Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೂಡಿತ


1 : ರಾತ್ರಿ ಬಹಳ ಸಮಯವಾಯಿತು. ಅಧಿಕಾರಿಗಳು ದಡಬಡನೆ ತಮ್ಮ ತಮ್ಮ ಗುಡಾರಗಳಿಗೆ ತೆರಳಿದರು. ಯಜಮಾನನ ಸೇವಕರು ಒಳಗೆ ಬರದಂತೆ ಬಗೋವನು, ಹೊರಗಿನ ಬಾಗಿಲನ್ನು ಮುಚ್ಚಿದನು.
2 : ಕುಡಿದು ಅಮಲೇರಿದ್ದರಿಂದ ಎಲ್ಲರೂ ಹಾಸಿಗೆಯಲ್ಲಿ ಮುದುರಿಕೊಂಡರು. ಅಂತೆಯೇ ಹೊಲೊಫರ್ನೆಸನು ಸಹ ಮತ್ತನಾಗಿ ಸುಪ್ಪತ್ತಿಗೆಯ ಮೇಲೆ ಬಿದ್ದುಬಿಟ್ಟಿದ್ದನು. ಜೂಡಿತ್ ಮಾತ್ರ ತನ್ನ ದಾಸಿಯೊಡನೆ ಎಚ್ಚರವಾಗಿದ್ದಳು.
3 : ಮಲಗುವ ಕೋಣೆಯ ಆಚೆ, ಬಾಗಿಲ ಬಳಿ, ತನ್ನ ದಾಸಿಯನ್ನು ನಿಲ್ಲಿಸಿ ತಾನು ಹೊರಕ್ಕೆ ಬರುವವರೆಗೂ ಅಲ್ಲಿಯೇ ಕಾದುಕೊಂಡಿರಬೇಕೆಂದು ಅವಳಿಗೆ ತಿಳಿಸಿದಳು. ಪ್ರತಿದಿನವೂ ಹಾಗೆಯೇ ಮಾಡುತ್ತಿದ್ದಳು. ಅಂತೆಯೇ ತಾನು ಪ್ರಾರ್ಥನೆ ಮಾಡಲು ಹೊರಕ್ಕೆ ಹೋಗಬೇಕಾಗಿದೆ ಎಂದು ಬಗೋವನಿಗೂ ಈಗಾಗಲೇ ತಿಳಿಸಿದ್ದಳು.
4 : ಹೀಗೆ ಒಳಗೆ ಮುಖ್ಯಸ್ಥರೇ ಆಗಲಿ, ಸಾಮಾನ್ಯರೇ ಆಗಲಿ, ಯಾರೂ ಹೊಲೊಫರ್ನೆಸನು ಮಲಗಿದ್ದ ಕೋಣೆಯಲ್ಲಿರಲಿಲ್ಲ. ಜೂಡಿತ್ ಹೊಲೊಫರ್ನೆಸನ ಮಂಚದ ಬಳಿ ನಿಂತುಕೊಂಡು, ತನ್ನಲ್ಲಿಯೇ ಇಂತೆಂದು ಪ್ರಾರ್ಥನೆ ಮಾಡಿದಳು:
5 : “ಸರ್ವಶಕ್ತಿ ಸಾಮಥ್ರ್ಯವು ನಿನ್ನದೇ ಹೇ ಸರ್ವೇಶ್ವರಾ, ಯಶಸ್ವಿಗೊಳಿಸು ನನ್ನ ಕೈಸಾಧಿಸಲಿರುವ ಕಾರ್ಯವ. ಇದರಿಂದಾಗಿ ಬೆಳಗಲಿ ಜೆರುಸಲೇಮಿನ ಮಹಿಮೆ ದೊರಕಲಿ ನಿನ್ನ ಸ್ವಾಸ್ತ್ಯವಾದ ಇಸ್ರಯೇಲರಿಗೆ ಬಿಡುಗಡೆ. ನನ್ನ ಯೋಜನೆಯನು ಕೈಗೂಡಿಸಲು ನಮ್ಮೆದುರಿನ ಶತ್ರುಗಳನು ಕೊಂದುಹಾಕಲು ಸಮಯವಿದೋ ಬಂದೊದಗಿರುವುದು.”
6 : ಅನಂತರ ಜೂಡಿತಳು ಮಂಚದ ಕಂಬದ ಬಳಿ, ಹೊಲೊಫರ್ನೆಸನ ತಲೆಯ ಮೇಲ್ಭಾಗದಲ್ಲಿ, ತೂಗಾಡುತ್ತಿದ್ದ ಕಠಾರಿಯನ್ನು ತೆಗೆದುಕೊಂಡಳು.
7 : ಹಾಸಿಗೆಯ ಹತ್ತಿರ ಬಂದು ಅವನ ತಲೆಗೂದಲನ್ನು ಹಿಡಿದುಕೊಂಡಳು, “ಇಸ್ರಯೇಲಿನ ದೇವರಾದ ಸರ್ವೇಶ್ವರಾ, ಇಂದು ನನಗೆ ಶಕ್ತಿಯನ್ನು ದಯಪಾಲಿಸಯ್ಯಾ,” ಎಂದು ಪ್ರಾರ್ಥಿಸಿದಳು.
8 : ಅನಂತರ ತನ್ನ ಶಕ್ತಿಯನ್ನೆಲ್ಲ ಬಳಸಿ ಆ ಕಠಾರಿಯಿಂದ ಕುತ್ತಿಗೆಗೆ ಎರಡು ಏಟುಗಳನ್ನು ಹಾಕಿ ಅವನ ತಲೆಯನ್ನು ಕಡಿದುಬಿಟ್ಟಳು.
9 : ಅವನ ದೇಹವನ್ನು ಹಾಸಿಗೆಯಿಂದ ಕೆಳಕ್ಕೆ ಉರುಳಿಸಿ, ಮೇಲ್ಚಪ್ಪರವನ್ನು ಕೆಡವಿಹಾಕಿದಳು. ಹೊಲೊಫರ್ನೆಸನ ತಲೆಯನ್ನು ತೆಗೆದುಕೊಂಡು ಹೋಗಿ ದಾಸಿಯ ಕೈಗೆ ಕೊಡಲು, ಅವಳು ಅದನ್ನು ತನ್ನ ಚೀಲದಲ್ಲಿ ಹಾಕಿದಳು.
10 : ಇಬ್ಬರೂ ಪಾಳೆಯವನ್ನು ಬಿಟ್ಟು, ಯಥಾಪ್ರಕಾರ ಪ್ರಾರ್ಥನೆ ಮಾಡಲು ಹೋದಂತೆ ನಡೆದರು. ಪಾಳೆಯದ ಆಚೆಹೋಗಿ ಕಮರಿಯನ್ನು ದಾಟಿದರು. ಬೆಟ್ಟವನ್ನು ಹತ್ತಿ ಬೆಥೂಲಿಯದ ಊರಬಾಗಿಲತ್ತ ಧಾವಿಸಿದರು.
11 : ದೂರದಿಂದಲೇ ಜೂಡಿತಳು ಊರ ಬಾಗಿಲ ಬಳಿ ಕಾವಲಿದ್ದವರನ್ನು ಕೂಗಿ ಕರೆದಳು: “ಬಾಗಿಲು ತೆರೆಯಿರಿ, ಬಾಗಿಲು ತೆರೆಯಿರಿ,” ಎಂದು ಬೊಬ್ಬೆ ಹಾಕಿದಳು. “ಇನ್ನೂ ನಮ್ಮೊಂದಿಗೆ ಇದ್ದಾರೆ ನಮ್ಮ ದೇವರಾದ ಸರ್ವೇಶ್ವರ. ಇಂದು ಅವರು ನಮ್ಮ ಶತ್ರುಗಳ ವಿರುದ್ಧ ಬಲಪ್ರಯೋಗ ಮಾಡಿದ್ದಾರೆ. ಇಸ್ರಯೇಲಿನ ಮಧ್ಯೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ,” ಎಂದು ಹೇಳಿದಳು.
12 : ಆಕೆಯ ಧ್ವನಿಯನ್ನು ಕೇಳುತ್ತಲೇ ಊರ ಜನರು ಬಾಗಿಲ ಬಳಿಗೆ ಧಾವಿಸಿ ಬಂದರು. ಹಿರಿಯರನ್ನು ಕರೆಸಿದರು.
