Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಯೆಹೂದ್ಯರ ಪರವಾದ ರಾಜಾಜ್ಞೆ 5 ಆ ಪತ್ರದ ನಕಲು ಹೀಗಿತ್ತು: 1“ಭಾರತ (ಇಂಡಿಯಾ) ದೇಶ ಮೊದಲ್ಗೊಂಡು ಇಥಿಯೋಪಿಯಾ ದೇಶದವರೆಗೆ ವಿಸ್ತರಿಸಿರುವ 127 ಸಂಸ್ಥಾನಗಳ ಅಧಿಪತಿಗಳಿಗೆ, ಹಾಗೂ ರಾಜನಿಷ್ಠ ಪ್ರಜೆಗಳಿಗೆ ಮಹಾರಾಜ ಅಹಷ್ಟೇರೋಷನು ಶುಭಕೋರಿ ಬರೆಯುವ ಪತ್ರ:
2 : “ತಮ್ಮ ಉದಾರ ದಾನಿಗಳ ಅಪಾರ ಗೌರವಾದರಗಳ ಫಲವಾಗಿ ಉನ್ನತಸ್ಥಾನಕ್ಕೇರಿದ ಕೆಲವರು ಕೃತಜ್ಞರಾಗಿ ಬಾಳುವ ಬದಲು ಮತ್ತಷ್ಟು ಉದ್ಧಟತನದಿಂದ ವರ್ತಿಸುವುದುಂಟು.
3 : ಅಂಥವರು ತಮ್ಮ ಸುಯೋಗದ ಸಮೃದ್ಧಿಯಲ್ಲಿ ತೃಪ್ತರಾಗಿರದೆ, ತಮ್ಮ ಏಳಿಗೆಗೆ ಕಾರಣರಾದ ಉದಾರ ದಾನಿಗಳನ್ನೇ ಉರುಳಿಸಲು ಪಿತೂರಿ ನಡೆಸುತ್ತಾರೆ.
4 : ಮಾನವ ಸಹಜವಾದ ಕೃತಜ್ಞತಾ ಭಾವವನ್ನು ಅಳಿಸುವುದರೊಂದಿಗೆ, ಸಭ್ಯತೆಯ ಗಂಧವನ್ನೇ ಅರಿಯದ ಹೊಗಳುಭಟ್ಟರ ಮಾತುಗಳಿಗೆ ಮಾರುಹೋಗುತ್ತಾರೆ. ಮಾತ್ರವಲ್ಲ, ಸಕಲವನ್ನೂ ಈಕ್ಷಿಸುವಂಥ, ಕೇಡನ್ನು ದ್ವೇಷಿಸುವಂಥ ದೇವರ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಬಹುದೆಂದು ಭಾವಿಸುತ್ತಾರೆ.
6 : ಈ ವ್ಯಕ್ತಿಗಳು ಅಧಿಕಾರಿಗಳ ಉದಾರ ಮನಸ್ಸನ್ನು ದುರುಪಯೋಗಿಸಿಕೊಂಡು, ನೀಚತನದಿಂದ ಅವರ ಸದುದ್ದೇಶಗಳಿಗೆ ಭಂಗತರುತ್ತಾರೆ.
7 : “ಈ ರೀತಿಯ ಅಧಿಕಾರ ದುರುಪಯೋಗದ ನಿದರ್ಶನಗಳನ್ನು ಕಾಣುವುದಕ್ಕೆ ಇತಿಹಾಸದ ದಾಖಲೆಗಳು ಬೇಕಾಗಿಲ್ಲ, ನಮ್ಮ ಮಧ್ಯೆ ಜರುಗಿ ಇರುವ ಇತ್ತೀಚಿನ ವ್ಯವಹಾರಗಳಲ್ಲೆ ತನಿಖೆ ನಡೆಸಿದಾಗ ಎಷ್ಟರಮಟ್ಟಿಗೆ ಅಯೋಗ್ಯ ಅಧಿಕಾರಿಗಳಿಂದ ಎಂಥ ದುಷ್ಕøತ್ಯಗಳು ನಡೆದಿವೆ ಎಂಬುದು ಕಂಡುಬರುತ್ತದೆ.
8 : “ಇನ್ನು ಮುಂದೆ ನಮ್ಮ ರಾಜ್ಯದ ಪ್ರಜೆಗಳೆಲ್ಲರೂ ಸುರಕ್ಷತೆ, ಸಮಾಧಾನದಿಂದ ಬಾಳಲು ಸಾಧ್ಯವಾಗುವಂತೆ ಸುಧಾರಣಾ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದ್ದೇವೆ.
9 : ಇದಕ್ಕಾಗಿ ನಮ್ಮ ಕಾರ್ಯನೀತಿಯನ್ನು ಬದಲಾಯಿಸಿ, ನಮ್ಮ ಗಮನಕ್ಕೆ ಬಂದಿರುವ ವಿಷಯಗಳನ್ನು ನಿಷ್ಪಕ್ಷಪಾತದಿಂದ ಪರಿಶೀಲಿಸಿ, ಹೊಸ ವಿಧಿವಿಧಾನಗಳನ್ನು ಜಾರಿಗೆ ತರಲು ಅಪೇಕ್ಷಿಸುತ್ತೇವೆ.
