2 : “ಇದೆಲ್ಲ ದೇವರ ಕಾರ್ಯ. ಇದರ ಬಗ್ಗೆ ನಾನು ಕಂಡ ಕನಸು ಜ್ಞಾಪಕಕ್ಕೆ ಬರುತ್ತದೆ. ಅದರಲ್ಲಿ ನೆರವೇರದೆ ಹೋದುದು ಯಾವುದೂ ಇಲ್ಲ.
3 : ಚಿಕ್ಕಬುಗ್ಗೆ ನದಿಯಾದದ್ದು, ಮುಂಜಾನೆಯ ಬೆಳಕು ಸೂರ್ಯನ ಸುಡುಬಿಸಿಲಿನಂತೆ ಹೊಳೆದದ್ದು, ನೀರಿನ ಪ್ರವಾಹ ಎಲ್ಲವೂ ಕನಸಿನಂತೆ ನನಸಾಗಿದೆ. ಅರಸನು ಮದುವೆಯಾಗಿ ತನ್ನ ರಾಣಿಯನ್ನಾಗಿ ಮಾಡಿಕೊಂಡ ಎಸ್ತೇರಳೇ ಆ ನದಿ.
4 : ಎರಡು ಘಟಸರ್ಪಗಳು ಹಾಮಾನನನ್ನೂ ನನ್ನನ್ನೂ ಪ್ರತಿನಿಧಿಸುತ್ತವೆ.
5 : ಯೆಹೂದ್ಯರನ್ನು ನಾಶಗೊಳಿಸಲು ಸೇರಿದ ರಾಷ್ಟ್ರಗಳೇ ಆ ನಾಡುಗಳು.
6 : ಪ್ರತ್ಯೇಕವಾಗಿದ್ದ ಆ ಒಂದು ರಾಷ್ಟ್ರವೇ ದೇವರಿಗೆ ಮೊರೆಯಿಟ್ಟು ರಕ್ಷಣೆ ಹೊಂದಿದ ನಮ್ಮ ಇಸ್ರಯೇಲಿನ ಜನಾಂಗ.
“ಸರ್ವೇಶ್ವರ ತಮ್ಮ ಜನರನ್ನು ಕಾಪಾಡಿದ್ದಾರೆ; ನಮ್ಮನ್ನು ಎಲ್ಲಾ ಕೇಡುಗಳಿಂದ ಪಾರು ಮಾಡಿದ್ದಾರೆ. ಇತರ ರಾಷ್ಟ್ರಗಳಿಗೆ ಎಂದೂ ಮಾಡದ ಪವಾಡಕಾರ್ಯಗಳನ್ನು ನಮ್ಮಲ್ಲಿ ಎಸಗಿದ್ದಾರೆ.
7 : ಕಾರಣ, ದೇವರು ತಮ್ಮ ಸ್ವಂತ ಜನರಿಗೆ ಒಂದು ಯೋಜನೆಯನ್ನು, ಇತರ ರಾಷ್ಟ್ರಗಳವರಿಗೆ ಮತ್ತೊಂದು ಯೋಜನೆಯನ್ನು, ಗೊತ್ತುಮಾಡಿದ್ದಾರೆ.
8 : ನಿಯಮಿತ ಕಾಲದಲ್ಲಿ, ನಿಯಮಿತ ಗಳಿಗೆಯಲ್ಲಿ ಆಯಾ ರಾಷ್ಟ್ರಗಳಿಗೆ ಅನ್ವಯಿಸುವಂಥ ತೀರ್ಪನ್ನು ನೀಡಬೇಕಾಗಿತ್ತು.
9 : ದೇವರು ಸ್ವಜನರನ್ನು ನೆನಸಿಕೊಂಡು ತಮ್ಮ ಸ್ವಾಸ್ತ್ಯದ ಪರವಾಗಿ ನ್ಯಾಯಬದ್ಧ ತೀರ್ಪನ್ನು ನಿಡಿದ್ದಾರೆ.
10 : ಆದುದರಿಂದ, ಇನ್ನು ಮುಂದೆ ಸದಾಕಾಲಕ್ಕೂ ಪ್ರತೀವರ್ಷ ಫಾಲ್ಗುಣಮಾಸದ ಹದಿನಾಲ್ಕನೆ ಮತ್ತು ಹದಿನೈದನೆ ದಿನದಲ್ಲಿ, ಇಸ್ರಯೇಲಿನ ಪ್ರಜೆಗಳು ದೇವರ ಸನ್ನಿಧಿಯಲ್ಲಿ ಒಟ್ಟಾಗಿ ಸೇರಿ, ಈ ಉತ್ಸವವನ್ನು ಸಂಭ್ರಮದಿಂದ, ಸಡಗರದಿಂದ ಆಚರಿಸಬೇಕು.”
ಅನುಬಂಧ: ಗ್ರೀಕ್ ಅನುವಾದವನ್ನು ಕುರಿತದ್ದು
ತೊಲಮಾಯ ಮತ್ತು ಕ್ಲಿಯೋಪಾತ್ರ ಎಂಬವರ ನಾಲ್ಕನೆ ವರ್ಷದಲ್ಲಿ ಲೇವಿಯ ವಂಶಜನಾದ ಯಾಜಕನೆಂದು ಹೇಳಿಕೊಂಡ ದೊಸಿತೇಯನೆಂಬವನು ಪೂರಿಮ್ ಮಹೋತ್ಸವ ಕುರಿತಾದ ಮೇಲ್ಕಂಡ ಪತ್ರವನ್ನು ಈಜಿಪ್ಟಿಗೆ ತಂದನು. ಅವನೊಂದಿಗೆ ತೊಲಮಾಯ ಎಂಬ ಅವನ ಮಗನೂ ಇದ್ದನು. ಈ ಪತ್ರವು ಸತ್ಯವಾದದ್ದು, ಅದನ್ನು ಅನುವಾದಿಸಿದವನು ಜೆರುಸಲೇಮಿನಲ್ಲಿ ನಿವಾಸಿಯಾಗಿದ್ದ ತೊಲಮಾಯನ ಮಗ ಲಿಸಿಮಾಕ ಎಂದು ಅವರು ದೃಢೀಕರಿಸಿದ್ದಾರೆ.