1 : ಈ ಕಾರಣ ಆ ಜನರು ಬಾಧಿತ
ರಾದರು ಅಂಥ ಪ್ರಾಣಿಗಳಿಂದಲೇ
ನೋವುಬಾಧೆಗಳಿಗೆ ಒಳಗಾದರು ಆ
ವಿಶೇಷ ಜಂತುಗಳಿಂದಲೇ.
2 : ಇಂಥ ಶಿಕ್ಷೆಗೆ ಬದಲಾಗಿ ಹಿತಗೈದಿರಿ
ದೇವಾ ನಿಮ್ಮ ಜನರಿಗೆ
ಅಪೂರ್ವ ಲಾವಕ್ಕಿಭೋಜನ ಸಿದ್ಧಿ
ಮಾಡಿದಿರಿ
ಅವರ ಹಸಿವು ಬಯಕೆಗಳ ಇಂಗಿಸಲಿಕೆ.
3 : ಶತ್ರುಗಳು ಹಸಿದಿದ್ದಾಗ ಕಳುಹಿಸಲಾದ
ಅಸಹ್ಯಪ್ರಾಣಿಗಳನ್ನು ಕಂಡು
ಅಗತ್ಯವಾದ ಅನ್ನವನ್ನು ಕೂಡ
ಹೇಸಿಕೊಳ್ಳುವಂತಾಯಿತು!
ನಿಮ್ಮ ಜನರು ತುಸುಕಾಲ ಹಸಿದು
ಬಳಲಿದರಾದರೂ
ಅಪೂರ್ವ ಆಹಾರವನ್ನು ಊಟ
ಮಾಡುವಂತಾಯಿತು.
4 : ಆ ಹಿಂಸಕರು ಕಠಿಣವಾದ ಕೊರತೆಯನ್ನು
ಅನುಭವಿಸುವುದು ಉಚಿತವಾಗಿತ್ತು
ಶತ್ರುಗಳಿಗಾದ ಸಂಕಟವನು ನಿಮ್ಮವರಿಗೆ
ತೋರಿಸುವುದು ಮಾತ್ರ ಬೇಕಾಗಿತ್ತು.
5 : ಭೀಕರ ಕಾಡುಮೃಗಗಳು ನಿಮ್ಮವರ ಮೇಲೆ
ಎರಗಿಬಂದಾಗಲು
ಕೆಟ್ಟ ಹಾವುಗಳ ಕಡಿತದಿಂದ ಇವರು
ನಾಶವಾಗುತ್ತಿದ್ದಾಗಲು
ನಿಮ್ಮ ಕೋಪಾವೇಶವು ಉಳಿಯಲಿಲ್ಲ
ಕೊನೆಯವರೆಗು.
6 : ಬುದ್ಧಿ ಕಲಿಯುವ ಸಲುವಾಗಿ,
ವಿಧಿನಿಯಮಗಳನು
ನೆನಪಿನಲ್ಲಿಡುವುದಕ್ಕಾಗಿ,
ರಕ್ಷಣೆಯ ಗುರುತು ದೊರಕಲಿಕ್ಕಾಗಿ,
ಇವರು ಸಂಕಟಪಟ್ಟರು ತಾತ್ಕಾಲಿಕವಾಗಿ.
7 : ಇವರ ಪ್ರಾಣ ರಕ್ಷಣೆಯಾದುದು
ಆ ಗುರುತನು ನೋಡಿದ್ದರಿಂದಲ್ಲ
ಅದು ಸಾಧ್ಯವಾಯಿತು ಸರ್ವರ
ಉದ್ಧಾರಕನಾದ ನಿಮ್ಮಿಂದ.
8 : ಹೀಗೆ ಸಕಲ ಕೇಡುಗಳಿಂದ ಬಿಡಿಸುವಾತ
ನೀವೇ ಎಂದು
ನಮ್ಮ ಶತ್ರುಗಳಿಗೆ ಮಾಡಿಕೊಟ್ಟಿರಿ
ಮನದಟ್ಟು.
9 : ಅವರನು ಕಡಿದುಕೊಂದವು ಮಿಡಿತೆ
ಹಾಗು ನೊಣಗಳು
ಅವರ ಪ್ರಾಣವನ್ನುಳಿಸಲು ಯಾವ
ಸಾಧನವೂ ಇಲ್ಲವಾಯಿತು.
ಕಾರಣ – ಅಂತಹ ಶಿಕ್ಷೆಗೆ ಅವರು
ಪಾತ್ರರಾಗಿದ್ದರು.
10 : ನಿಮ್ಮ ಮಕ್ಕಳಿಗಾದರೋ ಸೋಲು
ಸಂಭವಿಸಲಿಲ್ಲ ವಿಷಸರ್ಪಗಳ ಹಲ್ಲಿಂದ
ಅವರು ಗುಣಹೊಂದಿದರು, ನಿಮ್ಮ ದಯೆ
ಅವರಿಗೆ ಆಧಾರವಾಗಿದ್ದುದರಿಂದ.