10 : “ಉದಾಹರಣೆಗಾಗಿ, ಮ್ಯಾಸಿಡೋನಿಯಾ ಹೆಮ್ಮೆದಾತನ ಮಗ ಹಾಮಾನನನ್ನು ತೆಗೆದುಕೊಳ್ಳೋಣ. ಅವನಲ್ಲಿ ಸ್ವಲ್ಪವೂ ಪರ್ಷಿಯನ್ನರ ರಕ್ತವಿರಲಿಲ್ಲ. ನಮ್ಮ ಆಶ್ರಯದಲ್ಲಿರಲು ಅವನಿಗೆ ಎಳ್ಳಷ್ಟೂ ಹಕ್ಕಿರಲಿಲ್ಲ. ಆದರೂ ಅವನಿಗೆ ಆಶ್ರಯವಿತ್ತೆವು.
12 : “ಆದರೆ ಈ ಹಾಮಾನನ ಉದ್ಧಟತನಕ್ಕೆ ಮಿತಿಯಿಲ್ಲವಾಯಿತು. ಅವನು ನಮ್ಮ ರಾಜ್ಯವನ್ನೂ ಪ್ರಾಣವನ್ನೂ ಕಸಿದುಕೊಳ್ಳಲು ಹವಣಿಸಿದ್ದಾನೆ.
13 : ನನ್ನ ಪ್ರಾಣವನ್ನು ಕಾಪಾಡಿ, ನನಗೆ ಬೆಂಬಲವಾಗಿ ನಿಂತಿದ್ದ ಮೊರ್ದೆಕೈಯನ್ನು ವಂಚನೆ ತಂತ್ರೋಪಾಯಗಳಿಂದ ಗಲ್ಲಿಗೇರಿಸಲು ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ, ನಿರ್ದೋಷಿ ಆದ ಪಟ್ಟದರಾಣಿ ಎಸ್ತೇರಳನ್ನೂ ಇಡೀ ಯೆಹೂದ್ಯ ಜನಾಂಗವನ್ನೂ ನಿರ್ಮೂಲಗೊಳಿಸಲು ಒಳಸಂಚು ಮಾಡಿದ್ದಾನೆ.
14 : ನಮ್ಮನ್ನು ನಿಸ್ಸಹಾಯಕರನ್ನಾಗಿ ಮಾಡಿ, ಪರ್ಷಿಯಾ ರಾಜ್ಯವನ್ನು ಮ್ಯಾಸಿಡೋನಿಯರ ವಶಕ್ಕೆ ಒಪ್ಪಿಸಬೇಕೆಂಬ ಉದ್ದೇಶ ಅವನದಾಗಿತ್ತು.
15 : ಆದರೆ ಈ ನತದೃಷ್ಟನಿಂದ ವಿನಾಶಕ್ಕೆ ಗುರಿಪಡಿಸಲಾಗಿದ್ದ ಯೆಹೂದ್ಯರು ಖಂಡಿತವಾಗಿಯೂ ಸಮಾಜದ್ರೋಹಿಗಳಲ್ಲ, ನ್ಯಾಯಸಮ್ಮತವಾದ ನೇಮ ನಿಯಮಗಳನ್ನು ಪಾಲಿಸುವಂಥವರು ಎಂದು ಕಂಡುಬಂದಿದೆ.
16 : ನಮ್ಮ ಪೂರ್ವಜರ ಕಾಲದಿಂದ ಇದುವರೆಗೆ ನಮ್ಮ ಘನರಾಜ್ಯವನ್ನು ಅದ್ಭುತಕರವಾದ ರೀತಿಯಲ್ಲಿ ಪರಿಪಾಲಿಸಿಕೊಂಡು ಬಂದಿರುವ ನಿತ್ಯ ಹಾಗೂ ಮಹೋನ್ನತ ದೇವರ ಮಕ್ಕಳು ಅವರು.
17 : “ಹೀಗಿರಲಾಗಿ, ಹೆಮ್ಮೆದಾತನ ಮಗ ಹಾಮಾನನು ಪತ್ರಗಳ ಮೂಲಕ ಘೋಷಿಸಿರುವ ಆಜ್ಞೆಗಳನ್ನು ಅನುಷ್ಠಾನಕ್ಕೆ ತರಬಾರದೆಂಬುದು ನಮ್ಮ ಆಜ್ಞೆ.
18 : ಇಂಥ ಸಂದಿಗ್ಧ ಪರಿಸ್ಥಿತಿಗೆ ಮೂಲ ಕಾರಣನಾಗಿದ್ದ ಅವನನ್ನೂ ಅವನ ಕುಟುಂಬದವರನ್ನೂ ಶೂಷನ್ ನಗರದ ಮಹಾದ್ವಾರದ ಬಳಿ ಗಲ್ಲಿಗೇರಿಸಲಾಗಿದೆ. ಸಕಲವನ್ನು ಪರಿಪಾಲಿಸುವ ದೇವರಿಂದ ಅವನಿಗೆ ತ್ವರಿತವಾಗಿ ತಕ್ಕ ಶಾಸ್ತಿಯಾಗಿದೆ.
