Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಅರಸನ ಸನ್ನಿಧಿಯಲ್ಲಿ ಎಸ್ತೇರಳು ಎಸ್ತೇರಳು ಮೂರು ದಿನಗಳ ಪ್ರಾರ್ಥನೆಯನ್ನು ಮುಗಿಸಿದನಂತರ, ತಾನು ಉಟ್ಟಿದ್ದ ಶೋಕವಸ್ತ್ರಗಳನ್ನು ತೆಗೆದುಹಾಕಿ, ವೈಭವದ ವಸ್ತ್ರಾಭರಣಗಳನ್ನು ತೊಟ್ಟುಕೊಂಡಳು.
2 : ರಾಣಿಯಂತೆ ಶೃಂಗಾರಮಾಡಿಕೊಂಡು ಸಕಲವನ್ನೂ ವೀಕ್ಷಿಸುವ ದೇವರಲ್ಲಿ ಮೊರೆ ಇಟ್ಟಳು.
4 : ಮತ್ತೊಬ್ಬಳು ಅವಳ ಉಡುಪಿನ ಅಂಚನ್ನು ಹಿಂಬದಿಯಲ್ಲಿ ಎತ್ತಿ ಹಿಡಿದುಕೊಂಡು ನಡೆದಳು.
5 : ಆಕೆಯ ಮುಖಸೌಂದರ್ಯ ಕಾಂತಿಯಿಂದ ಕಂಗೊಳಿಸುತ್ತಿತ್ತು. ಪ್ರೀತಿಯ ಹಾಗೂ ಹರ್ಷದ ಹೊನಲು ಹರಿದಾಡುತ್ತಿದ್ದರೂ ಅವಳ ಅಂತರಂಗ ಭಯದಿಂದ ತಲ್ಲಣಿಸುತ್ತಿತ್ತು.
6 : ಅರಮನೆಯ ಎಲ್ಲಾ ದ್ವಾರಗಳನ್ನು ಒಂದೊಂದಾಗಿ ದಾಟಿದ ನಂತರ, ರಾಜನ ಸಮ್ಮುಖದಲ್ಲಿ ಬಂದು ನಿಂತಳು. ರಾಜನು ಸ್ವರ್ಣದ ಹಾಗು ಮುತ್ತುರತ್ನಖಚಿತವಾದ ಉಡುಪನ್ನು ಧರಿಸಿ, ಸಿಂಹಾಸನದ ಮೇಲೆ ಮಂಡಿಸಿದ್ದನು. ಅದೊಂದು ಗಂಭೀರವಾದ ದೃಶ್ಯವಾಗಿತ್ತು.
7 : ರಾಜನ ಮುಖ ತೇಜೋಮಯವಾಗಿತ್ತು. ಅವನು ಎಸ್ತೇರಳನ್ನು ಕಂಡಾಕ್ಷಣ, ಕೋಪದಿಂದ ಅವಳನ್ನು ದುರುಗುಟ್ಟಿ ನೋಡಿದನು. ರಾಣಿಯ ಮುಖ ಭಯದಿಂದ ಬಿಳಿಚಿಕೊಂಡಿತು. ತತ್ತರಿಸುತ್ತಾ ತನ್ನ ಸೇವಕಿಯ ಭುಜದ ಮೇಲೆ ಕುಸಿದುಬಿದ್ದಳು.
8 : ಆಗ ದೇವರು ರಾಜನ ಕೋಪವನ್ನು ತಣಿಸಿದರು. ಅವನ ಮನಸ್ಸು ಮೃದುವಾಯಿತು. ತಟ್ಟನೆ ಅವನು ಸಿಂಹಾಸನದಿಂದ ಕೆಳಕ್ಕಿಳಿದು ಅವಳನ್ನು ಮೇಲಕ್ಕೆತ್ತಿದನು. ಅವಳು ಸ್ಥಿಮಿತಕ್ಕೆ ಬರುವವರೆಗೂ ತನ್ನ ತೋಳಿನ ತೆಕ್ಕೆಯಲ್ಲೆ ಅವಳನ್ನು ಹಿಡಿದುಕೊಂಡಿದ್ದನು.
9 : ಅನಂತರ ಉಪಶಮನದ ಮಾತುಗಳಿಂದ: “ಎಸ್ತೇರ್, ಏನು ಆಯಿತು? ಭಯಪಡಬೇಡ, ನೀನು ಸಾಯುವುದಿಲ್ಲ.
10 : ನಮ್ಮ ರಾಜಾಜ್ಞೆ ಅನ್ವಯಿಸುವುದು ಜನಸಾಮಾನ್ಯರಿಗೆ ಮಾತ್ರ, ನಿನಗಲ್ಲ. ನಾನು ನಿನ್ನ ಪತಿಯಲ್ಲವೆ?
11 : ಬಾ ನನ್ನ ಬಳಿಗೆ,” ಎಂದನು. 12ಬಳಿಕ ತನ್ನ ಚಿನ್ನದ ರಾಜದಂಡವನ್ನು ಮೇಲೆತ್ತಿ ಎಸ್ತೇರಳ ಕೊರಳಿಗೆ ಮುಟ್ಟಿಸಿದನು. ಅವಳನ್ನು ಆಲಂಗಿಸಿ ಮುತ್ತಿಟ್ಟು: “ವಿಷಯವೇನು ಹೇಳು” ಎಂದನು.
11 : ಬಾ ನನ್ನ ಬಳಿಗೆ,” ಎಂದನು.
12 : ಬಳಿಕ ತನ್ನ ಚಿನ್ನದ ರಾಜದಂಡವನ್ನು ಮೇಲೆತ್ತಿ ಎಸ್ತೇರಳ ಕೊರಳಿಗೆ ಮುಟ್ಟಿಸಿದನು. ಅವಳನ್ನು ಆಲಂಗಿಸಿ ಮುತ್ತಿಟ್ಟು: “ವಿಷಯವೇನು ಹೇಳು” ಎಂದನು.
13 : ಅದಕ್ಕೆ ಎಸ್ತೇರಳು, “ಪ್ರಭುವೇ, ಮಹಾಸ್ವಾಮಿಗಳೇ, ನಾನು ತಮ್ಮನ್ನು ನೋಡಿದಾಗ ತಾವೊಬ್ಬ ದೇವದೂತನಂತೆ ಕಂಡಿರಿ. ತಮ್ಮ ಗಂಭೀರ ನೋಟ ನನ್ನಲ್ಲಿ ಭಯವನ್ನು ಹುಟ್ಟಿಸಿತು.
14 : “ಮಹಾಸ್ವಾಮಿಗಳೇ, ತಾವು ಅದ್ಭುತ ಸ್ವರೂಪರು, ನಿಮ್ಮ ಮುಖ ಕಾಂತಿಮಯವಾಗಿದೆ,” ಎಂದಳು.
15 : ಎಸ್ತೇರಳು ಹೀಗೆ ಮಾತಾಡುತ್ತಿರುವಾಗಲೇ ಮತ್ತೊಮ್ಮೆ ಮೂರ್ಛೆಹೋಗಿ ಕೆಳಗೆ ಬಿದ್ದಳು.
16 : ಅರಸನು ತಳಮಳಗೊಂಡನು. ಆಸ್ಥಾನದ ಸೇವಕಿಯರೆಲ್ಲ ರಾಣಿಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದರು.

· © 2017 kannadacatholicbible.org Privacy Policy