13 : ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲರೂ ಅಲ್ಲಿಗೆ ಓಡಿಬಂದರು. ಜೂಡಿತಳ ಆಗಮನ ಅವರಿಗೆ ಅನಿರೀಕ್ಷಿತವಾಗಿತ್ತು. ಅವರು ಬಾಗಿಲನ್ನು ತಕ್ಷಣವೇ ತೆಗೆದು ಆಕೆಯನ್ನು ಸ್ವಾಗತಿಸಿದರು. ದೀವಟಿಗೆಗಳನ್ನು ಹೊತ್ತಿಸಿ ಎಲ್ಲರೂ ಆಕೆಯನ್ನು ಸುತ್ತುವರೆದರು.
14 : ಜೂಡಿತಳು ಗಟ್ಟಿಯಾಗಿ: “ದೇವರನ್ನು ಸ್ತುತಿಸಿರಿ; ಅವರನ್ನು ಕೊಂಡಾಡಿರಿ; ತಮ್ಮ ಕರುಣೆಯನ್ನು ಇಸ್ರಯೇಲ್ ಮನೆತನದಿಂದ ಹಿಂತೆಗೆದುಕೊಳ್ಳದ ಆ ದೇವರನ್ನು ಸ್ತುತಿಸಿರಿ ! ಈ ರಾತ್ರಿ ನನ್ನ ಕೈಯಿಂದ ಶತ್ರುವನ್ನು ಸದೆಬಡಿದಂಥ ಆ ದೇವರನ್ನು ಸ್ತುತಿಸಿರಿ,” ಎಂದಳು.
15 : ಅನಂತರ ಚೀಲದಿಂದ ಅಸ್ಸೀರಿಯದ ಸೇನಾಧಿಪತಿ ಹೊಲೊಫರ್ನೆಸನ ತಲೆಯನ್ನು ತೆಗೆದು ಅವರಿಗೆ ತೋರಿಸಿದಳು. “ಅಸ್ಸೀರಿಯದ ಸೇನಾಧಿಪತಿ ಹೊಲೊಫರ್ನೆಸನ ತಲೆಯಿದು. ಇಗೋ ಚಪ್ಪರದ ಮೇಲ್ಹೊದಿಕೆ! ಇದರ ಕೆಳಗೇ ಅವನು ಕುಡಿದು ಮತ್ತನಾಗಿ ಬಿದ್ದಿದ್ದ; ಸರ್ವೇಶ್ವರ ಒಬ್ಬ ಹೆಂಗಸಿನ ಕೈಯಿಂದ ಅವನ ತಲೆಯನ್ನು ಕಡಿದಿದ್ದಾರೆ.
16 : ನನ್ನ ಕಾರ್ಯ ಕೈಗೂಡುವಂತೆ ಮಾಡಿದ ಆ ಸರ್ವೇಶ್ವರನಿಗೆ ಸ್ತೋತ್ರ! ನನ್ನ ಸೌಂದರ್ಯದಿಂದ ಹುಚ್ಚುಹಿಡಿದಂತಾದ ಅವನು ತನ್ನ ಗುಳಿಯಲ್ಲೇ ಬಿದ್ದನು. ಆದರೆ ಅವನು ನನ್ನನ್ನು ಮುಟ್ಟಲಿಲ್ಲ, ಕೆಡಿಸಿ ಅವಮಾನಗೊಳಿಸಲಿಲ್ಲ,” ಎಂದಳು. “ಭೂಲೋಕದ ಎಲ್ಲಾ ನಾರೀಮಣಿ ಗಳಿಗಿಂತ ಮಿಗಿಲಾಗಿ, ಮಗಳೇ, ಆಶೀರ್ವದಿಸಲಿ ದೇವನು ನಿನ್ನನ್ನು ಉನ್ನತದಿಂದಲೇ. ಸ್ತುತಿಸಲ್ಲಲಿ ಭೂಪರಗಳ ಸೃಷ್ಟಿಕರ್ತ ಸರ್ವೇಶ್ವರನಿಗೆ ಶತ್ರುಗಳ ಮುಂದಾಳಿನ ಶಿರಚ್ಛೇದನ ಮಾಡಲು ದಾರಿತೋರಿದಾತನಿಗೆ !
17 : ಜನರೆಲ್ಲ ಆವೇಶಗೊಂಡು, ಅಡ್ಡಬಿದ್ದು, ದೇವರನನು ಆರಾಧಿಸಿದರು. ಎಲ್ಲರೂ ಒಕ್ಕೊರಲಿ ನಿಂದ "ನಮ್ಮ ದೇವರೇ, ಇಂದು ನಮ್ಮ ಶತ್ರುಗಳನ್ನು ದಮನ ಮಾಡಿದ ನಿಮಗೆ ಸ್ತುತಿಯಾಗಲಿ!" ಎಂದು ಫೋಷಿಸಿದರು.
17 : ನನ್ನ ಕಾರ್ಯ ಕೈಗೂಡುವಂತೆ ಮಾಡಿದ ಆ ಸರ್ವೇಶ್ವರನಿಗೆ ಸ್ತೋತ್ರ! ನನ್ನ ಸೌಂದರ್ಯದಿಂದ ಹುಚ್ಚುಹಿಡಿದಂತಾದ ಅವನು ತನ್ನ ಗುಳಿಯಲ್ಲೇ ಬಿದ್ದನು. ಆದರೆ ಅವನು ನನ್ನನ್ನು ಮುಟ್ಟಲಿಲ್ಲ, ಕೆಡಿಸಿ ಅವಮಾನಗೊಳಿಸಲಿಲ್ಲ,” ಎಂದಳು. “ಭೂಲೋಕದ ಎಲ್ಲಾ ನಾರೀಮಣಿ ಗಳಿಗಿಂತ ಮಿಗಿಲಾಗಿ, ಮಗಳೇ, ಆಶೀರ್ವದಿಸಲಿ ದೇವನು ನಿನ್ನನ್ನು ಉನ್ನತದಿಂದಲೇ. ಸ್ತುತಿಸಲ್ಲಲಿ ಭೂಪರಗಳ ಸೃಷ್ಟಿಕರ್ತ ಸರ್ವೇಶ್ವರನಿಗೆ ಶತ್ರುಗಳ ಮುಂದಾಳಿನ ಶಿರಚ್ಛೇದನ ಮಾಡಲು ದಾರಿತೋರಿದಾತನಿಗೆ !
18 : ಆಗ ಉಜ್ಜೀಯನು ಜೂಡಿತಳನ್ನು ಉದ್ದೇಶಿಸಿ ಹೀಗೆಂದನು: “ಭೂಲೋಕದ ಎಲ್ಲಾ ನಾರೀಮಣಿ ಗಳಿಗಿಂತ ಮಿಗಿಲಾಗಿ, ಮಗಳೇ, ಆಶೀರ್ವದಿಸಲಿ ದೇವನು ನಿನ್ನನ್ನು ಉನ್ನತದಿಂದಲೇ. ಸ್ತುತಿಸಲ್ಲಲಿ ಭೂಪರಗಳ ಸೃಷ್ಟಿಕರ್ತ ಸರ್ವೇಶ್ವರನಿಗೆ ಶತ್ರುಗಳ ಮುಂದಾಳಿನ ಶಿರಚ್ಛೇದನ ಮಾಡಲು ದಾರಿತೋರಿದಾತನಿಗೆ !
19 : ಸದಾ ಸ್ಮರಿಸಿಕೊಳ್ಳುವರು ಜನರು ದೇವರ ಶಕ್ತಿ ಸಾಮಥ್ರ್ಯವನು ಮರೆಯವು ಮಾನವ ಹೃನ್ಮನಗಳು ನೀ ತೋರಿದ ಶ್ರದ್ಧೆಯನು. ಲಭಿಸಲಿ ನಿನಗೆ ಕೃಪಾವರಗಳು, ಸಲ್ಲಲಿ ಘನತೆಗೌರವಗಳು ಇದನು ದಯಪಾಲಿಸಲಿ ಆ ದೇವನು. ನನ್ನ ನಾಡು ಶತ್ರುವಿಗೆ ಶರಣಾಗಲಿದ್ದ ಕಾಲಕ್ಕೆ ಲೆಕ್ಕಿಸಲಿಲ್ಲ ನೀನು ನಿನ್ನ ಪ್ರಾಣ ರಕ್ಷಣೆಯನೇ! ವಿನಾಶದಿಂದ ನಮ್ಮನು ಕಾಪಾಡಿದೆ ದೇವನ ಮುಂದೆ ಸನ್ಮಾರ್ಗದಲೆ ನಡೆದೆ.” ಆಗ ಜನರು ‘ಆಮೆನ್’, ‘ಆಮೆನ್’ ಎಂದರು.

· © 2017 kannadacatholicbible.org Privacy Policy