19 : “ಈ ಪತ್ರದ ನಕಲನ್ನು ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲಿ ಪ್ರಕಟಿಸಬೇಕು. ತಮ್ಮ ಸಂಪ್ರದಾಯಕ್ಕನುಸಾರವಾಗಿ ನಿರ್ಭೀತಿಯಿಂದ ನಡೆದುಕೊಳ್ಳಲು ಯೆಹೂದ್ಯರಿಗೆ ಅನುಮತಿ ನೀಡಬೇಕು.
19 : “ಈ ಪತ್ರದ ನಕಲನ್ನು ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲಿ ಪ್ರಕಟಿಸಬೇಕು. ತಮ್ಮ ಸಂಪ್ರದಾಯಕ್ಕನುಸಾರವಾಗಿ ನಿರ್ಭೀತಿಯಿಂದ ನಡೆದುಕೊಳ್ಳಲು ಯೆಹೂದ್ಯರಿಗೆ ಅನುಮತಿ ನೀಡಬೇಕು.
20 : ಆಗಲೇ ತಿಳಿಸಿದ ಪ್ರಕಾರ, ಹನ್ನೆರಡನೇ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೇ ದಿನ ಯಾರಾದರೂ ಅವರ ಮೇಲೆ ಧಾಳಿಮಾಡಿದರೆ, ನೀವು ಅವರಿಗೆ ಬೆಂಬಲವಾಗಿದ್ದು ರಕ್ಷಣೆ ನೀಡಬೇಕು.
21 : ಸಕಲವನ್ನು ಪರಿಪಾಲಿಸುವ ದೇವರ ಕರುಣೆಯಿಂದ ಆಯ್ಕೆಯಾದ ಈ ಜನರಿಗೆ ವಿನಾಶದ ದಿನವು ಸಂತೋಷದ ದಿನವಾಗಿ ಪರಿಣಮಿಸಿದೆ.
22 : “ಎಂತಲೇ, ಈ ದಿನವನ್ನು ರಾಷ್ಟ್ರೀಯ ರಜಾದಿನಗಳ ಪಟ್ಟಿಗೆ ಸೇರಿಸಿ, ಅದನ್ನು ಸಂತೋಷದಿಂದ ಸಂಭ್ರಮದಿಂದ ಕೊಂಡಾಡಿರಿ.
23 : ಇಂದಿನಿಂದ ಈ ದಿನ, ನಿಮಗೆ ಮತ್ತು ಸದ್ಭಾವನೆಯುಳ್ಳ ಪರ್ಷಿಯಾದವರಿಗೆ ರಕ್ಷಣೆಯ ನೆನಪಾಗಿಯೂ, ನಮಗೆ ವಿರೋಧವಾಗಿ ಪಿತೂರಿ ನಡೆಸಿದ ದ್ರೋಹಿಗಳಿಗೆ ವಿನಾಶದ ನೆನಪಾಗಿಯೂ ಇರಲಿ.
24 : “ಈ ಆಜ್ಞೆಗಳನ್ನು ಉಲ್ಲಂಘಿಸುವ ಪ್ರತಿಯೊಂದು ಪ್ರಾಂತ್ಯ ಪ್ರತಿಯೊಂದು ನಗರವೂ ನನ್ನ ಕೋಪಕ್ಕೆ ಗುರಿಯಾಗುವುದು; ನಿರ್ದಯೆಯಿಂದ ಕತ್ತಿಗೂ ಬೆಂಕಿಗೂ ತುತ್ತಾಗುವುದು; ಯಾವ ಮನುಷ್ಯನೂ ಅದರ ಬಳಿಗೆ ಹೋಗಲಾರ. ಪ್ರಾಣಿ-ಪಕ್ಷಿಗಳು ಸಹ ಅಲ್ಲಿ ಸುಳಿಯಲಾರವು.
24 : “ಈ ಆಜ್ಞೆಗಳನ್ನು ಉಲ್ಲಂಘಿಸುವ ಪ್ರತಿಯೊಂದು ಪ್ರಾಂತ್ಯ ಪ್ರತಿಯೊಂದು ನಗರವೂ ನನ್ನ ಕೋಪಕ್ಕೆ ಗುರಿಯಾಗುವುದು; ನಿರ್ದಯೆಯಿಂದ ಕತ್ತಿಗೂ ಬೆಂಕಿಗೂ ತುತ್ತಾಗುವುದು; ಯಾವ ಮನುಷ್ಯನೂ ಅದರ ಬಳಿಗೆ ಹೋಗಲಾರ. ಪ್ರಾಣಿ-ಪಕ್ಷಿಗಳು ಸಹ ಅಲ್ಲಿ ಸುಳಿಯಲಾರವು.

· © 2017 kannadacatholicbible.org Privacy Policy