11 : ಕಡಿತಕ್ಕೆ ಗುರಿಯಾದರು ನಿಮ್ಮಾಜ್ಞೆಗಳನು
ನೆನಪಿನಲ್ಲಿಟ್ಟುಕೊಳ್ಳಲೆಂದು
ಬೇಗನೆ ಗುಣವಾದರು ನಿಮ್ಮನ್ನು ಪೂರ್ತಿ
ಮರೆತುಹೋಗಬಾರದೆಂದು
ನಿಮ್ಮ ಕಾರುಣ್ಯದಿಂದ ಅವರು
ದೂರವಾಗಬಾರದೆಂದು.
12 : ಅವರು ಗುಣಹೊಂದಿದ್ದು ಯಾವುದೋ
ಗಿಡಮೂಲಿಕೆಯಿಂದಲ್ಲ
ಮೆತ್ತಗೆ ಮಾಡುವಂಥ ಯಾವುದೋ
ಮುಲಾಮಿನಿಂದಲ್ಲ.
ಅದಾಯಿತು ಹೇ ಸರ್ವೇಶ್ವರಾ, ಎಲ್ಲವನ್ನು
ಸ್ವಸ್ಥವಾಗಿಸುವ ನಿಮ್ಮ ವಾಕ್ಯದಿಂದ.
13 : ಸಾವು ಜೀವಗಳ ಮೇಲೆ ನಿಮಗುಂಟು
ಅಧಿಕಾರ
ನೀವೇ ಪಾತಾಳದ ದ್ವಾರಗಳ ಬಳಿಗೆ
ನಡೆಸುವಾತ
ನೀವೇ ಅಲ್ಲಿಂದ ಮೇಲಕ್ಕೆ ಕರೆದು
ತರುವಾತ.
14 : ದುಷ್ಟತನದಿಂದ ಕೊಲೆಮಾಡಬಹುದು
ಮನುಜ
ಹೊರಟುಹೋದ ಜೀವಾತ್ಮವನ್ನಾತ
ಹಿಂದಿರುಗಿಸಲಾರ
ಪಾತಾಳ ಸೇರಿದ ಪ್ರಾಣವನ್ನು ಬಿಡಿಸಿ
ತರಲಾರ.
15 : ಆದರೂ ದೇವಾ,
ನಿಮ್ಮ ಕೈಯಿಂದ ತಪ್ಪಿಸಿಕೊಳ್ಳಲಾಗದಯ್ಯಾ !
16 : ದುರುಳರು ನಿಮ್ಮನು ಅಂಗೀಕರಿಸಲಿಲ್ಲ
ದೇವರೆಂದು
ನಿಮ್ಮ ಭುಜಬಲದಿಂದ ಅವರು
ಹಿಂಸೆಗೀಡಾದರಂದು.
ಅಸಾಧಾರಣ ಮಳೆ, ಪ್ರಚಂಡ ಮಾರುತ,
ಆಲಿಕಲ್ಲು,
ಇವು ಅವರನು ಬೆನ್ನಟ್ಟಿಕೊಂಡು ಹೋದವು
ಬೆಂಕಿ ಅವರನು ಪೂರ್ತಿಯಾಗಿ
ದಹಿಸಿಬಿಟ್ಟಿತು.
17 : ಅತಿಶಯವೆಂದರೆ – ಎಲ್ಲವನು ನಂದಿಸುವ
ನೀರಲ್ಲೆ ಅಗ್ನಿ ಪ್ರಬಲವಾದುದು
ಅಂತೆಯೇ ಸಜ್ಜನರ ಪರವಾಗಿ ಲೋಕವಿಡೀ
ಹೋರಾಡುವುದು ಸಹಜ.
18 : ಒಮ್ಮೆ, ದುರುಳರ ವಿರುದ್ಧ ಕಳುಹಿಸಲಾದ
ಮೃಗಗಳನ್ನು
ಅಗ್ನಿ ಸುಡದೆ ಶಮನವಾಯಿತು.
ಇದನ್ನು ಕಂಡವರು ದೇವರ ದಂಡನಾ
ತೀರ್ಪು ತಮ್ಮನ್ನು ಬೆನ್ನಟ್ಟಿದೆಯೆಂದು
ಅರಿವಂತಾಯಿತು.
19 : ಇನ್ನೊಮ್ಮೆ, ದುರುಳರ ಹೊಲಗಳಲ್ಲಿದ್ದ
ಪೈರುಗಳನ್ನು ನಾಶಮಾಡಲು
ನೀರಿನಲ್ಲೂ ಅಗ್ನಿ ತನ್ನ ಶಕ್ತಿಗಿಂತ
ಮಿಗಿಲಾಗಿ ಉರಿಯಿತು.
20 : ನಿಮ್ಮ ಜನರಿಗಾದರೋ, ದೇವದೂತರ
ಆಹಾರವನ್ನು ಬಡಿಸಿದಿರಿ;
ಶ್ರಮವಿಲ್ಲದೆ ಸಿದ್ಧವಾದ, ರುಚಿಕರವಾದ,
ಎಲ್ಲರಿಗು ಒಗ್ಗುವಂಥ ರೊಟ್ಟಿಯನ್ನು
ನೀವವರಿಗೆ ಪರಲೋಕದಿಂದ ಕೊಟ್ಟಿರಿ.
21 : ನೀವಿತ್ತ ಪದಾರ್ಥ ವ್ಯಕ್ತಪಡಿಸಿತು ನಿಮ್ಮ
ಮಕ್ಕಳ ಬಗ್ಗೆ ನಿಮಗಿದ್ದ ವಾತ್ಸಲ್ಯವನು
ತಿನ್ನುವವನ ಬಯಕೆಯನು ಅದು
ಪೂರೈಸುತ್ತಾ
ಅವನವನ ಇಷ್ಟದಂತೆ ಹದಗೊಳ್ಳುತ್ತಿತ್ತು.
22 : ಹಿಮ, ನೀರುಗಡ್ಡೆಗಳು ಬೆಂಕಿಯ ಬೇಗೆಗೆ
ಕರಗದೆ ಹೋದವು
ಹೀಗೆ ಶತ್ರುಗಳ ಬೆಳೆ ನಾಶಮಾಡಲು
ಚಂಡಮಾರುತದಲ್ಲೂ ಬೆಂಕಿ
ಉರಿಯಬಲ್ಲದು
ಮಳೆಯಲ್ಲೂ ಅದು ಸುಡಬಲ್ಲದು ಎಂದು
ಅವರು ತಿಳಿದುಕೊಳ್ಳುವಂತಾಯಿತು.
23 : ಸಜ್ಜನರಿಗಾದರೋ ಆಹಾರ ಒದಗಿಸಲು
ಅಗ್ನಿ ತನ್ನ ಸಹಜ ಗುಣವನೇ
ಮರೆತುಬಿಟ್ಟಿತು !
24 : ತನ್ನ ಸರ್ವೇಶ್ವರನಾದ ನಿಮಗೆ ಸೇವೆ
ಸಲ್ಲಿಸುವ ಸೃಷ್ಟಿಯು
ದುರ್ಜನರನು ದಂಡಿಸಲು ಬಹಳ
ತವಕಪಡುವುದು
ನಿಮ್ಮ ವಿಶ್ವಾಸಿಗಳಿಗೆ ಒಳಿತಾಗುವಂತೆ
ತಡೆದುಕೊಳ್ಳುವುದು.
25 : ಎಂತಲೇ, ನಿಮ್ಮನು ಬೇಡುವವರ ಬಯಕೆ
ನೆರವೇರಿಸಲು
ಆ ಆಹಾರ ನಾನಾ ರೂಪ ತಾಳಿತು,
ಸರ್ವವನೂ ಪೋಷಿಸುವ ನಿಮ್ಮ
ದಯೆಗದು ಸಾಧ್ಯವಾಯಿತು.
26 : ಹೇ ಸರ್ವೇಶ್ವರಾ, ಮಾನವನನು ಪೋಷಿಸು
ವುದು ಭೂಫಲಗಳ ಬೆಳೆಗಳಲ್ಲ.
ನಿಮ್ಮ ವಿಶ್ವಾಸಿಗಳನು ಉಳಿಸುವುದು
ನಿಮ್ಮ ವಾಕ್ಯ
ಇದನು ಕಲಿತುಕೊಳ್ಳುವಂತಾಯಿತು
ನೀವು ಪ್ರೀತಿಸುವ ಸಂತಾನ.
27 : ಬೆಂಕಿಯಿಂದ ಸುಟ್ಟು ನಾಶವಾಗದ ಆಹಾರ
ಕಾಯ್ದು ಕರಗಿಹೋಯಿತು ಸೂರ್ಯನ
ಸೌಮ್ಯಕಿರಣ ಮಾತ್ರದಿಂದ.
28 : ಇದರಿಂದ ನಾವು ಅರಿತುಕೊಳ್ಳಬೇಕಾದ
ಪಾಠವಿದು:
ಸೂರ್ಯೋದಯಕ್ಕೆ ಮೊದಲೇ ನಾವೆದ್ದು
ಸ್ತುತಿಸಬೇಕು ನಿಮ್ಮನು
ಬೆಳಕು ಮೂಡುತ್ತಿರುವಾಗಲೆ ನಾವು
ಬೇಡಿಕೊಳ್ಳಬೇಕು ನಿಮ್ಮನು.
29 : ಹೌದು, ಕರಗಿಹೋಗುವುದು ಚಳಿಗಾಲದ
ಬಿಳಿಮಂಜಿನ ಹನಿಯಂತೆ
ಹರಿದುಹೋಗುವುದು ಪ್ರಯೋಜನವಿಲ್ಲದ
ನೀರಿನಂತೆ
ಉಪಕಾರಸ್ಮರಣೆ ಮಾಡದವನ ನಂಬಿಕೆ
ನಿರೀಕ್ಷೆ.
ಕಾರ್ಗತ್ತಲು