1 : 149ನೇ ವರ್ಷದಲ್ಲಿ ಜುದೇಯದ ಮೇಲೆ ದಾಳಿಮಾಡಲು ಅಂತಿಯೋಕ ಯುಪಾತರನು ದೊಡ್ಡ ಸೈನ್ಯದೊಂದಿಗೆ ಬರುತ್ತಿದ್ದಾನೆಂದು ತಿಳಿಯಿತು.
2 : ಅವನೊಂದಿಗೆ ರಾಜ್ಯ ಅಧಿಕಾರಿಯೂ ರಾಜಕುಮಾರನ ಪೋಷಕನೂ ಆಗಿದ್ದ ಲೂಸ್ಯನು ಇದ್ದಾನೆ ಎಂಬ ವದಂತಿ ಯೂದ ಮತ್ತು ಅವನ ಸಂಗಡಿಗರಿಗೆ ತಲುಪಿತು. ಅವರಿಬ್ಬರಿಗೆ 1,10,000 ಕಾಲಾಳುಗಳು, 5,3000 ರಾಹುತರು, 22 ಆನೆಗಳು, ಹಾಗು 300 ರಥಗಳು ಇದ್ದವು. ಆ ರಥಗಳ ಚಕ್ರಗಳಿಗೆ, ಚಕ್ರಾಕಾರದ ಗರಗಸಗಳಿದ್ದವು.
3 : ಈ ಅವಕಾಶವನ್ನು ದುರುಪಯೋಗಿಸಿಕೊಳ್ಳಲು ಮೆನೆಲಾವ್ಸನು ಅಂತಿಯೋಕನ ಕಡೆ ಹೋಗಿ ಅವನಿಗೆ ಬೆಂಬಲಕೊಟ್ಟಂತೆ ನಟಿಸಿದನು. ಅವನು ಇದನ್ನು ಮಾಡಿದ್ದು ರಾಷ್ಟ್ರದ ಮೇಲಿನ ಅಭಿಮಾನದಿಂದಲ್ಲ, ಆದರೆ ಪ್ರಧಾನಯಾಜಕ ಪದವಿಯನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ.
4 : ಆದರೆ ರಾಜಾಧಿರಾಜರಾದ ದೇವರು ಈ ದುಷ್ಟ ಕುತಂತ್ರಿಯ ಮೇಲೆ ಅಂತಿಯೋಕನ ಕೋಪವನ್ನು ಕೆರಳಿಸಿದರು. ಹೇಗೆಂದರೆ, ಮೆನೆಲಾವ್ಸನೇ ಎಲ್ಲಾ ಅಪಘಾತಗಳಿಗೆ ಮೂಲ ಕಾರಣನೆಂದು ಲೂಸ್ಯನು ಅಂತಿಯೋಕನಿಗೆ ತಿಳಿಸಿದಾಗ, ಅಂತಿಯೋಕನು ತಕ್ಷಣವೇ ಮೆನೆಲಾವ್ಸನನ್ನು ಹಿಡಿದು ಬೆರೋಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವರ ಪದ್ಧತಿಯ ಪ್ರಕಾರ, ಅವನನ್ನು ಕೊಲ್ಲಿಸಬೇಕೆಂದು ಆಜ್ಞೆಮಾಡಿದನು.
5 : ಆದರೆ ರಾಜಾಧಿರಾಜರಾದ ದೇವರು ಈ ದುಷ್ಟ ಕುತಂತ್ರಿಯ ಮೇಲೆ ಅಂತಿಯೋಕನ ಕೋಪವನ್ನು ಕೆರಳಿಸಿದರು. ಹೇಗೆಂದರೆ, ಮೆನೆಲಾವ್ಸನೇ ಎಲ್ಲಾ ಅಪಘಾತಗಳಿಗೆ ಮೂಲ ಕಾರಣನೆಂದು ಲೂಸ್ಯನು ಅಂತಿಯೋಕನಿಗೆ ತಿಳಿಸಿದಾಗ, ಅಂತಿಯೋಕನು ತಕ್ಷಣವೇ ಮೆನೆಲಾವ್ಸನನ್ನು ಹಿಡಿದು ಬೆರೋಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವರ ಪದ್ಧತಿಯ ಪ್ರಕಾರ, ಅವನನ್ನು ಕೊಲ್ಲಿಸಬೇಕೆಂದು ಆಜ್ಞೆಮಾಡಿದನು.
6 : ದೇವದ್ರೋಹವನ್ನಾಗಲಿ, ಇತರ ಘನಾಪರಾಧವನ್ನಾಗಲಿ ಮಾಡಿದವರನ್ನು ಆ ಗೋಪುರದ ಮೇಲಿಂದ ತಳ್ಳಿ ಸಾಯಿಸುತ್ತಿದ್ದರು.
7 : ಈ ರೀತಿಯಲ್ಲಿ ಮೆನೆಲಾವ್ಸನನ್ನು ವಧಿಸಲಾಯಿತು. ಅವನಿಗೆ ಶವಸಂಸ್ಕಾರವನ್ನು ಪಡೆಯುವ ಅವಕಾಶ ಇಲ್ಲದಂತಾಯಿತು.
8 : ಇದು ಅವನಿಗೆ ನ್ಯಾಯ ದಂಡನೆಯೇ ಆಗಿತ್ತು. ಏಕೆಂದರೆ ಅವನು ಪರಿಶುದ್ಧವಾದ ಬಲಿಪೀಠದ ಅಗ್ನಿ ಮತ್ತು ಬೂದಿಯನ್ನು ಹೊಲೆಮಾಡಿದ್ದನು. ಈಗ ಅವನು ಬೂದಿಯಲ್ಲೇ ಸಾವನ್ನಪ್ಪಬೇಕಾಯಿತು.
9 : ತನ್ನ ತಂದೆಯ ಕಾಲದಲ್ಲಿ ನಡೆದುದಕ್ಕಿಂತಲೂ ಹೆಚ್ಚಿನ ಬರ್ಬರ ರೀತಿಯಲ್ಲಿ ಅಂತಿಯೋಕನು ಯೆಹೂದ್ಯರ ಮೇಲೆ ದಾಳಿಮಾಡಬೇಕೆಂದು ಯೋಜನೆ ಮಾಡಿದನು.
10 : ಯೂದನಿಗೆ ಈ ಸಮಾಚಾರ ಮುಟ್ಟಿತು. ಕೂಡಲೇ, ತಮ್ಮ ಧರ್ಮಶಾಸ್ತ್ರ, ನಾಡು ಮತ್ತು ಮಹಾಪವಿತ್ರ ದೇವಾಲಯವನ್ನು ಕಳೆದುಕೊಳ್ಳುವ ಈ ಅಪಾಯಕರ ಸಂದರ್ಭದಲ್ಲಿ ದೇವರನ್ನು ಹಗಲೂ ರಾತ್ರಿ ಪ್ರಾರ್ಥಿಸಬೇಕೆಂದು ಜನರಿಗೆ ತಿಳಿಸಿದನು.
11 : ಈಗ ತಾನೇ ಪುನರ್ಜೀವ ಪಡೆದಂತಿದ್ದ ತಮ್ಮ ನಾಡು ವಿಶ್ವಾಸರಹಿತ ಪರಕೀಯರ ಕೈಗೆ ಸಿಕ್ಕಿ ಬೀಳದಂತೆ ಕಾಪಾಡಲು ದೇವರಲ್ಲಿ ಮೊರೆಯಿಡಬೇಕೆಂದು ತನ್ನ ಜನರಿಗೆ ಆಜ್ಞಾಪಿಸಿದನು.
12 : ಅವರೆಲ್ಲರು ಮೂರು ದಿನಗಳವರೆಗೆ ಉಪವಾಸಮಾಡಿ, ಸಾಷ್ಟಾಂಗವಾಗಿ ಬಿದ್ದು, ಕಣ್ಣೀರು ಇಡುತ್ತಾ ಒಕ್ಕೊರಲಿನಿಂದ ದೇವರ ಸಹಾಯಕ್ಕಾಗಿ ಪ್ರಾರ್ಥನೆಮಾಡಿದರು. ಅನಂತರ, ಯೂದನು ಅವರಿಗೆ ಉತ್ತೇಜನವನ್ನಿತ್ತು ಯುದ್ಧಕ್ಕೆ ಸಿದ್ಧರಾಗಬೇಕೆಂದು ಅಪ್ಪಣೆ ಮಾಡಿದನು.
13 : ತರುವಾಯ ಯೂದನು ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದನು. ಆಮೇಲೆ ಅರಸನ ಸೈನ್ಯ ಜುದೇಯನಾಡನ್ನು ಪ್ರವೇಶಿಸಿ, ಜೆರುಸಲೇಮನ್ನು ವಶಪಡಿಸಿಕೊಳ್ಳುವುದಕ್ಕೆ ಮುಂಚಿತವಾಗಿಯೇ, ದೇವರ ಸಹಾಯದಿಂದ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದನು.
