು.
2 : ಆದುದರಿಂದ ಅಧಿಕಾರವನ್ನು ವಿರೋಧಿಸುವವರು ದೇವರ ಆ ನೇಮಕವನ್ನೇ ವಿರೋಧಿಸುತ್ತಾರೆ. ಅಂಥವರು ಶಿಕ್ಷೆಗೆ ಗುರಿಯಾಗುತ್ತಾರೆ
3 : ಕೆಟ್ಟದ್ದನ್ನು ಮಾಡುವವನೇ ಹೊರತು ಒಳ್ಳೆಯದನ್ನು ಮಾಡುವವನು ಅಧಿಕಾರಿಗೆ ಭಯಪಡಬೇಕಾಗಿಲ್ಲ. ಅಧಿಕಾರಿಯ ಮುಂದೆ ನಿರ್ಭಯನಾಗಿರಲು ನಿನಗೆ ಇಷ್ಟವಿದ್ದರೆ ಒಳ್ಳೆಯದನ್ನೇ ಮಾಡುತ್ತಿರು. ಆಗ ಆತನು ನಿನ್ನನ್ನು ಪ್ರಶಂಸಿಸುವನು.
4 : ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ. ಆದರೆ ನೀನು ಕೆಟ್ಟದ್ದನ್ನು ಮಾಡಿದೆ ಆದರೆ ಭಯಪಡಲೇಬೇಕು. ಏಕೆಂದರೆ, ಆತನ ಕೈಯಲ್ಲಿರುವ ಅಧಿಕಾರ ದಂಡವು ವ್ಯರ್ಥವಾದುದೇನೂ ಅಲ್ಲ. ದೇವರ ದಾಸನಾಗಿರುವ ಆತನು ಕೆಟ್ಟದ್ದನ್ನು ಮಾಡುವವರಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.
5 : ಆದ್ದರಿಂದ ನಿಮ್ಮ ಅಧಿಕಾರಿಗಳಿಗೆ ಅಧೀನರಾಗಿರಿ. ಕೇವಲ ದಂಡನೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲ, ನಿಮ್ಮ ಮನಸ್ಸಾಕ್ಷಿಯ ಸಲುವಾಗಿ.
6 : ನೀವು ಕಂದಾಯವನ್ನು ಕಟ್ಟುತ್ತಿರುವುದೂ ಈ ಕಾರಣದಿಂದಲೇ. ಅಧಿಕಾರಿಗಳು ದೇವರ ದಾಸರು. ಅವರು ತಮ್ಮ ಪ್ರಸ್ತುತ ಕಾರ್ಯಗಳನ್ನು ನಿರ್ವಹಿಸುವಾಗ ದೇವರ ಸೇವೆಯನ್ನು ಮಾಡುತ್ತಾರೆ.
7 : ಆದ್ದರಿಂದ ಸಲ್ಲಿಸಬೇಕಾದುದನ್ನು ಅವರಿಗೆ ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು, ಯಾರಿಗೆ ವಿಧೇಯತೆಯೋ ಅವರಿಗೆ ವಿಧೇಯತೆಯನ್ನು, ಯಾರಿಗೆ ಗೌರವವೋ ಅವರಿಗೆ ಗೌರವವನ್ನು ಸಲ್ಲಿಸಿರಿ.
8 :
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು.
9 : “ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,” - ಈ ಮುಂತಾದ ಆಜ್ಞೆಗಳೆಲ್ಲವೂ “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ಅಡಗಿವೆ.
10 : ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.
11 : ಇದೆಂಥ ಕಾಲವೆಂದು ತಿಳಿದಿರುವ ನೀವು ಇದೆಲ್ಲವನ್ನು ಮಾಡಬೇಕು. ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ವೇಳೆಯು ಸವಿೂಪಿಸಿತು. ನಾವು ಕ್ರಿಸ್ತಯೇಸುವನ್ನು ವಿಶ್ವಾಸಿಸಲು ಆರಂಭಿಸಿದಾಗ ಇದ್ದುದಕ್ಕಿಂತಲೂ ಈಗ ನಮ್ಮ ಉದ್ಧಾರವು ಸವಿೂಪವಾಗಿದೆ.
12 : ಇರುಳು ಬಹುಮಟ್ಟಿಗೆ ಕಳೆಯಿತು. ಹಗಲು ಸವಿೂಪಿಸಿತು. ಇನ್ನು ಅಂಧಕಾರಕ್ಕೆ ಅನುಗುಣವಾದ ದುಷ್ಕøತ್ಯಗಳನ್ನು ತ್ಯಜಿಸಿಬಿಡೋಣ. ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ.
13 : ದುಂದೌತಣ - ಕುಡಿತಗಳಲ್ಲಾಗಲೀ, ಕಾಮವಿಲಾಸ - ನಿರ್ಲಜ್ಜಾಕೃತ್ಯಗಳಲ್ಲಾಗಲೀ, ಕಲಹ - ಮತ್ಸರಗಳಲ್ಲಾಗಲೀ ಕಾಲಕಳೆಯದೆ ಬೆಳಕಿನಲ್ಲಿ ಬಾಳುವವರಂತೆ ಸಭ್ಯರಾಗಿ ವರ್ತಿಸೋಣ.
14 : ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ.