1 :
ಸುರನರರ ನುಡಿಗಳ ನಾನಾಡಬಲ್ಲೆ
ನಾದರೂ
ಪರಮ ಪ್ರೀತಿಯೊಂದೆನಗಿಲ್ಲದಿರಲು
ನಾ ಕೇವಲ ಗಣಗಣಿಸುವ ಘಂಟೆ,
ಝಣಝಣಿಸುವ ಜಾಗಟೆ.
2 : ಪ್ರವಾದನೆಯ ವರವೆನಗಿರಬಹುದು
ಇರಬಹುದು ನಿಗೂಢ ರಹಸ್ಯಗಳರಿವು
ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ
ವಿಶ್ವಾಸ
ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ.
3 : ನನಗಿರುವುದೆಲ್ಲವನು ನಾ ದಾನಮಾಡೆ
ದೇಹವನೆ ಸಜೀವ ದಹಿಸಲು ನೀಡೆ
ನಾನಾಗಿರೆ ಪರಮ ಪ್ರೀತಿ ವಿಹೀನ
ಏನದು ಜೀವನ, ನನಗೇನದು ಪ್ರಯೋಜನ?
4 : ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ.
ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ,
ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ,
ಸ್ವಾರ್ಥಕೆ, ಸೇಡುಗಳೆಣಿಕೆಗೆ.
ನಲಿಯದು ಪ್ರೀತಿ ಅನೀತಿಯಲಿ
ನಲಿಯದಿರದದು ಸತ್ಯದ ಜಯದಲಿ.
5 : ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ.
ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ,
ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ,
ಸ್ವಾರ್ಥಕೆ, ಸೇಡುಗಳೆಣಿಕೆಗೆ.
ನಲಿಯದು ಪ್ರೀತಿ ಅನೀತಿಯಲಿ
ನಲಿಯದಿರದದು ಸತ್ಯದ ಜಯದಲಿ.
6 : ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ.
ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ,
ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ,
ಸ್ವಾರ್ಥಕೆ, ಸೇಡುಗಳೆಣಿಕೆಗೆ.
ನಲಿಯದು ಪ್ರೀತಿ ಅನೀತಿಯಲಿ
ನಲಿಯದಿರದದು ಸತ್ಯದ ಜಯದಲಿ.
7 : ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು,
ಸಹಿಸಿಕೊಳ್ಳುವುದು ಸಮಸ್ತವನು
ಪ್ರೀತಿಯದೆಂದೂ ಅರಿಯದು ಸೋಲನು.
8 : ಅಳಿದುಹೋಗುವುವು ಭವಿಷ್ಯವಾಣಿ
ಗತಿಸಿಹೋಗುವುದು ಬಹುಭಾಷಾ ಶಕ್ತಿ
ಹೋಗುವುವು ನಶಿಸಿ ಜ್ಞಾನ, ಬುದ್ಧಿ.
ಆದರೆ ಅಮರವಾದುದು ಪರಮ ಪ್ರೀತಿ.
9 : ಅಳಿದುಹೋಗುವುವು ಭವಿಷ್ಯವಾಣಿ
ಗತಿಸಿಹೋಗುವುದು ಬಹುಭಾಷಾ ಶಕ್ತಿ
ಹೋಗುವುವು ನಶಿಸಿ ಜ್ಞಾನ, ಬುದ್ಧಿ.
ಆದರೆ ಅಮರವಾದುದು ಪರಮ ಪ್ರೀತಿ.
10 : ಅಪೂರ್ವವಾದುದು ನಮ್ಮಾ ಅರಿವೆಲ್ಲ
ಪೂರ್ಣವಾದುದಲ್ಲ ಪ್ರವಾದನವದೆಲ್ಲ;
ಪರಿಪೂರ್ಣತೆ ಪ್ರಾಪ್ತವಾಗಲು
ಇಲ್ಲವಾಗುವುದು ಅಪೂರ್ಣತೆಯೆಲ್ಲ.
11 : ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ,
ಚಿಂತಿಸಿದೆ, ಸುಖದುಃಖಗಳ ಸವಿದೆ
ಬಾಲಕನಂತೆ.
ಬಲಿತು ಬೆಳೆದು ಮನುಜನಾದುದೆ
ಬಾಲಿಶವಾದುದೆಲ್ಲವನು ಬದಿಗೊತ್ತಿದೆ.
12 : ನಾವೀಗ ಕಾಂಬುದು ದರ್ಪಣದ ಬಿಂಬವನು
ಮುಸುಕಾಗಿ
ತರುವಾಯ ಕಾಂಬೆವು ದೇವರನು
ಮುಖಾಮುಖಿಯಾಗಿ.
ಈಗಿರುವುದೆನ್ನ ಅರಿವು ತುಂಡುತುಂಡಾಗಿ
ನಂತರ ದೇವನೆನ್ನ ಅರಿತಂತೆ
ಈ ಮೂರಲಿ ನಾನರಿವೆನು ಅಖಂಡವಾಗಿ
13 : ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ;
ಈ ಮೂರರಲಿ ಪ್ರೀತಿಯೇ ಪರಮೋನ್ನತ
ವೆಂಬುದ ನೀನರಿ.