14 : ವಿಶ್ವದ ಸೃಷ್ಟಿಕರ್ತರಿಗೆ ಯುದ್ಧದ ಪರಿಣಾಮವನ್ನು ಬಿಟ್ಟು, ತಮ್ಮ ಧರ್ಮಶಾಸ್ತ್ರಕ್ಕಾಗಿ, ತಮ್ಮ ಇಡೀ ಆಚಾರ ವಿಚಾರಗಳಿಗಾಗಿ ಶೂರರಂತೆ ಹೋರಾಡಲು ಹುರಿದುಂಬಿಸಿದನು. ಇದೇ ಯೂದನು ಮೊದೇನ ನಗರದ ಬಳಿ ದಂಡಿಳಿಸಿದನು.
15 : ದೇವರಿಂದಲೇ ವಿಜಯ ಎಂಬ ಯುದ್ಧದ ಕರೆಯಿತ್ತು ಧೀರ ಯುವಕರ ದಳದೊಂದಿಗೆ ರಾತ್ರಿಯಲ್ಲಿ ಅರಸನ ಡೇರೆಯನ್ನು ಮುತ್ತಿದನು; ಅದರೊಳಗಿದ್ದ ಸುಮಾರು ಎರಡು ಸಾವಿರ ಜನರನ್ನು ವಧಿಸಿದನು. ಅವನ ಯೋಧರು ಅತಿ ದೊಡ್ಡ ಆನೆಯನ್ನು ಅದರ ಮಾವಟಿಗನೊಂದಿಗೆ ತಿವಿದು ಕೊಂದುಹಾಕಿದರು.
15 : ದೇವರಿಂದಲೇ ವಿಜಯ ಎಂಬ ಯುದ್ಧದ ಕರೆಯಿತ್ತು ಧೀರ ಯುವಕರ ದಳದೊಂದಿಗೆ ರಾತ್ರಿಯಲ್ಲಿ ಅರಸನ ಡೇರೆಯನ್ನು ಮುತ್ತಿದನು; ಅದರೊಳಗಿದ್ದ ಸುಮಾರು ಎರಡು ಸಾವಿರ ಜನರನ್ನು ವಧಿಸಿದನು. ಅವನ ಯೋಧರು ಅತಿ ದೊಡ್ಡ ಆನೆಯನ್ನು ಅದರ ಮಾವಟಿಗನೊಂದಿಗೆ ತಿವಿದು ಕೊಂದುಹಾಕಿದರು.
16 : ಡೇರೆಯೊಳಗಿದ್ದವರೆಲ್ಲ ಭಯಭೀತಿಯಿಂದ ಗಲಿಬಿಲಿಗೊಂಡರು. ಅಂತಿಮವಾಗಿ ಮುಂಜಾನೆ ಬೆಳಕು ಹರಿಯುವಾಗ ಯೂದನು ತನ್ನ ಜನರೊಡನೆ ಜಯಭೇರಿಯೊಂದಿಗೆ ಅಲ್ಲಿಂದ ಹೊರಟನು.
17 : ಇದೆಲ್ಲವು ಸರ್ವೇಶ್ವರನ ಅಭಯ ಹಸ್ತದಿಂದಲೆ ಸಾಧ್ಯವಾಯಿತು.
ಯೆಹೂದ್ಯರೊಂದಿಗೆ ಅಂತಿಯೋಕನ ಒಪ್ಪಂದ
18 : ಯೆಹೂದ್ಯರ ಶೌರ್ಯವನ್ನು ಕಂಡ ಅರಸ ಅಂತಿಯೋಕನು ಈಗ ಕುತಂತ್ರಗಳಿಂದ ಅವರ ಸೇನಾಸ್ಥಾನಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿದನು.
19 : ಯೆಹೂದ್ಯರ ಬಲವಾದ ಕೋಟೆಯಾಗಿದ್ದ ಬೆತ್‍ಜೂರ್ ದುರ್ಗದ ಮೇಲೆ ದಾಳಿಮಾಡಿದನು; ಅವನು ಹಿಮ್ಮೆಟ್ಟಬೇಕಾಯಿತು. ಆದರೂ ಪುನಃ ದಾಳಿ ಮಾಡಿ ಮತ್ತೆ ಸೋಲನ್ನು ಅನುಭವಿಸಿದನು.
20 : ಕೋಟೆಯನ್ನು ರಕ್ಷಿಸುತ್ತಿದ್ದ ಜನರಿಗೆ ಯೂದನು ಬೇಕಾದ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದನು.
21 : ಆದರೆ ರೊದೋಕಸ್ ಎಂಬ ಯೆಹೂದ್ಯ ಸೈನಿಕನೊಬ್ಬನು ಶತ್ರುವಿಗೆ ಗುಟ್ಟಾಗಿ ಸಮಾಚಾರವನ್ನು ತಲುಪಿಸಿದ್ದನು. ಅವನನ್ನು ಹುಡುಕಿ, ಹಿಡಿದು ಕೊಲ್ಲಿಸಿದರು.
22 : ಅರಸನು ಬೆತ್‍ಜೂರಿನ ಕೋಟೆಯವರೊಂದಿಗೆ ಎರಡನೇ ಸಾರಿ ಸಂಧಾನ ಮಾಡಿಕೊಳ್ಳಲು ಮಾತುಕತೆ ನಡೆಸಿದನು. ಸಮಾಧಾನದ ವಾಗ್ದಾನವನ್ನು ವಿನಿಮಯ ಮಾಡಿಕೊಂಡು ಹಿಂದಿರುಗಿದನು. ಆದರೆ ಪುನಃ ಯೂದನನ್ನೂ ಅವನ ಜನರನ್ನೂ ಮುತ್ತಿದಾಗ ಸೋಲನ್ನಪ್ಪಬೇಕಾಯಿತು.
23 : ಅಷ್ಟರಲ್ಲಿ ತನ್ನ ರಾಜ್ಯದ ಉಸ್ತುವಾರಿಯನ್ನು ನೋಡುತ್ತಿದ್ದ ಫಿಲಿಪ್ಪನೇ ದಂಗೆಯೆದ್ದನೆಂಬ ಸುದ್ದಿ ಅಂತಿಯೋಕನಿಗೆ ಮುಟ್ಟಿತು. ಇದರಿಂದ ಅವನಿಗೆ ದಿಗ್ಭ್ರಮೆಯುಂಟಾಗಿ ಯೆಹೂದ್ಯರನ್ನು ಅವರ ನ್ಯಾಯಬದ್ಧ ಷರತ್ತುಗಳಿಗೆಲ್ಲಾ ಪ್ರಮಾಣಪೂರ್ವಕವಾಗಿ ಒಪ್ಪಿ ಸಂಧಾನ ಮಾಡಿಕೊಂಡನು. ಇದಾದ ಬಳಿಕ ಬಲಿದಾನ ಮಾಡಿ ಮಹಾ ದೇವಾಲಯದ ಮೇಲಿನ ಅಭಿಮಾನವನ್ನು ತೋರಿಸಲು ಧಾರಾಳವಾಗಿ ಧನಸಹಾಯ ಮಾಡಿದನು.
24 : ಯೂದ ಮಕ್ಕಬಿಯನನ್ನು ಪ್ರೀತಿಯಿಂದ ಸ್ವಾಗತಿಸಿದನು. ತದನಂತರ ಪ್ತೊಲೆಮಾಯ ಮತ್ತು ಗೆರಾರ್ ನಗರಗಳ ನಡುವೆಯಿರುವ ಪ್ರಾಂತ್ಯಕ್ಕೆ ಹೆಗೆಮೋನಿದೆಸ್ ಎಂಬವನನ್ನು ರಾಜ್ಯಪಾಲನನ್ನಾಗಿ ನೇಮಕಮಾಡಿ, ತಾನೇ ಪ್ತೊಲೆಮಾಯಕ್ಕೆ ಹೋದನು.
25 : ಆದರೆ ಅವನು ಯೆಹೂದ್ಯರೊಡನೆ ಮಾಡಿದ ಒಪ್ಪಂದದ ನಿಮಿತ್ತ ಪ್ತೊಲೆಮಾಯದವರಿಗೆ ಕೋಪವುಂಟಾಗಿತ್ತು; ಒಪ್ಪಂದವನ್ನು ಮುರಿಯಬೇಕೆಂದು ಒತ್ತಾಯಿಸಿದರು.
26 : ಆದರೆ ಲೂಸ್ಯನು ಆ ಒಪ್ಪಂದದ ಬಗ್ಗೆ ಬಹಿರಂಗವಾಗಿ ಭಾಷಣಮಾಡಿ, ಜನರಿಗೆ ಮನವರಿಕೆ ಮಾಡಿಕೊಟ್ಟನು. ಜನರಿಗೆ ಸಮಾಧಾನವಾಗಲು ಲೂಸ್ಯನು ಜನರ ಮನವೊಲಿಸಿಕೊಂಡು, ಅಂತಿಯೋಕಕ್ಕೆ ಹಿಂದಿರುಗಿದನು. ಹೀಗೆ ಅರಸನಾದ ಅಂತಿಯೋಕನ ದಾಳಿ ಹಿಮ್ಮೆಟ್ಟುವುದರ ಮೂಲಕ ಮುಕ್ತಾಯಗೊಂಡಿತು.